ಮೈಸೂರು,ಜೂನ್,12,2021(www.justkannada.in): ಮುಡಾದಲ್ಲಿ ನೂರಾರು ಕೋಟಿ ಹಗರಣ ಆಗಿದೆ. ಹೀಗಾಗಿ ಮುಡಾ ಅಧ್ಯಕ್ಷ ರಾಜೀವ್ ರಾಜೀನಾಮೆ ನೀಡಬೇಕು ಎಂದು ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಜಾಗೃತ ವೇದಿಕೆ ಅಧ್ಯಕ್ಷ ಕೆ ಎಸ್ ಶಿವರಾಮ್ ಆಗ್ರಹಿಸಿದರು.
ಮೈಸೂರಿನ ಭೂ ಹಗರಣ ವಿಚಾರಕ್ಕೆ ಸಂಬಂಧಿಸಿದಂತೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಜಾಗೃತ ವೇದಿಕೆ ಅಧ್ಯಕ್ಷ ಕೆ ಎಸ್ ಶಿವರಾಮ್, ರಾಜೀವ್ ಅವರ ಮೇಲೂ ಕೂಡ ಭೂಹಗರಣ ಆರೋಪ ಬಂದಿದೆ. ಅವರ ಆರೋಪ ಮುಕ್ತರಾಗುವವರೆಗೂ ರಾಜೀನಾಮೆ ನೀಡಬೇಕು. ಮೂಡ ಆಯುಕ್ತರ ಮೇಲೆ ಭ್ರಷ್ಟಾಚಾರದ ಆರೋಪ ಕೇಳಿಬರುತ್ತಿದೆ. ಅವರನ್ನು ಅಮಾನತು ಮಾಡಬೇಕು. ಈ ಬಗ್ಗೆ ಸಮಗ್ರ ತನಿಖೆ ಆಗಬೇಕು. ಸರ್ಕಾರದಿಂದ ಹೊಸ ತನಿಖಾ ತಂಡ ರಚನೆ ಮಾಡಬೇಕು ಎಂದು ತಿಳಿಸಿದರು.
ಆರ್ ಸಿ ಅವರ ತನಿಖೆ ಮೇಲೆ ನಮಗೆ ನಂಬಿಕೆ ಇಲ್ಲ. ಸಾ ರಾ ಮಹೇಶ್ ತಮ್ಮ ಮೇಲಿನ ಆರೋಪಕ್ಕೆ ಸಾರ್ವಜನಿಕವಾಗಿ ದಾಖಲೆ ಬಿಡುಗಡೆ ಮಾಡಲಿ. ಸಾರಾ ಮಹೇಶ್ ಅವರು ಸರ್ವೆ ಮಾಡ್ಸಿ ಅಂತ ಪ್ರತಿಭಟನೆ ಮಾಡಿದ ತಕ್ಷಣ ಸರ್ವೆ ಮಾಡಿಸುತ್ತೀರಿ. ಅಕ್ಕಪಕ್ಕದವರಿಗೆ ಸರ್ವೆ ಮಾಡಲು ನೋಟಿಸ್ ನೀಡಿದ್ದೀರಾ..? ಮೈಸೂರಿನಲ್ಲಿ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ಜೊತೆ ವಾಗ್ವಾದ ನೋಡುತ್ತಿದ್ದಾರೆ. ಸಾರ್ವಜನಿಕ ರನ್ನು ಬಫೂನ್ ಗಳನ್ನಾಗಿ ಮಾಡಿದ್ದಾರೆ. ಭೂ ಅಕ್ರಮದ ಬಗ್ಗೆ ಚರ್ಚೆ ಅಗ್ತಾ ಇದೆ. ಅಷ್ಟೇ ತನಿಖೆ ಆಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಸರ್ಕಾರ ಪ್ರಾಮಾಣಿಕವಾಗಿ ತನಿಖೆ ಮಾಡಬೇಕು. ಯಾರೇ ಮಂತ್ರಿ ಆಗಿರಲಿ ಅವರ ಮೇಲೆ ಕ್ರಮ ಆಗಬೇಕು. ಭೂಮಿ ಕದ್ದವರು ಸಾಚ ಅಂತಾ ಹೇಳ್ತಾ ಇದ್ದಾರೆ. ಮೈಸೂರನ್ನು ಭೂ ಗಳ್ಳರಿಂದ ಮೈಸೂರನ್ನು ರಕ್ಷಸಿ ಅಂತಾ ಹೋರಾಟ ಮಾಡುತ್ತೇನೆ. ನಾವು ಯಾವ ಅಧಿಕಾರಿಗಳ ಪರ ಆಲ್ಲ. ಸಾ ರಾ ಚೌಲ್ಟ್ರಿಯ ಪ್ರಮುಖ ದಾಖಲೆಗಳನ್ನು ಬಿಡುಗಡೆ ಮಾಡಿ. ನಿಮ್ಮ ಶ್ರೀಮತಿಯವರಿಗೆ ಈ ಆಸ್ತಿ ಬಂದಿರುವ ಮೂಲ ತಿಳಿಸಿ.ಈ ಜಾಗ ನಿವೇಶನ ಮಾಡಲಿಕ್ಕೆ ತೆಗದುಕೊಂಡಿದ್ರಿ. ಈಗ ವಾಣಿಜ್ಯ ಬಳಕೆಗೆ ಬಳಸಿಕೊಂಡಿದ್ದೀರ. ಇದು ಅಕ್ರಮ ಅಲ್ವಾ ಎಂದು ಶಿವರಾಂ ಪ್ರಶ್ನಿಸಿದರು.
ಒಂದು ಮುಡಾ ಸಭೆಯಲ್ಲಿ 500 ಪೈಲ್ ಕ್ರೀಯರ್ ಆಗುತ್ತೆ. ಮುಡಾದಲ್ಲಿ ನೂರಾರು ಕೋಟಿ ಹಗರಣ ಆಗಿದೆ ಎಂದು ಶಿವರಾಂ ಅರೋಪಿಸಿದರು.
Key words: Land scam –issue-KS Shivaram -demands -resignation – Muda president -Rajiv