ಮೈಸೂರು, ಡಿ.೦೧,೨೦೨೪: (www.justkannada.in news) ಫೆಂಗಲ್ ಚಂಡಮಾರುತದ ಕಾರಣದಿಂದ ವಾರದ ಮೊದಲ ದಿನವೇ ನಗರದಲ್ಲಿ ಜಿಟಿಜಿಟಿ ಮಳೆ, ಮುಂಜಾಗ್ರತ ಕ್ರಮವಾಗಿ ಶಾಲೆಗಳಿಗೆ ರಜೆ ಘೋಷಿಸಿದ್ದ ಜಿಲ್ಲಾಡಳಿತ. ಪರಿಣಾಮ ರಸ್ತೆಗಳೆಲ್ಲಾ ಬಹುತೇಕ ಬಿಕೋ ಎನ್ನುತ್ತಿದ್ದವು. ಆದರೆ ನಗರದ ಮೆಟ್ರೊಪೋಲ್ ಹೋಟೆಲ್ ಸಭಾಂಗಣ ಮಾತ್ರ ಕಿಕ್ಕಿರಿದು ತುಂಬಿತ್ತು.
“ಲಾಗೈಡ್ “ ಕಾನೂನು ಮಾಸ ಪತ್ರಿಕೆ ವತಿಯಿಂದ ಸೋಮವಾರ ಸೋಮವಾರ ಕ್ಯಾಲೆಂಡರ್ ಬಿಡುಗಡೆ ಸಮಾರಂಭ. ಪ್ರತಿ ವರ್ಷದಂತೆ ಈ ವರ್ಷವು ಸಹ ವಿಭಿನ್ನ ಥೀಮ್ ನೊಂದಿಗೆ ಕ್ಯಾಲೆಂಡರ್ ಬಿಡುಗಡೆಗೆ ಸಿದ್ಧವಾಗಿತ್ತು. ೨೦೨೫ ರ ಕ್ಯಾಲೆಂಡರ್ ನಲ್ಲಿ ವಿವಿಧ ದೇಶಗಳಲ್ಲಿನ ನ್ಯಾಯದೇವತೆ ಮೂರ್ತಿ ಹಾಗೂ ಅದರ ಕುರಿತಾದ ವಿವರಗಳಿದ್ದವು.
ಕ್ಯಾಲೆಂಡರ್ ಬಿಡುಗಡೆ ಸಮಾರಂಭದ ಅಧ್ಯಕ್ಷತೆಯನ್ನು ರಾಜ್ಯ ಮುಖ್ಯ ಚುನಾವಣಾ ಆಯುಕ್ತರಾದ ಸಂಗ್ರೇಶಿ ವಹಿಸಿದ್ದರು. ಸಮಾರಂಭದಲ್ಲಿ ಶಾಸಕ ಎ.ಮಂಜು, ವಿಧಾನ ಪರಿಷತ್ ಮಾಜಿ ಸದಸ್ಯ ಮರಿತಿಬ್ಬೇಗೌಡ, ಹಿರಿಯ ಪತ್ರಕರ್ತ ಕೃಷ್ಣ ಪ್ರಸಾದ್ , ಹಿರಿಯ ವಕೀಲ ಹರೀಶ್ ಹೆಗ್ಡೆ ಹಾಗೂ ಮೈಸೂರು ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎಸ್.ಲೊಕೇಶ್ ಭಾಗವಹಿಸಿದ್ದರು.
ಇದೇ ವೇಳೆ ಮೈಸೂರು ನಗರ ಪೊಲೀಸ್ ಆಯುಕ್ತರಾದ ಸೀಮಾ ಲಾಟ್ಕರ್ ಹಾಗೂ ಮೈಸೂರು ಜಿಲ್ಲೆಯ ಅಪರ ಜಿಲ್ಲಾಧಿಕಾರಿ ಶಿವರಾಜ್ ಅವರನ್ನು ಆತ್ಮೀಯವಾಗಿ ಸನ್ಮಾನಿಸಲಾಯಿತು. ಸನ್ಮಾನ ಸ್ವೀಕರಿಸಿ ಮಾತನಾಡಿದ ಸೀಮಾ ಲಾಟ್ಕರ್, ಮಾತಿಗಿಂತ ಕೆಲಸದ ಮೇಲೆ ಹೆಚ್ಚು ನಂಬಿಕೆ ನನಗೆ. ಮಹಿಳಾ ಪೊಲೀಸ್ ಆಯುಕ್ತೆಯಾಗಿ ಮೈಸೂರು ನಗರಕ್ಕೆ ನೇಮಕಗೊಂಡಿರುವ ಬಗ್ಗೆ ಹೆಮ್ಮೆ ಇದೆ. ಕಾನೂನು ಸಂಕಷ್ಟದಲ್ಲಿರುವ ಅಸಹಾಯಕರು ನೆರವು ಕೋರಿ ಬಂದಾಗ ಅವರಿಗೆ ಸಹಾಯ ಹಸ್ತ ಚಾಚಿ ರಕ್ಷಣೆ ನೀಡುವೆ. ಈ ನಿಟ್ಟಿನಲ್ಲಿ ಆಯುಕ್ತರ ಕಚೇರಿ ಸದಾ ಮುಕ್ತವಾಗಿರುತ್ತದೆ ಎಂದು ಭರವಸೆ ನೀಡಿದರು.
ಅಪರಾ ಜಿಲ್ಲಾಧಿಕಾರಿ ಶಿವರಾಜ್ ಮಾತನಾಡಿ, ನ್ಯಾಯದೇವತೆಯ ವಿಗ್ರಹ ಕೇವಲ ಸಾಂಕೇತಿಕ ಮಾತ್ರ. ಆದರೆ ನಿಜವಾದ ದೇವರು ಎಂದು ಕಷ್ಟದಲ್ಲಿರುವ, ಅನ್ಯಾಯಕ್ಕೊಳಗಾದ ಕಕ್ಷಿಧಾರರಿಗೆ ನ್ಯಾಯ ಕೊಡಿಸುವ ವಕೀಲರು. ಹಾಗಾಗಿ ಈ ವೃತ್ತಿ ಅತ್ಯಂತ ಪವಿತ್ರವಾದದ್ದು.ಈ ನಿಟ್ಟಿನಲ್ಲಿ ಲಾಗೈಡ್ ಪತ್ರಿಕೆ ಮೂಲಕ ಎಚ್. ಎನ್. ವೆಂಕಟೇಶ್ ಅವರು ಮಾಡುತ್ತಿರುವ ಕಾರ್ಯ ಶ್ಲಾಘನೀಯವಾದ್ದದ್ದು ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಸಮಾರಂಭದಲ್ಲಿ ಅತಿಥಿಯಾಗಿ ಭಾಗವಹಿಸಿದ್ದ ಹಿರಿಯ ಪತ್ರಕರ್ತ ಕೃಷ್ಣ ಪ್ರಸಾದ್ ಮಾತನಾಡಿ, ಲಾಗೈಡ್ ಕ್ಯಾಲೆಂಡರ್ ವಿನ್ಯಾಸ ಹಾಗೂ ವೈವಿದ್ಯತೆ ಬಗೆಗೆ ಮೆಚ್ಚುಗೆ ವ್ಯಕ್ತಪಡಿಸಿದರು. ೨೦೨೫ ರ ಒಟ್ಟು ರಜಾ ದಿನಗಳಲ್ಲಿ ಬಹುತೇಕ ರಜೆಗಳು ಭಾನುವಾರವೇ ಬಂದಿರುವುದು ಉಲ್ಲೇಖಿಸಿದಾಗ ಸಭೆ ನಗೆನಡಲಿನಲ್ಲಿ ತೇಲಿತು. ಕ್ಯಾಲೆಂಡರ್ ನಲ್ಲಿ ವಿವಿಧ ದೇಶಗಳಲ್ಲಿನ ನ್ಯಾಯದೇವತೆಯ ಚಿತ್ರಗಳನ್ನು ಒಳಗೊಂಡಿರುವುದನ್ನು ಪ್ರಸ್ತಾಪಿಸಿ, ಕ್ಯಾಲೆಂಡರ್ ಉಗಮಕ್ಕೆ ಕಾರಣವಾದ ಇಟಲಿ ದೇಶದ ಬಗೆಗೆ ಬೆಳಕು ಚೆಲ್ಲಿದರು.
ಸನ್ಮಾನ :
ಸಮಾರಂಭದ ರೂವಾರಿ ಹಾಗೂ ಲಾಗೈಡ್ ಸಂಪಾದಕ ಎಚ್. ಎನ್. ವೆಂಕಟೇಶ್ ಅವರನ್ನು ನಗರ ಪಾಲಿಕೆ ಮಾಜಿ ಸದಸ್ಯ ಲೊಕೇಶ್ ವಿ.ಪಿಯಾ ಮತ್ತು ಸ್ನೇಹಿತರು ಇದೇ ವೇಳೆ ಅದ್ದೂರಿಯಾಗಿ ಸನ್ಮಾನಿಸಿ ಸಂಭ್ರಮಿಸಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ರಾಜ್ಯ ಮುಖ್ಯ ಚುನಾವಣಾ ಆಯುಕ್ತರಾದ ಸಂಗ್ರೇಶಿ ಅವರ ಪರಿಚಯವನ್ನು ಕಾನೂನು ವಿದ್ಯಾರ್ಥಿ ರೋಹನ್ ಮಾಡಿಕೊಟ್ಟರು.
key words: “Law Guide”, Calendar and Diary, felicitation, Police Commissioner, Additional District Magistrate.
“Law Guide” Calendar and Diary Release: felicitation to the Police Commissioner and Additional District Magistrate.