ಮೈಸೂರು, ನವೆಂಬರ್ 09, 2021 (www.justkannada.in): ಚಾಮುಂಡಿಬೆಟ್ಟದಲ್ಲಿ ರಸ್ತೆ ಕುಸಿತ ಮುಂದುವರಿದೆ.
ನಿರಂತರ ಮಳೆಯಿಂದಾಗಿ ಕುಸಿತವಾಗುತ್ತಿದ್ದು, ನಂದಿ ಮಾರ್ಗದ ರಸ್ತೆ ದುರಸ್ಥಿಗೆ ಜಿಲ್ಲಾಡಳಿತ ಯಾವುದ ಕ್ರಮ ಕೈಗೊಂಡಿಲ್ಲ.
ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ ತಜ್ಞರ ಸಲಹೆಯಂತೆ ದುರಸ್ತಿ ಕಾರ್ಯ ಮಾಡಬೇಕಿದೆ. ಅ.20 ರಂದು ಸುರಿದ ಮಳೆಗೆ ಕುಸಿದಿದ್ದ ರಸ್ತೆಯ ದುರಸ್ತಿಗೆ ಅಧಿಕಾರಿಗಳು ಕ್ರಮ ವಹಿಸಬೇಕಿದೆ.
ದಿನೆ ದಿಬೇ ಕುಸಿತದ ಪ್ರಮಾಣ ಹೆಚ್ಚಾಗುತ್ತಿದೆ. ಹೀಗಾಗಿ ಆದಷ್ಟು ಬೇಗ ದುರಸ್ತೆ ಮಾಡದಿದ್ದರೆ ಮತ್ತಷ್ಟು ಕುಸಿತವಾಗುವ ಸಾಧ್ಯತೆ ಇದೆ. ಅತ್ಯಾಧುನಿಕ ತಂತ್ರಜ್ಞಾನ ಬಳಸಿ ದುರಸ್ತಿಗೆ ನಿರ್ಧಾರ ಮಾಡಬೇಕಿದೆ.
ಜಿಲ್ಲಾಡಳಿತ ತಜ್ಞರ ಭೇಟಿಗಾಗಿ ಕಾಯುತ್ತಿದ್ದು, ಶೀಘ್ರವಾಗಿ ದುರಸ್ಥಿ ಆಗದಿದ್ದರ ದೊಡ್ಡ ಕಂದಕ ಸೃಷ್ಟಿಯಾಗುವ ಸಾಧ್ಯತೆ.