ಬೆಂಗಳೂರು,ಜುಲೈ,12,2022(www.justkannada.in): ನಟ ದಿವಂಗತ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಿಧನರಾಗಿ ಹಲವು ತಿಂಗಳು ಕಳೆದಿದ್ದು ಅವರ ನೆನಪು ಅಭಿಮಾನಿಗಳ ಮನದಲ್ಲಿ ಇನ್ನೂ ಕಾಡುತ್ತಿದೆ. ಈ ಮಧ್ಯೆ ಈ ಬಾರಿ ಲಾಲ್ ಬಾಗ್ ನಲ್ಲಿ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಹೆಸರಿನಲ್ಲಿ `ಫ್ಲವರ್ ಶೋ’ ನಡೆಯಲಿದೆ.
ಈ ಬಗ್ಗೆ ಮಾಹಿತಿ ನೀಡಿರುವ ತೋಟಗಾರಿಕೆ ಸಚಿವ ಮುನಿರತ್ನ, ಲಾಲ್ ಬಾಗ್ ನ ಸಸ್ಯಶಾಸ್ತ್ರೀಯ ಉದ್ಯಾನದಲ್ಲಿ ಅತ್ಯಂತ ಜನಪ್ರಿಯತೆ ಗಳಿಸಿದ್ದ ಪುಷ್ಪ ಪ್ರದರ್ಶನ ನಡೆಯಲಿದ್ದು, ಈ ಫ್ಲವರ್ ಶೋವನ್ನ ನಟ ದಿ. ಪುನೀತ್ ರಾಜ್ ಕುಮಾರ್ ಹೆಸರಿನಲ್ಲಿ ಆಯೋಜಿಸಲಾಗುವುದು ಎಂದಿದ್ದಾರೆ.
ಈ ವರ್ಷ ಆಗಸ್ಟ್ 5 ರಿಂದ ಆಗಸ್ಟ್ 15 ರವರೆಗೆ ಫ್ಲವರ್ ಶೋ ನಡೆಯಲಿದೆ. ಆಗಸ್ಟ್ 5 ರಂದು ಸಿಎಂ ಬಸವರಾಜ ಬೊಮ್ಮಾಯಿ ಅವರು ಫ್ಲವರ್ ಶೋ ಉದ್ಘಾಟಿಸಲಿದ್ದು, ಈ ಬಾರಿಯ ಫ್ಲವರ್ ಶೋ ನಲ್ಲಿ ಡಾ. ರಾಜಕುಮಾರ್ ಅವರ ಗಾಜನೂರಿನ ಮನೆಗೆ ವಿಶೇಷ ಅಲಂಕಾರ ಮಾಡಲಾಗುತ್ತದೆ ಎಂದು ಮಾಹಿತಿ ನೀಡಿದರು.
ಅಲ್ಲದೆ ರಾಜ್ಯದಲ್ಲಿ ಕೊರೊನಾ ಏರಿಳಿತ ಕಂಡು ಬಂದಿದ್ದು ಈ ಹಿನ್ನೆಲೆಯಲ್ಲಿ ಫ್ಲವರ್ ಶೋ ವೇಳೆ ಕೋವಿಡ್ ನಿಯಮಗಳ ಪಾಲನೆಯು ಕಡ್ಡಾಯವಾಗಿರುತ್ತದೆ ಎಂದು ಸಚಿವ ಮುನಿರತ್ನ ತಿಳಿಸಿದ್ದಾರೆ.
ಇನ್ನು ಮಳೆಯಿಂದ ತೋಟಗಾರಿಕೆ ಬೆಳೆ ನಷ್ಟ ಆಗುತ್ತಿರುವ ಬಗ್ಗೆ ಪ್ರತಿಕ್ರಿಯೆ ನೀಡಿದ ಸಚಿವ ಮುನಿರತ್ನ, ಅಧಿಕಾರಿಗಳು ಬೆಳೆ ಹಾನಿ ಬಗ್ಗೆ ಸಂಪೂರ್ಣ ವರದಿ ತರಿಸುತ್ತಿದ್ದಾರೆ. ವರದಿ ಬಳಿಕ ರೈತರಿಗೆ ಮಾಡಬೇಕಿರುವ ಸಹಾಯವನ್ನು ಖಂಡಿತವಾಗಿಯೂ ಮಾಡುತ್ತೇವೆ. ಏನೇನು ನಷ್ಟ ಉಂಟಾಗಿದೆಯೋ ಅದನ್ನು ಗಮನಿಸುತ್ತೇವೆ. ಪ್ರಾಮಾಣಿಕವಾಗಿ ನಾವು ರೈತರ ಜೊತೆ ಇದ್ದೇವೆ ಎಂದು ಹೇಳಿದರು.
Key words: Lal Bagh-Flower show – actor- Punith Rajkumar
ENGLISH SUMMARY…
I-Day flower show at Lalbagh based on Late actor Puneeth Rajkumar’s theme
Bengaluru, July 12, 2022 (www.justkannada.in): Sandalwood’s favourite actor Puneeth Rajkumar passed away a few months ago. However, his fans are yet to digest this news even today. In the meantime the Horticulture Department has decided or organize this year’s Independence Day flower show at Lalbagh based on Puneeth Rakumar’s theme.
Providing this information, Horticulture Minister Muniratna informed that the flower show organized every year on Republic Day and Independence Day has gained wide popularity and this year’s flower show would be organized based on the theme the Late Dr. Puneeth Rajkumar.
The flower show this time will be held from August 5 to 15. The show will inaugurated by Chief Minister Basavaraj S. Bommai. The residence of the later actor Dr. Rajkumar, at Gajanuru will be decorated specially this year.
Visitors will have to follow COVID precautionary measures as the pandemic is still playing hide and seek, the Minister informed.
Keywords: Horticulture Minister Muniratna/ Flower Show/ Lalbagh/ Puneeth Rajkumar