ಮೈಸೂರು,ಜುಲೈ,19,2021(www.justkannada.in): ಬಿಜೆಪಿಯಲ್ಲಿ ನಾಯಕತ್ವ ಬದಲಾವಣೆ ವಿಚಾರಕ್ಕೆ ಸಂಬಂಧಿಸಿದಂತೆ ಮಾಧ್ಯಮಗಳ ಪ್ರಶ್ನೆಗಳಿಗೆ ಪ್ರವಾಸೋದ್ಯಮ ಸಚಿವ ಸಿ.ಪಿ ಯೋಗೇಶ್ವರ್ ಮೌನ ವಹಿಸಿದರು.
ಸಿಎಂ ಬದಲಾವಣೆ ವಿಚಾರಕ್ಕೆ ಸಂಬಂಧಿಸಿದಂತೆ ತಲಕಾಡಿನಲ್ಲಿ ಸುದ್ಧಿಗೋಷ್ಠಿ ವೇಳೆ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವ ಸಿ.ಪಿಯೋಗೇಶ್ವರ್, ಮೌನಂ ಅರೆ ಸಮ್ಮತಿ ಲಕ್ಷಣಮ್ ಎಂದರು. ನಾನು ಈ ವಿಚಾರಗಳ ಬಗ್ಗೆ ಮಾತನಾಡುವುದಿಲ್ಲ. ನಾನು ಮಾತನಾಡಿದರೆ ತಪ್ಪಿಗೆ ಸಿಲುಕಿಸುತ್ತೀರಾ. ನಾನು ಮೂರು ದಿನಗಳಿಂದ ಮಡಿಕೇರಿಯಲ್ಲಿದ್ದೆ. ಯಾವುದೇ ರಾಜಕೀಯ ವಿದ್ಯಮಾನ ಗೊತ್ತಿಲ್ಲ. ರಾಜಕೀಯ ಬಗ್ಗೆ ಮಾತನಾಡುವ ಇಂಟ್ರೆಸ್ಟ್ ಇಲ್ಲ ಎಂದರು.
ಕೆ.ಆರ್.ಎಸ್ ನಲ್ಲಿ ಡಿಸ್ನಿಲ್ಯಾಂಡ್ ನಿರ್ಮಾಣ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಸಚಿವ ಸಿ.ಪಿ ಯೋಗೇಶ್ವರ್, ಅದು ನಮ್ಮ ಸರ್ಕಾರದ ಯೋಜನೆ ಅಲ್ಲ. ಹಿಂದಿನ ಸರ್ಕಾರದ ಯೋಜನೆ ಹಾಗೂ ನೀರಾವರಿ ಇಲಾಖೆಗೆ ಸೇರಿದ ಯೋಜನೆ. ಡಿಸ್ನಿಲ್ಯಾಂಡ್ ಅಲ್ಲ ,ಕೆ.ಆರ್.ಎಸ್ ಹಿನ್ನೀರಿನಲ್ಲಿ ವಾಟರ್ ಸ್ಪೋರ್ಟ್ ಮಾಡುತ್ತೇವೆ ಎಂದರು.
ಚಾಮುಂಡಿ ಬೆಟ್ಟಕ್ಕೆ ರೋಪ್ ವೇ ಮಾಡುವ ವಿಚಾರ ಕುರಿತು ಪ್ರತಿಕ್ರಿಯಿಸಿದ ಅವರು, ವಿರೋಧ ಮಾಡಿದರೂ ನಾವು ಈ ಯೋಜನೆಯನ್ನ ಮಾಡುತ್ತೇವೆ.ವಿರೋಧಗಳನ್ನೆಲ್ಲಾ ಪಕ್ಕಕ್ಕಿಟ್ಟು ರೋಪ್ ವೇ ಮಾಡುತ್ತೇವೆ. ಮೊದಲಿಗೆ ವಿರೋಧ ವ್ಯಕ್ತವಾದ್ರೂ ತದನಂತರ ಅವರೇ ಒಪ್ಪಿಕೊಳ್ಳುತ್ತಾರೆ. ಈಗಾಗಲೇ ರೋಪ್ ವೇಗೆ ಡಿಪಿಆರ್ ಆಗಿದೆ ಎಂದು ತಿಳಿಸಿದರು.
Key words: Leadership-change – BJP-Minister -CP Yogeshwar