ಮೈಸೂರು, ಜುಲೈ 04, 2023 (www.justkannada.in): ಮೈಸೂರಿನ ಸೆಂಟ್ರಲ್ ಫುಡ್ ಟೆಕ್ನಾಲಾಜಿಕಲ್ ರಿಸರ್ಚ್ ಇನ್ಸ್ಟಿಟ್ಯೂಟ್ ಇಂದು ಮೂರು ಉತ್ಪನ್ನಗಳನ್ನು ಬಿಡುಗಡೆ ಮಾಡಿದೆ.
ಪುಷ್ಟೀಕರಿಸಿದ ಫೈಬರ್ ರಸ್ಕ್, ಮಸಾಲೆ ಬ್ರೆಡ್(ಸ್ಪೈಸ್ ಬ್ರೆಡ್) ಹಾಗೂ ಗ್ಲುಟನ್-ಫ್ರೀ ಕೇಕ್ ಮಿಕ್ಸ್ ಈ ಮೂರು ಉತ್ಪನ್ನಗಳನ್ನು ಮೈಸೂರಿನ ಸೆಂಟ್ರಲ್ ಫುಡ್ ಟೆಕ್ನಾಲಾಜಿಕಲ್ ರಿಸರ್ಚ್ ಇನ್ಸ್ಟಿಟ್ಯೂಟ್ ಇಂದು ಬಿಡುಗಡೆ ಮಾಡಿದೆ.
ರಸ್ಕ್ ಗಟ್ಟಿಯಾದ, ಒಣ ಬಿಸ್ಕತ್ತು ಅಥವಾ ಎರಡು ಬಾರಿ ಬೇಯಿಸಿದ ಬ್ರೆಡ್. ರಸ್ಕ್ ಅನ್ನು ಸಾಮಾನ್ಯವಾಗಿ ಚಹಾದೊಂದಿಗೆ ಸೇವಿಸಲಾಗುತ್ತದೆ. ಇದನ್ನು ಬೇಕರಿಗಳಲ್ಲಿ, ಟೀ ಅಂಗಡಿಗಳಲ್ಲಿ ಮತ್ತು ಸೂಪರ್ ಮಾರ್ಕೆಟ್ಗಳಲ್ಲಿ ತ್ವರಿತ ತಿಂಡಿಯಾಗಿ ಮಾರಾಟ ಮಾಡಲಾಗುತ್ತಿದೆ.
ಮೈಸೂರಿನ ಸೆಂಟ್ರಲ್ ಫುಡ್ ಟೆಕ್ನಾಲಾಜಿಕಲ್ ರಿಸರ್ಚ್ ಇನ್ಸ್ಟಿಟ್ಯೂಟ್ ಬಿಡುಗಡೆ ಮಾಡಿರುವ ರಸ್ಕ್ ತಯಾರಿಕಾ ಘಟಕ ಯೋಜನೆಗೆ 9.4 ಲಕ್ಷ ರೂ. ವೆಚ್ಚ ತಗುಲುತ್ತದೆ. ಇನ್ನು ಗ್ಲುಟನ್-ಫ್ರೀ ಕೇಕ್ ಮಿಕ್ಸ್ ಘಟಕಕ್ಕೆ 7,52,370 ರೂ. ಹಾಗೂ ಮಸಾಲೆ ಬ್ರೆಡ್(ಸ್ಪೈಸ್ ಬ್ರೆಡ್) ಘಟಕ ನಿರ್ಮಾಣಕ್ಕೆ 9.4 ಲಕ್ಷ ರೂ. ವೆಚ್ಚ ತಗುಲುತ್ತದೆ. ಹೆಚ್ಚಿನ ಮಾಹಿತಿಗೆ ಮೈಸೂರಿನ ಸೆಂಟ್ರಲ್ ಫುಡ್ ಟೆಕ್ನಾಲಾಜಿಕಲ್ ರಿಸರ್ಚ್ ಇನ್ಸ್ಟಿಟ್ಯೂಟ್’ ಗೆ ಭೇಟಿ ನೀಡಬಹುದಾಗಿದೆ.