ಮೈಸೂರು,ಏಪ್ರಿಲ್,21,2025 (www.justkannada.in): ನೆನ್ನೆ ಬೆಂಗಳೂರಿನಲ್ಲಿ ನಿಧನರಾದ ನಿವೃತ್ತ ಪೊಲೀಸ್ ಮಹಾನಿರ್ದೇಶಕ ಓಂ ಪ್ರಕಾಶ್ ಅವರಿಗೆ ಲಾಗೈಡ್ ಕನ್ನಡ ಕಾನೂನು ಮಾಸಪತ್ರಿಕೆ ಬಳಗದ ವತಿಯಿಂದ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಲಾಗೈಡ್ ಕನ್ನಡ ಕಾನೂನು ಮಾಸಪತ್ರಿಕೆ ಗೌರವ ಸಂಪಾದಕ, ಹಿರಿಯ ವಕೀಲ ಎಚ್ ಎನ್ ವೆಂಕಟೇಶ್ ಅವರು ಮೈಸೂರಿನ ಏರ್ ಲೈನ್ಸ್ ಹೋಟೆಲ್ ನಲ್ಲಿ ಅಯೋಜಿಸಿದ್ದ ಶ್ರದ್ಧಾಂಜಲಿ ಸಭೆಯಲ್ಲಿ ಓಂ ಪ್ರಕಾಶ್ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಪೂಜೆ ಸಲ್ಲಿಸಿದರು. ಮೃತರ ಆತ್ಮಕ್ಕೆ ಶಾಂತಿ ಕೋರಿ ಒಂದು ನಿಮಿಷ ಮೌನಾಚರಣೆ ಮಾಡಲಾಯಿತು.
ಇದೇ ವೇಳೆ ನಿವೃತ್ತ ಎಸ್ ಪಿ ರಾಜೇಂದ್ರ ಪ್ರಸಾದ್ , ನಿವೃತ್ತ ಎಸಿಪಿ ಆರ್ ಗಿರಿಜೇಶ್ ಹಾಗೂ ಮೈಸೂರು ವಕೀಲರ ಸಂಘದ ಅಧ್ಯಕ್ಷ ಎಸ್ ಲೋಕೇಶ್ ಅವರು ಮೃತ ಓಂ ಪ್ರಕಾಶ್ ಅವರ ಒಡನಾಟ ಹಾಗೂ ಅವರ ವ್ಯಕ್ತಿತ್ವ ದಕ್ಷತೆ ಬಗ್ಗೆ ಸ್ಮರಿಸಿದರು.
ಶ್ರದ್ಧಾಂಜಲಿ ಸಭೆಯಲ್ಲಿ ವಕೀಲರ ಸಂಘದ ಮಾಜಿ ಅಧ್ಯಕ್ಷ ಜಿ.ವಿ ರಾಮಮೂರ್ತಿ, ಉದ್ಯಮಿ ಅಭಿಷೇಕ್ ಹೆಗ್ಡೆ ಇನ್ಸಪೆಕ್ಟರ್ ಪುರುಷೋತ್ತಮ್ ಬಿಜೆಪಿ ಮುಖಂಡರಾದ ಶಂಭು, ಹೇಮಂತ್, ತಬ್ರೇಜ್ ವಕೀಲರಾದ ಜೈ ಕುಮಾರ್ ರಾಜೇಶ್, ಸ್ವಾಮಿ ನಾಗರಾಜು ಪ್ರಶಾಂತ್ ಗಿರೀಶ್ ಹಾಗೂ ಲಾಗೈಡ್ ಬಳಗದ ಸದಸ್ಯರು ಭಾಗಿಯಾಗಿದ್ದರು.
ENGLISH SUMMARY
The Law Guide magazine team, led by Chief Editor and Senior Advocate of Mysuru, Sri Venkatesh, paid their respects to the late former DGP, Sri Om Prakash, at a condolence meeting held at Airlines Hotel, Mysuru. The event was attended by dignitaries, including Sri Lokesh, President of the Bar Association of Mysuru, former President Sri Ramamurthy, other advocates, retired police officers, and esteemed guests.
During the function, Sri Venkatesh and other speakers paid tribute to the late Sri Om Prakash, highlighting his remarkable service and contributions. The gathering observed a two-minute silence as a mark of respect to the departed soul.
The condolence meeting was a poignant occasion, reflecting the esteem in which Sri Om Prakash was held by the community. The speakers shared their memories and anecdotes, celebrating his legacy and impact on the region.
Key words: Law guide, condolence , retired DG & IGP, Om Prakash