ಮೈಸೂರು,ಅಕ್ಟೋಬರ್,30,2020(www.justkannada.in): ಮೈಸೂರಿಗೆ ಬರುವ ನಾಲ್ಕು ಹೆದ್ದಾರಿಗಳ ಬದಿಯಲ್ಲಿ ಕೊರೋನಾ ಮತ್ತು ಬಡವರ ಹೆಸರಿನಲ್ಲಿ ಸಂಪೂರ್ಣ ಸರ್ಕಾರಿ ಜಾಗ ಭೂ ಕಬಳಿಕೆಯಾಗಿದ್ದು ಭೂಕಬಳಿಕೆ ಮಾಡುವವರ ಬಗ್ಗೆ ಕ್ರಮ ಕೈಗೊಳ್ಳುವಂತೆ ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರಿಗೆ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆ, (FKCCI) ಮಾಜಿ ಅಧ್ಯಕ್ಷರಾದ ಸುಧಾಕರ್ ಎಸ್ ಶೆಟ್ಟಿ ಮನವಿ ಮಾಡಿದ್ದಾರೆ.
ಈ ಕುರಿತು ಮೈಸೂರು ಡಿಸಿಗೆ ಪತ್ರ ಬರೆದಿರುವ ಸುಧಾಕರ್ ಎಸ್ ಶೆಟ್ಟಿ, ಬನ್ನೂರಿನಿಂದ ದೇವೇಗೌಡ ಸರ್ಕಲ್ಲಿನವರೆಗೆ, ನಂಜನಗೂಡಿನಿಂದ ಗಣಪತಿ ಸಚ್ಚಿದಾನಂದ ಆಶ್ರಮದವರೆಗೆ, ಶ್ರೀರಂಗಪಟ್ಟಣದಿಂದ ಟಿಪ್ಪು ಸರ್ಕಾಲ್ ವರೆಗೆ ಹಾಗೂ ಹುಣಸೂರು ರಸ್ತೆಯಲ್ಲಿ ಇಲವಾಲದಿಂದ ಇನಕಲ್ ರಸ್ತೆಯವರೆಗೆ ಸಂಪೂರ್ಣ ಸರ್ಕಾರಿ ಜಾಗಗಳು ಭೂ ಕಬಳಿಕೆಯಾಗಿರುವುದು ಖಚಿತವಾಗಿದೆ. ಮೈಸೂರಿಗೆ ಬರುವ ನಾಲ್ಕು ಹೆದ್ದಾರಿಗಳ ಬದಿಯಲ್ಲಿ ಕೊರೋನಾ ಮತ್ತು ಬಡವರ ಹೆಸರಿನಲ್ಲಿ ಭೂ ಕಬಳಿಕೆ ಮಾಡುವವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ.
ಮೈಸೂರು ನಗರವು ಪ್ರವಾಸಿಗರ ಸ್ವರ್ಗವೆಂದು ವಿಶ್ವ ಪ್ರಖ್ಯಾತಿಯಾಗಿದ್ದು ಹಾಗು ಕೈಗಾರಿಕೆಗಳಿಗು ಪ್ರಶಸ್ತವಾಗಿದ್ದು ಪ್ರವಾಸಿಗರಿಗೆ ಸ್ವರ್ಗವೆನಿಸುವ ತಾಣವಾಗಿದೆ. ಮೈಸೂರು ನಗರ ಸ್ವಚ್ಛನಗರ ಎನ್ನುವ ಹಿರಿಮೆಯನ್ನು ಹೊಂದಿದೆ. (2015 ಮತ್ತು 2016 ರ ರಲ್ಲಿ ನಮ್ಮ ಮೈಸೂರು ದೇಶದ ಮೊದಲ ಸ್ವಚ್ಛನಗರ ಎಂಬ ಬಿರುದನ್ನು ಪಡೆದಿತ್ತು. ಆದರೆ ಕಳೆದ ಒಂದು ವರ್ಷದಿಂದ ಕೊರೋನಾ ವೈರಾಣು ಪ್ರಪಂಚದ ಮೇಲೆ ದಾಳಿಯಿಟ್ಟಾಗ ಅದರಲ್ಲು ಭಾರತ ದೇಶದ ಕರ್ನಾಟಕ ರಾಜ್ಯದ ಮೈಸೂರು ಜಿಲ್ಲೆಗೆ ಕೊರೋನಾ ವೈರಸ್ ಹೆಚ್ಚಿನ ರೀತಿಯಲ್ಲಿ ಪ್ರಭಾವ ಬೀರಿದೆ. ಈ ಸಮಯದಲ್ಲಿ ಜಿಲ್ಲಾಡಳಿತವು, ಪೋಲೀಸ್ ಇಲಾಖೆಯು, ಕಂದಾಯ ಇಲಾಖೆಯು ಸಂಪೂರ್ಣವಾಗಿ ತನ್ನ ಅಧಿಕಾರಿ ವರ್ಗವನ್ನು ನೇಮಿಸಿ ಕೊರೊನ ವಿರುದ್ಧ ಸಮರ ಸಾರುವಲ್ಲಿ ಯಶಸ್ವಿಯಾಗಿದ್ದಾರೆ.
ಇದೆ ಸಮಯವನ್ನು ಉಪಯೋಗಿಸಿಕೊಂಡ ಹಲವಾರು ವ್ಯಕ್ತಿಗಳು ಬನ್ನೂರಿನಿಂದ ದೇವೇಗೌಡ ಸರ್ಕಲ್ಲಿನವರೆಗೆ, ಮೈಸೂರು ಬೆಂಗಳೂರು ರಸ್ತೆಯ ಶ್ರೀರಂಗಪಟ್ಟಣದಿಂದ ಮೈಸೂರಿಗೆ ಬರುವ ಹೆದ್ದಾರಿಯ ಎರಡು ಬದಿಗಳನ್ನು ಬಡತನ ಅಥವಾ ಫುಟ್ ಪಾತ್ ವೆಂಡರ್ಗಳ ಹೆಸರಿನಲ್ಲಿ ಅಂಗಡಿ ಮಳಿಗೆಗಳನ್ನು ಸ್ಥಾಪಿಸಿ ಆ ಅಂಗಡಿ ಮಳಿಗೆಗಳಲ್ಲಿ ಅನೈತಿಕ ಚಟುವಟಿಕೆ, ಮದ್ಯವ್ಯಸನಿಗಳ ತಾಣ ಹಾಗೂ ಡ್ರಗ್ಸ್ಗಳನ್ನು ಸರಬರಾಜು ಮಾಡುವುದು ಇದೆಲ್ಲದಕ್ಕಿಂತ ಗೂಂಡಾಗಳಿಗೆ ಕೂತು ರಸ್ತೆಯಲ್ಲಿ ಹೋಗುವವರ ಚಲನವಲನವನ್ನು ವೀಕ್ಷಿಸಲು ರಸ್ತೆ ಬದಿಯ ಅಂಗಡಿಗಳು ಪ್ರಮುಖ ಪಾತ್ರ ವಹಿಸಿದೆ.
ಅದರಲ್ಲೂ ಬನ್ನೂರಿನಿಂದ ದೇವೇಗೌಡ ಸರ್ಕಲ್ಲಿನವರೆಗೆ, ನಂಜನಗೂಡಿನಿಂದ ಗಣಪತಿ ಸಚ್ಚಿದಾನಂದ ಆಶ್ರಮದವರೆಗೆ, ಶ್ರೀರಂಗಪಟ್ಟಣದಿಂದ ಟಿಪ್ಪು ಸರ್ಕಾಲ್ ವರೆಗೆ ಹಾಗೂ ಹುಣಸೂರು ರಸ್ತೆಯಲ್ಲಿ ಇಲವಾಲದಿಂದ ಇನಕಲ್ ರಸ್ತೆಯವರೆಗೆ ಸಂಪೂರ್ಣ ಸರ್ಕಾರಿ ಜಾಗಗಳು ಭೂ ಕಬಳಿಕೆಯಾಗಿರುವುದು ಖಚಿತವಾಗಿದೆ.
ಹೀಗಾಗಿ ಪೋಲೀಸ್ ಇಲಾಖೆ, ನಗರಾಭಿವೃದ್ಧಿ ಇಲಾಖೆ, ಜಿಲ್ಲಾಡಳಿತ, ಕಂದಾಯ ಇಲಾಖೆ, ಹೈವೆ ಮತ್ತು ಲೋಕೋಪಯೋಗಿ ಇಲಾಖೆ ಇಷ್ಟು ಇಲಾಖೆಗಳು ಸಂಪೂರ್ಣ ಮೌನವಹಿಸಿದ್ದು ಮತ್ತೊಮ್ಮೆ ಏನಾದರು ಕಾರ್ಯಾರಂಭ ಮಾಡಬೇಕಾದರೆ ಸಮರದ ರೀತಿಯಲ್ಲಿ ಯದ್ಧ ಸಾರಬೇಕಾಗುತ್ತದೆ. ಆದ್ದರಿಂದ ಈ ದುಷ್ಟ ಚಟುವಟಿಗಳ ತಾಣವಾಗಿರುವ ರಸ್ತೆ ಬದಿಯ ಅಂಗಡಿಗಳನ್ನು ತೆರವುಗೊಳಿಸಿ ಸ್ವಚ್ಛನಗರದ ಅಭಿವೃದ್ಧಿಗೆ ಅನುಕೂಲ ಮಾಡಿಕೊಟ್ಟರೇ ನಿಮ್ಮ ಕರ್ತವ್ಯಕ್ಕೆ ಶ್ಲಾಘನೀಯ ಬರುವುದು ಆದ್ದರಿಂದ ಬೇಗೆನೆ ತೆರವುಗೊಳಿಸಿ ಎಂದು ಸುಧಾಕರ್ ಎಸ್ ಶೆಟ್ಟಿ ಮನವಿ ಮಾಡಿದ್ದಾರೆ.
Key words: Land four gates- Mysore– FKCCI- former president- Sudhakar S Shetty-appeals -DC