ಬೆಂಗಳೂರು,ಜುಲೈ,22,2023(www.justkannadain): ಸಿಎಂ ಸಿದ್ಧರಾಮಯ್ಯ ವಿರುದ್ಧ ಎಂಎಲ್ ಸಿ ಹರಿಪ್ರಸಾದ್ ಪರೋಕ್ಷ ಅಸಮಾಧಾನ ಕುರಿತು ಪ್ರತಿಕ್ರಿಯಿಸಿದ ಮಾಜಿ ಸಚಿವ ಅಶ್ವಥ್ ನಾರಾಯಣ್, ಸಿಎಂ ಕಿತ್ತೆಸೆಯುವ ಕೆಲಸವನ್ನ ಮಾಡಿದರೆ ಒಳ್ಳೆಯದು. ಈ ಭ್ರಷ್ಟ ಸರ್ಕಾರವನ್ನ ಕಿತ್ತೆಸೆಯಲಿ ಎಂದು ಗುಡುಗಿದರು.
ಬೆಂಗಳೂರಿನ ಫ್ರೀಡಂಪಾರ್ಕ್ನಲ್ಲಿ ಪ್ರತಿಭಟನೆ ವೇಳೆ ಮಾತನಾಡಿದ ಅಶ್ವಥ್ ನಾರಾಯಣ್, ಕಾಂಗ್ರೆಸ್ ಸರ್ಕಾರದಲ್ಲಿ ಸಮಾಜವಿರೋಧಿ ಶಕ್ತಿಗಳು ತಲೆ ಎತ್ತಿವೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಕುಸಿದಿದೆ. ಟಿ.ನರಸೀಪುರದಲ್ಲಿ ಸಮಾಜದ್ರೋಹಿಗಳಿಂದ ವೇಣುಗೋಪಾಲ್ ಹತ್ಯೆಯಾಯಿತು. ಹಲವು ಕಡೆ ಇಂತಹ ಕೃತ್ಯಗಳು ನಡೆಯುತ್ತಿವೆ ಎಂದು ಕಾಂಗ್ರೆಸ್ ವಿರುದ್ದ ಕಿಡಿಕಾರಿದರು.
ಪಿಎಸ್ ಐ ನೇಮಕಾತಿ ಹಗರಣ ತನಿಖೆ ಮಾಡಲಿ. ಪ್ರಕರಣದ ಪಾರದರ್ಶಕ ತನಿಖೆಯಾಗಲಿ. ಸಿದ್ಧರಾಮಯ್ಯ ಅವಧಿಯ ಪಿಎಸ್ ಐ ಅಕ್ರಮವನ್ನೂ ತನಿಖೆ ಮಾಡಲಿ ಎಂದು ಅಶ್ವಥ್ ನಾರಾಯಣ್ ಆಗ್ರಹಿಸಿದರು.
Key words: Law and order – state – completely –collapsed-Former minister -Ashwayath Narayan.