ವಿಧಾನಪರಿಷತ್ ನಲ್ಲಿ ಭೂಸುಧಾರಣಾ ತಿದ್ದುಪಡಿ ಕಾಯ್ದೆ ಅಂಗೀಕಾರ…

ಬೆಂಗಳೂರು,ಡಿಸೆಂಬರ್,8,2020(www.justkannada.in): ರಾಜ್ಯ ಸರ್ಕಾರದ ಭೂಸುಧಾರಣಾ ತಿದ್ದುಪಡಿ ಕಾಯ್ದೆಯನ್ನ ವಿಧಾನಪರಿಷತ್ ನಲ್ಲಿ ಅಂಗೀಕರಿಸಲಾಗಿದೆ.logo-justkannada-mysore

ಜೆಡಿಎಸ್ ಬೆಂಬಲದೊಂದಿಗೆ ವಿಧಾನಪರಿಷತ್ ನಲ್ಲಿ ಭೂ ಸುಧಾರಣಾ ತಿದ್ದುಪಡಿ ವಿಧೇಯಕವನ್ನ ಅಂಗೀಕಾರ ಮಾಡಲಾಗಿದೆ. ವಿಧೇಯಕ ಪರ 37 ಮತಗಳು ಮತ್ತು ವಿರುದ್ಧವಾಗಿ 21 ಮತಗಳು ಚಲಾವಣೆಯಾಗಿದ್ದು, ಈ ಮೂಲಕ ವಿಧಾನಪರಿಷತ್ ನಲ್ಲಿ ಭೂ ಸುಧಾರಣಾ ತಿದ್ದುಪಡಿ ವಿಧೇಯಕವನ್ನ ಪಾಸ್ ಮಾಡಲಾಗಿದೆ. ವಿಧಾನಸಭೆಯಲ್ಲಿ ಅಂಗೀಕರಿಸಲ್ಪಟ್ಟಿದ್ದ ಭೂ ಸುಧಾರಣಾ ತಿದ್ದುಪಡಿ ಕಾಯ್ದೆ ವಿಧಾನ ಪರಿಷತ್ ನಲ್ಲಿಯೂ ಅಂಗೀಕರಿಸಲ್ಪಟ್ಟಿದೆ. ಈ ಮೂಲಕ ಕರ್ನಾಟಕದಲ್ಲಿ ಭೂ ಸುಧಾರಣಾ ತಿದ್ದುಪಡಿ ಕಾಯ್ದೆ ಅಂಗೀಕಾರವಾಗಿದೆ.

ಇನ್ನು ಭೂ ಸುಧಾರಣಾ ತಿದ್ದುಪಡಿ ಕಾಯ್ದೆಗೆ ಜೆಡಿಎಸ್ ಸದಸ್ಯರು ಬೆಂಬಲ ನೀಡಿದ ಹಿನ್ನೆಲೆ ಆಡಳಿತರೂಢ ಬಿಜೆಪಿ ಸದಸ್ಯರು ಮೇಜುಕುಟ್ಟಿ ಸ್ವಾಗತಿಸಿದರು. ಭೂಸುಧಾರಣಾ ತಿದ್ಧುಪಡಿ ಕಾಯ್ದೆಗೆ ವಿರೋಧ ವ್ಯಕ್ತವಾದ ಹಿನ್ನೆಲೆ ಸಭಾಪತಿ ಮತಕ್ಕೆ ಹಾಕಿದ್ದರು. ಈ ಕಾಯ್ದೆ ಅಂಗೀಕಾರಕ್ಕೆ ಬಿಜೆಪಿಗೆ ಜೆಡಿಎಸ್ ಬೆಂಬಲದೊಂದಿಗೆ 37 ಮತಗಳು ಕಾಯ್ದೆ ಅಂಗೀಕಾರದ ಪರವಾಗಿ ಚಲಾವಣೆಗೊಂಡವು. ಕಾಯ್ದೆಯ ವಿರೋಧವಾಗಿ 21 ಮತಗಳ ಚಲಾವಣೆಗೊಂಡವು.

Key words: Land Acquisition Amendment Act- Acceptance-lagislative council