ಮೈಸೂರು,ಏಪ್ರಿಲ್,12,2021(www.justkannada.in) : ಲಲಿತಮಹಲ್ ಅರಮನೆ ಬಳಿ ಮರ ಕಡಿದು ಹೆಲಿಪ್ಯಾಡ್ ನಿರ್ಮಿಸುವ ಅಗತ್ಯವಿಲ್ಲ. ಪಕ್ಕದಲ್ಲೇ ಇರುವಂತಹ ಮಹಾರಾಣಿ ಅವರಿಗೆ ಸೇರಿದಂತಹ ಹೆಲಿಪ್ಯಾಡ್ ಅನ್ನು ಲೀಸ್ ಅಥವಾ ಬಾಡಿಗೆಗೆ ತೆಗೆದುಕೊಳ್ಳಬಹುದು ಎಂದು ಸಂಸದ ಪ್ರತಾಪ್ ಸಿಂಹ ತಿಳಿಸಿದ್ದಾರೆ.ಈ ಕುರಿತು ಟ್ವೀಟ್ ಮಾಡಿರುವ ಅವರು, ಹೆಲಿಪ್ಯಾಡ್ ನಿರ್ಮಾಣಕ್ಕೆ ಬೇಕಿದ್ದರೆ ಮೈಸೂರು ವಿಮಾನ ನಿಲ್ದಾಣವನ್ನು ಬಳಸಿಕೊಳ್ಳಬಹುದು. ಯಾವುದೇ ಕಾರಣಕ್ಕೂ ಮರ ಕಡಿಯಬಾರದು. ಇಲ್ಲಿ ಹೊಸದಾಗಿ ಹೆಲಿಪ್ಯಾಡ್ ನಿರ್ಮಾಣ ಮಾಡುವ ಅಗತ್ಯವಿಲ್ಲ ಎಂದಿದ್ದಾರೆ.ಅರಣ್ಯ ಇಲಾಖೆಯವರು ಯಾವುದೇ ಕಾರಣಕ್ಕೂ Feeling Permit ಅನ್ನು ಕೊಡಬಾರದೆಂದು ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದು ತಿಳಿಸಿದ್ದಾರೆ.
key words : Lalitamahal Palace-Near-Cut down-tree-Helipad-Build-No need-MP-Pratap simha-NOTE