ಉತ್ತರಪ್ರದೇಶ, ಫೆಬ್ರವರಿ 22, 2020 (www.justkannada.in): ಉತ್ತರಪ್ರದೇಶದ ಸೋನ್ ಭದ್ರಾ ಜಿಲ್ಲೆಯ ಸೋನ್ ಪಹಾಡಿ ಮತ್ತು ಹರದಿ ಪ್ರದೇಶದಲ್ಲಿ ಅತೀ ದೊಡ್ಡ ಚಿನ್ನದ ನಿಕ್ಷೇಪ ಪತ್ತೆಯಾಗಿದೆ.
ಹೌದು, ದೇಶದ ಅತಿ ದೊಡ್ಡ ಚಿನ್ನದ ನಿಕ್ಷೇಪವನ್ನು, ಭಾರತೀಯ ಭೂ ವಿಜ್ಞಾನ ಸರ್ವೇಕ್ಷಣಾ ಇಲಾಖೆ ವಿಜ್ಞಾನಿಗಳು ಅತೀ ದೊಡ್ಡ ಚಿನ್ನದ ನಿಕ್ಷೇಪವನ್ನು ಕಂಡು ಹಿಡಿದಿದ್ದಾರೆ.
ಭಾರತೀಯ ಭೂವಿಜ್ಞಾನನ ಸರ್ವೇಕ್ಷಣ ಇಲಾಖೆಯ ಭೂವಿಜ್ಞಾನಿಗಳು, ಸುಮಾರು 12 ಲಕ್ಷ ಕೋಟಿ ಮೊಲ್ಯದ ಮೂರು ಟನ್ ಚಿನ್ನದ ನಿಕ್ಷೇಪವನ್ನು ಉತ್ತರ ಪ್ರದೇಶದ ಸೋನ್ ಭದ್ರಾ ಜಿಲ್ಲೆಯ ಸೋನ್ ಪಹಾಡಿ ಮತ್ತು ಹರದಿ ಪ್ರದೇಶಗಳಲ್ಲಿ ಇರುವುದಾಗಿ ಪತ್ತೆ ಹಚ್ಚಿದ್ದಾರೆ.
ಸೋನ್ ಪಹಾಡಿಯಲ್ಲಿ ಅಂದಾಜು 2,943.26 ಟನ್ ಹಾಗೂ ಹರದಿ ಬ್ಲಾಕ್ ನಲ್ಲಿ 646.16 ಕೆಜಿಯಷ್ಟು ಚಿನ್ನ ನಿಕ್ಷೇಪದಲ್ಲಿ ಇರುವುದಾಗಿ ಅಂದಾಜಿಸಲಾಗಿದೆ.