ಬೀದರ್,ಏಪ್ರಿಲ್,10,2021(www.justkannada.in) : ಸಿಎಂ ತಮ್ಮ ಉದ್ಧಟತನ ಬಿಟ್ಟು ಸಾರಿಗೆ ನೌಕರರ ಮನವೊಲಿಸಬೇಕು. ಸಿಎಂ ಆಗಲಿ, ಸಚಿವರಾಗಲಿ ಯಾರು ಮೇಲಿಂದ ಇಳಿದು ಬಂದಿಲ್ಲ. ಯಾರಿಗೂ ಇದು ಶಾಶ್ವತವಲ್ಲ. ಇವರ ಉದ್ಧಟತನ, ನಡುವಳಿಕೆಗೆ ಮುಂದೆ ದೊಡ್ಡ ಪ್ರಾಯಶ್ಚಿತ್ತ ಅನುಭವಿಸುತ್ತಾರೆ. ಇಂಥದಕ್ಕೆಲ್ಲಾ ಅವಕಾಶ ಕೊಡಬಾರದು ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.ಬಸವಕಲ್ಯಾಣದಲ್ಲಿ ಸಿಎಂ ಬಿಎಸ್ ವೈ ವಿರುದ್ಧ ಮಾಜಿ ಸಿಎಂ ಕುಮಾರಸ್ವಾಮಿ ತೀವ್ರ ವಾಗ್ದಾಳಿ ನಡೆಸಿದ್ದು, ಸಾರಿಗೆ ನೌಕರರ ಮನವೊಲಿಸಿ ಸಾರ್ವಜನಿಕರಿಗೆ ಆಗುತ್ತಿರುವ ಅನಾನುಕೂಲಗಳನ್ನು ತಪ್ಪಿಸಬೇಕಿರುವುದು ಸರ್ಕಾರದ ಜವಾಬ್ದಾರಿ. ಸರ್ಕಾರ ಇರೋದು ಯಾಕೆ?, ಮುಷ್ಕರ 4ನೇಯ ದಿನಕೆ ಕಾಲಿಟ್ಟರು ಮಾತುಕತೆ ಕರೆಯಲ್ಲಾ ಅಂದರೆ, ಇವರು ಯಾಕೆ ವಿಧಾನಸೌಧದಲ್ಲಿ ಇರೋದು ಎಂದು ಪ್ರಶ್ನಿಸಿದ್ದಾರೆ.
ಖಜಾನೆ ಖಾಲಿಯಾಗಿಲ್ಲ, ಇವರು ಖಾಲಿ ಮಾಡುತ್ತಿದ್ದಾರೆ
ಖಜಾನೆ ಖಾಲಿಯಾಗಿಲ್ಲಾ, ಖಜಾನೆ ಇವರು ಖಾಲಿ ಮಾಡುತ್ತಿದ್ದಾರೆ. ಇದೇ ರೀತಿ ನಿಮ್ಮ ಉದ್ಧಟತನ ಮುಂದುವರೆದರೆ “ಬಿಜೆಪಿ ಮುಕ್ತ” ಆಗೋ ದಿನಗಳು ದೂರ ಇಲ್ಲಾ. ಈ ಉದ್ಧಟತನ ಬಿಟ್ಟು ಮೊದಲು ಸಾರಿಗೆ ನೌಕರ ಸಮಸ್ಯೆಗೆ ಸಿಎಂ, ಸಚಿವರು ಬಗೆಹರಿಸುವ ಕಡೆ ಗಮನ ಹರಿಸಬೇಕು ಎಂದು ಆಗ್ರಹಿಸಿದ್ದಾರೆ.
ನೈಟ್ ಕರ್ಪ್ಯೂ ಎಷ್ಟ ಮಟ್ಟಿಗೆ ಅನುಕೂಲವಾಗುತ್ತೋ, ಗೋತ್ತಿಲ್ಲ
7 ಜಿಲ್ಲೆಯ 8 ನಗರದಲ್ಲಿ ನೈಟ್ ಕರ್ಪ್ಯೂ ವಿಚಾರವಾಗಿ ಮಾತನಾಡಿ, ನೈಟ್ ಕರ್ಪ್ಯೂ ಎಷ್ಟ ಮಟ್ಟಿಗೆ ಅನುಕೂಲವಾಗುತ್ತೋ, ಗೋತ್ತಿಲ್ಲ. ಈ ನೈಟ್ ಕರ್ಪ್ಯೂ ಎಷ್ಟರ ಮಟ್ಟಿಗೆ ಸಫಲವಾಗುತ್ತೆ ಎನ್ನುವುದನ್ನು ಕಾದು ನೋಡೋಣ ಎಂದು ಅನುಮಾನವ್ಯಕ್ತಪಡಿಸಿದ್ದಾರೆ.
key words : lashes-Leave-Transportation-employees-Persuade-CM B.S.Y-opposite-Former CM-H.D.Kumaraswamy