ಗದಗ,ಫೆ,12,2020(www.justkannada.in): ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಮತ್ತು ಮಾಜಿ ಸಚಿವ ಡಿ.ಸಿ ತಮಣ್ಣ ಕುಟುಂಬದ ವಿರುದ್ದ ಭೂಕಬಳಿಕೆ ಆರೋಪ ಕೇಳಿ ಬಂದಿದೆ.
ಸಮಾಜ ಪರಿವರ್ತನಾ ಸಮುದಾಯ ಮುಖ್ಯಸ್ಥ ಎಸ್.ಆರ್ ಹಿರೇಮಠ್ ಈ ಆರೋಪ ಮಾಡಿದ್ದಾರೆ. ಹೆಚ್.ಡಿ ಕುಮಾರಸ್ವಾಮಿ, ಹೆಚ್.ಡಿ ದೇವೇಗೌಡ ಪತ್ನಿ ಸಹೋದರಿ ಸಾವಿತ್ರಮ್ಮ ವಿರುದ್ದ 54 ಎಕರೆ ಸರ್ಕಾರಿ ಗೋಮಾಳ ಜಮೀನು ಕಬಳಿಕೆ ಮಾಡಿದ್ದಾರೆಂದು ಆರೋಪಿಸಿದ್ದಾರೆ. ಹಾಗೆಯೇ ಮಾಜಿ ಸಚಿವ ಡಿಸಿ ತಮಣ್ಣ ಪತ್ನಿ ಪ್ರಮೀಳ, ಸೋದರ ನಂಜುಂಡಯ್ಯ ವಿರುದ್ದವೂ ಭೂಕಬಳಿಕೆ ಮಾಡಿದ್ದಾರೆಂದು ಆರೋಪಿಸಿದ್ದಾರೆ.
ಈ ಕುರಿತು ಮಾತನಾಡಿರುವ ಎಸ್. ಆರ್ ಹಿರೇಮಠ್, ರಾಮನಗರ ತಾಲೂಕಿನ ಬಿಡದಿ ಹೋಬಳಿ ಕೇತಿಗಾನಹಳ್ಳಿ ಗ್ರಾಮದ 110 ಎಕರೆ ಗೋಮಾಳ ಸೇರಿದಂತೆ 200 ಎಕರೆ ಜಮೀನನ್ನು ಕಬಳಿಸಿದ್ದಾರೆ. ಅತಿಕ್ರಮಣ ಮಾಡಿದ್ದಾರೆ. ಈ ಕುರಿತು 2019 ಅಕ್ಟೋಬರ್ 23 ರಂದು ಕೇಸ್ ಹಾಕಿದ್ದವು. ಈ ಸಂಬಂಧ ಭೂಕಬಳಿಕೆದಾರರು ಸಹಕರಿಸಿರುವ ಅಧಿಕಾರಿಗಳ ವಿರುದ್ದ ಕ್ರಿಮಿನಲ್ ಕೇಸ್ ದಾಖಲಿಸುವಂತೆ ಹೈಕೋರ್ಟ್ ಆದೇಶ ನೀಡಿದೆ. ಭೂಮಿ ವಶಕ್ಕೆ ಪಡೆದು ಕ್ರಿಮಿನಲ್ ಕೇಸ್ ಹಾಕುವಂತೆ ಜನವರಿ 14 ರಂದೇ ಕೋರ್ಟ್ ಆದೇಶಿಸಿದೆ ಎಂದು ಹೇಳಿದರು.
Key words: Land – allegation- against –HD kumaraswamy- DC Tamanna family- SR Hiremath.