ಮೈಸೂರು,ಮಾರ್ಚ್,21,2025 (www.justkannada.in): ಮೈಸೂರಿನ ಹಿರಿಯ ವಕೀಲರು ಹಾಗೂ ಲಾಗೈಡ್ ಕನ್ನಡ ಕಾನೂನು ಮಾಸಪತ್ರಿಕೆ ಗೌರವ ಸಂಪಾದಕರು ಆದ ಎಚ್ ಎನ್ ವೆಂಕಟೇಶ್ ಅವರ ಹುಟ್ಟುಹಬ್ಬವನ್ನು ಇಂದು ಅರ್ಥಪೂರ್ಣವಾಗಿ ಆಚರಿಸಲಾಯಿತು.
ಎಚ್ ಎನ್ ವೆಂಕಟೇಶ್ ಅವರ ಹುಟ್ಟುಹಬ್ಬ ಹಿನ್ನೆಲೆ ಅವರ ಅಭಿಮಾನಿಗಳು ಸ್ನೇಹಿತರು ಹಾಗೂ ಲಾಗೈಡ್ ಬಳಗದ ವತಿಯಿಂದ ವಿವಿಧ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ರಕ್ತದಾನ ಶಿಬಿರ
ಮೈಸೂರು ಜಿಲ್ಲಾ ವಕೀಲರ ಸಂಘದಲ್ಲಿ ಹುಟ್ಟುಹಬ್ಬ ಹಿನ್ನೆಲೆಯಲ್ಲಿ ರಕ್ತದಾನ ಶಿಬಿರವನ್ನು ಆಯೋಜಿಸಲಾಗಿತ್ತು. ಮೈಸೂರು ವಕೀಲರ ಸಂಘದ ಆವರಣದಲ್ಲಿ ಆಯೋಜಿಸಲಾಗಿದ್ದ ರಕ್ತದಾನ ಶಿಬಿರದಲ್ಲಿ 50ಕ್ಕೂ ಹೆಚ್ಚು ವಕೀಲರು ರಕ್ತದಾನ ಮಾಡಿದರು. ಬಡವಾರ ಪಾಲಿನ ಕಾಮಧೇನು ಕೆ ಆರ್ ಆಸ್ಪತ್ರೆಯ ರಕ್ತನಿಧಿಗೆ ರಕ್ತವನ್ನು ತಲುಪಿಸಲಾಯಿತು.
ವಕೀಲರ ಸಂಘದಲ್ಲಿ ಕಾರ್ಯಕ್ರಮ
ಮೈಸೂರು ಜಿಲ್ಲಾ ವಕೀಲರ ಸಂಘದಿಂದ ಎಚ್ ಎನ್ ವೆಂಕಟೇಶ್ ಅವರನ್ನು ಆತ್ಮೀಯವಾಗಿ ಗೌರವಿಸಿ ಸನ್ಮಾನಿಸಲಾಯಿತು. ವಕೀಲರ ಸಂಘದ ಅಧ್ಯಕ್ಷ ಎಸ್ ಲೋಕೇಶ್ ಉಪಾಧ್ಯಕ್ಷ ಎಂ.ವಿ ಚಂದ್ರಶೇಖರ್ ಕಾರ್ಯದರ್ಶಿ ಎ.ಜಿ ಸುಧೀರ್ ಮಹಿಳಾ ಜಂಟಿ ಕಾರ್ಯದರ್ಶಿ ವಿನೋದ ಬಿ.ವಿ ಹಿರಿಯ ವಕೀಲರಾದ ಎಂಡಿ ಹರೀಶ್ ಕುಕಾರ್ ಹೆಗ್ಡೆ, ಮಾಜಿ ಅಧ್ಯಕ್ಷರಾದ ಜಿ.ವಿ ರಾಮಮೂರ್ತಿ ಮಹದೇವಸ್ವಾಮಿ ಆನಂದಕುಮಾರ್ ಮಾಜಿ ಕಾರ್ಯದರ್ಶಿ ಉಮೇಶ್ ಸೇರಿ ಹಲವು ಹಿರಿಯ ಹಾಗೂ ಕಿರಿಯ ವಕೀಲರು ಹಾಜರಿದ್ದರು. ಎಚ್ ಎನ್ ವೆಂಕಟೇಶ್ ಅವರಿಗೆ ಮೈಸೂರು ಪೇಟ ತೊಡಿಸಿ ಶಾಲ ಹಾರ ಹಾಕಿ ಗೌರವಿಸಲಾಯಿತು. ಇದೇ ವೇಳೆ OMG Venturesನ ಅರುಣ್ ಹಾಗೂ ಶಿವಾನಂದ್ ಎಚ್ ಎನ್ ವೆಂಕಟೇಶ್ ಅವರಿಗೆ ಕಲಿಯುಗ ಕಾಮಧೇನು ಬಿರುದಿನ ಜೊತೆಗೆ ಅವರ ಭಾವಚಿತ್ರವನ್ನು ಅರ್ಪಿಸಿದರು.
ಹುಟ್ಟುಹಬ್ಬ ಹಿನ್ನೆಲೆ ಲೈಬ್ರರಿಗೆ ಪುಸ್ತಕಗಳ ಕೊಡುಗೆ, ನ್ಯಾಯಾಲಯಕ್ಕೆ ಶುದ್ಧ ನೀರಿನ ಟ್ಯಾಂಕರ್
ಎಚ್ ಎನ್ ವೆಂಕಟೇಶ್ ಅವರ ಹುಟ್ಟುಹಬ್ಬ ಹಿನ್ನೆಲೆ ಮೈಸೂರು ಜಿಲ್ಲಾ ವಕೀಲರ ಸಂಘದ ಲೈಬ್ರರಿಗೆ 30 ಸಾವಿರ ಪುಸ್ತಕಗಳನ್ನು ಕೊಡುಗೆಯಾಗಿ ನೀಡಲಾಯಿತು. ಜೊತೆಗೆ ಲಾಗೈಡ್ ವೆಂಕಟೇಶ್ ಅವರ ಕೊಡುಗೆಯ ಪುಸ್ತಕ ವಿಭಾಗವನ್ಜು ಲೋಕಾರ್ಪಣೆಗೊಳಿಸಲಾಯಿತು. ಜೊತೆಗೆ ವಕೀಲರಿಗೆ ಬಿರು ಬೇಸಿಗೆಯಲ್ಲಿ ನೀರಿನ ದಾಹವನ್ನು ನೀಗಿಸಲು. ಎರಡು ವಾಟರ್ ಪ್ಯೂರಿಫಯರ್ ನ್ನು ಕೊಡುಗೆಯಾಗಿ ನೀಡಲಾಯಿತು. ಏಕ ಕಾಲಕ್ಕೆ ಬಿಸಿ ಹಾಗೂ ತಣ್ಣಗಿನ ನೀರು ಪಡೆಯಬಹುದಾದ ವಾಟರ್ ಪ್ಯೂರಿಫಯರ್ ಇದಾಗಿದೆ.
ಹೋಟೆಲ್ ಏರ್ ಲೈನ್ಸ್ ಬಳಿ ಅದ್ದೂರು ಆಚರಣೆ
ಎಚ್ ಎನ್ ವೆಂಕಟೇಶ್ ಅವರ ಹುಟ್ಟುಹಬ್ಬವನ್ನು ಅವರ ಅಭಿಮಾನಿಗಳು ಮೈಸೂರಿನ ಏರ್ ಲೈನ್ಸ್ ಹೋಟೆಲ್ ಬಳಿ ಅದ್ದೂರಿಯಾಗಿ ಆಚರಿಸಿದರು. ನಗರಪಾಲಿಕೆ ಸದಸ್ಯ ಲೋಕೇಶ್ ಪಿಯಾ ಬಿಜೆಪಿ ಮುಖಂಡ ಶಂಭು ಸೇರಿದಂತೆ ಹಲವು ಮುಖಂಡರು ಎಚ್ ಎನ್ ವೆಂಕಟೇಶ್ ಅವರಿಂದ ಕೇಕ್ ಕಟ್ ಮಾಡಿಸಿ ವಿವಿಧ ಪೇಟ ಶಾಲು ಹೊದಿಸಿ ಸನ್ಮಾನಿಸಲಾಯಿತು.
ವೃದ್ದಾಶ್ರಮಕ್ಕೆ ಅನ್ನದಾನ ಅರ್ಥಪೂರ್ಣ ಆಚರಣೆ
ಎಚ್ ಎನ್ ವೆಂಕಟೇಶ್ ಅವರ ಹುಟ್ಟುಹಬ್ಬ ಹಿನ್ನೆಲೆ ವಕೀಲರಾದ ಜೈ ಶಂಕರ್, ಗಿರೀಶ್ ಸಿದ್ದರಾಜು, ರವಿ ಅವರು ಮೈಸೂರು ಸರಸ್ವತಿಪುರಂನಲ್ಲಿರುವ ವೃದ್ದಾಶ್ರಮದ ಹಿರಿಯ ಜೀವಗಳಿಗೆ ಮಧ್ಯಾಹ್ನದ ಊಟದ ವ್ಯವಸ್ಥೆ ಮಾಡಿಸಿದ್ದರು. ವೃದ್ದಾಶ್ರಮಕ್ಕೆ ತೆರಳಿದ ಎಚ್ ಎನ್ ವೆಂಕಟೇಶ್ ತಾವೇ ಖುದ್ದು ಹಿರಿಯರಿಗೆ ಊಟ ಬಡಿಸಿದರು. ಈ ಮೂಲಕ ಹುಟ್ಟುಹಬ್ಬವನ್ನು ಅತ್ಯಂತ ಅರ್ಥಪೂರ್ಣವಾಗಿ ಆಚರಿಸಲಾಯಿತು.
Key words: Law guide, Venkatesh, birthday, celebration