ಬೆಂಗಳೂರು,ಫೆಬ್ರವರಿ,24,2023(www.justkannada.in): ರಾಜ್ಯ ವಿಧಾನಸಭೆ ಚುನಾವಣೆ ಹತ್ತಿರ ಬರುತ್ತಿದ್ದು ಈ ನಡುವೆ 14ನೇ ವಿಧಾನಸಭೆಯ ಕೊನೆಯ ಅಧಿವೇಶನಕ್ಕೆ ತೆರೆ ಬಿದ್ದಿತು.
15ನೇ ವಿಧಾನಸಭೆಯ ಬಜೆಟ್ ಅಧಿವೇಶನ ಇಂದು ಮುಕ್ತಾಯವಾಗಿದ್ದು ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಕಲಾಪವನ್ನ ಅನಿರ್ಧಿಷ್ಟಾವಧಿಗೆ ಮುಂದೂಡಿಕೆ ಮಾಡಿದರು.
15ನೇ ವಿಧಾನಸಭೆಯು ಒಟ್ಟು 167 ದಿನಗಳ ಕಾಲ ನಡೆದಿದೆ ಅಥವಾ 760 ಗಂಟೆಗಳ ಕಾಲ ನಡೆದಿದೆ. 15ನೇ ವಿಧಾನಸಭೆಯಲ್ಲಿ ಒಟ್ಟು 200 ವಿದೇಯಕಗಳು ಮಂಡನೆಯಾದವು. 6754 ಚುಕ್ಕೆ ಗುರುತಿನ ಪ್ರಶ್ನೆಗಳು 27 ಸಾವಿರ ಚುಕ್ಕಿ ರಹಿತ ಪ್ರಶ್ನೆಗಳು ಕೇಳಲಾಯಿತು. 15ನೇ ವಿಧಾನಸಭೆಯ 167 ದಿನವೂ ಶಾಸಕರಾದ ನಿಂಬಣ್ಣನವರ್, ಕೆಎಸ್ ಲಿಂಗೇಶ್ ಸದನಕ್ಕೆ ಹಾಜರಾಗಿದ್ದರು.
Key words: last- session – 15th Legislative –Assembly-end