“ಕಾನೂನು ಮಂತ್ರಿ ಪದವಿ ನೀಡಿರುವುದು ನಾಚಿಕೆಗೇಡು“ : ಸಚಿವ ಜೆ.ಮಾಧುಸ್ವಾಮಿ ವಿರುದ್ಧ ಕೆಪಿಸಿಸಿ ವಕ್ತಾರ ಎಂ.ಲಕ್ಷಣ್ ಆಕ್ರೋಶ

ಮೈಸೂರು,ಜನವರಿ,20,2021(www.justkannada.in) : ಅಧಿಕಾರಿಗಳ ವಿರುದ್ಧ ಬಾಯಿಗೆ ಬಂದ ಹಾಗೆ ಮಾತನಾಡುತ್ತೀರಿ. ಅಧಿಕಾರಿಯೊಬ್ಬರಿಗೆ ಜಾಡಿಸಿ ಒದಿತಿನಿ ಅಂತೀರಿ. ನಿಮಗೆ ಕಾನೂನು ಮಂತ್ರಿ ಪದವಿ ನೀಡಿರುವುದು ನಾಚಿಕೆಗೇಡು ಎಂದು ಕಾನೂನು ಸಚಿವ ಜೆ.ಮಾಧುಸ್ವಾಮಿ ವಿರುದ್ಧ ಕೆಪಿಸಿಸಿ ವಕ್ತಾರ ಎಂ.ಲಕ್ಷಣ್ ಆಕ್ರೋಶವ್ಯಕ್ತಪಡಿಸಿದರು.jk-logo-justkannada-mysoreತುಮಕೂರಿನಲ್ಲಿ ನಡೆದ ಕೆಡಿಪಿ ಸಭೆಯಲ್ಲಿ ಸಚಿವ ಜೆ.ಮಾಧುಸ್ವಾಮಿ ಅಧಿಕಾರಗಳ ವಿರುದ್ದ ಆವಾಚ್ಯ ಪದ ಬಳಕೆ ವಿಚಾರವಾಗಿ ಭಾನುವಾರ ಇಂದಿರಾಗಾಂಧಿ ಕಾಂಗ್ರೆಸ್ ಭವನದಲ್ಲಿ ನಡೆದ ಸುದ್ದಿಗೋಷ್ಠಿ ಕಿಡಿಕಾರಿದರು.

ಒಬ್ಬ ಇಂಜಿನಿಯರ್ ಗೆ ಆ ರೀತಿ ಪದ ಬಳಕೆ ಮಾಡುತ್ತೀರಾ? ಅವರು ನಾಲ್ಕು ವರ್ಷಗಳ ಕಾಲ ಇಂಜಿನಿಯರಿಂಗ್ ಓದಿ ಆ ಸ್ಥಾನದಲ್ಲಿ ಕುಳಿತಿರುತ್ತಾರೆ. ಅಧಿಕಾರಿಗಳ ಹೆಂಡತಿಯರ ಮೇಲೆ ಪದಬಳಕೆ ಮಾಡಲು ಯಾರು ಅಧಿಕಾರ ಕೊಟ್ಟಿದ್ದಾರೆ ನಿಮಗೆ? ಸಾರ್ವಜನಿಕರು ಮನವಿ ಕೊಡಲು ಬಂದರೆ ಅವರಿಗೆ ರಾಸ್ಕಲ್ ಎನ್ನುತ್ತೀರಿ ಎಂದು ವಾಗ್ದಾಳಿ ನಡೆಸಿದರು.Law-Minister-Degree-awarded-Shame-Minister J.Madhuswamy-opposite-KPCC-spokesperson-M.Lakshan-Outrage

 

ನಿಮಗೆ ಕಾನೂನು ಮಂತ್ರಿ ಖಾತೆ ನೀಡಿದ್ದಾರೆ. ಮೊದಲು ಸಾರ್ವಜನಿಕ ಜೀವನದಲ್ಲಿ ಹೇಗೆ ನಡೆದುಕೊಳ್ಳಬೇಕು ಎಂಬುದನ್ನು ಓದಿ ತಿಳಿದುಕೊಳ್ಳಿ. ಮತ್ತೊಮ್ಮೆ ಈ ರೀತಿಯ ನಡವಳಿಕೆ ಪುನರಾವರ್ತನೆ ಆದರೆ ನಿಮ್ಮ ವಿರುದ್ಧ ಹೋರಾಟ ಮಾಡಬೇಕಾಗುತ್ತದೆ. ಅಧಿಕಾರಿಗಳಿಗೆ ಗೌರವ ಕೊಟ್ಟು ಮಾತನಾಡುವುದು ಕಲಿಯಿರಿ ಎಂದು ಸಚಿವ ಮಾಧುಸ್ವಾಮಿಗೆ ಎಂ.ಲಕ್ಷ್ಮಣ್ ಎಚ್ಚರಿಕೆ ನೀಡಿದರು.

key words : Law-Minister-Degree-awarded-Shame-Minister J.Madhuswamy-opposite-KPCC-spokesperson-M.Lakshan-Outrage