ಮೈಸೂರು,ಜು,26,2019(www.justkannada.in): ಇಂದು ಕೊನೆಯ ಅಷಾಢ ಶುಕ್ರವಾರ ಹಿನ್ನಲೆ ಮೈಸೂರಿನ ಚಾಮುಂಡಿಬೆಟ್ಟದಲ್ಲಿ ಹಬ್ಬದ ಸಂಭ್ರಮ ಮನೆ ಮಾಡಿದ್ದು ಭಕ್ತಸಾಗರ ಹರಿದು ಬರುತ್ತಿದೆ. ಈ ನಡುಗೆ ತಾಯಿ ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಲಾಗಿದೆ.
ಚಾಮುಂಡೇಶ್ವರಿಗೆ ವಿಶೇಷ ಅಲಕಾಂರ ಮಾಡಲಾಗಿದ್ದು, ದುರ್ಗಾಲಂಕಾರದಲ್ಲಿ ಚಾಮುಂಡೇಶ್ವರಿ ತಾಯಿ ಕಂಗೊಳಿಸುತ್ತಿದ್ದಾಳೆ. ಮಾಧ್ಯಮಗಳ ಜತೆ ಮಾತನಾಡಿದ ಚಾಮುಂಡಿ ಬೆಟ್ಟದ ಪ್ರಧಾನ ಅರ್ಚಕ ಶಶಿಶೇಖರ್ ದಿಕ್ಷೀತ್, ಇಂದು ಚಾಮುಂಡೇಶ್ವರೆಗೆ ಬೆಳಿಗ್ಗೆ 3.30ರಿಂದಲೇ ವಿಶೇಷ ಪೂಜೆ ಸಲ್ಲಿಸಲಾಗಿದೆ. ರುದ್ರಾಭಿಷೇಕ, ಪಂಚಾಮೃತ ಅಭಿಷೇಕಾ, ವಿಶೇಷವಾಗಿ ದುರ್ಗಾ ಅಲಂಕಾರ ಮಾಡಲಾಗಿದೆ. ಸಂಜೆ 6ರಿಂದ 7.30ರವರೆಗೆ ಅಭಿಷೇಕ ಮಾಡಲಾಗಿತ್ತೆ. ಅಭಿಷೇಕದ ನಂತರ ಮತ್ತೆ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗುತ್ತದೆ ಎಂದು ತಿಳಿಸಿದರು.
Key words: Last Ashada- Friday- Special Worship –mysore- Chamundihills