ಸಿದ್ಧರಾಮಯ್ಯ ಮುಂದಾಳತ್ವದಲ್ಲಿ ನಾವೆಲ್ಲಾ ಕೆಲಸ ಮಾಡೋಣ: ಭ್ರಷ್ಟ ಬಿಜೆಪಿ ಸರ್ಕಾರ ಕಿತ್ತೊಗೆಯೋಣ- ಡಿ.ಕೆ ಶಿವಕುಮಾರ್ ಕರೆ.

ದಾವಣಗೆರೆ,ಆಗಸ್ಟ್,3,2022(www.justkannada.in): ನಾವೆಲ್ಲರೂ ಸಿದ್ಧರಾಮಯ್ಯ ಮುಂದಾಳತ್ವದಲ್ಲಿ ಕೆಲಸ ಮಾಡೋಣ. ಸಾಮೂಹಿಕ ನಾಯಕತ್ವದಲ್ಲಿ ಮುಂದಿನ ಚುನಾವಣೆ ಎದುರಿಸೋಣ. ರಾಜ್ಯದಲ್ಲಿರುವ ಭ್ರಷ್ಟ ಬಿಜೆಪಿ ಸರ್ಕಾರವನ್ನ ಕಿತ್ತೊಗೆಯುವ ಸಂಕಲ್ಪ ಮಾಡಿ ಎಂದು ಕಾಂಗ್ರೆಸ್ ಕಾರ್ಯಕರ್ತರಿಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಕರೆ ನೀಡಿದರು.

ಬೆಣ್ಣೆ ನಗರಿ ದಾವಣಗೆರೆಯ ಎಸ್ ಎಸ್ ಮೈದಾನದಲ್ಲಿ ಆಯೋಜಿಸಲಾಗಿದ್ದ ಮಾಜಿ ಸಿಎಂ ಸಿದ್ಧರಾಮಯ್ಯರ 75ನೇ ಜನ್ಮದಿನದ ಅಮೃತಮಹೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಡಿ.ಕೆ ಶಿವಕುಮಾರ್ ಹೇಳಿದ್ದಿಷ್ಟು…

ಇಂದು ನಾಯಕ ಸಿದ್ಧರಾಮಯ್ಯನವರ ಹುಟ್ಟುಹಬ್ಬ ಆಚರಣೆ.  ದೇಶಕ್ಕೆ ಸ್ವಾತಂತ್ರ ಬಂದು 75 ವರ್ಷ ತುಂಬಿದೆ. ಹೀಗಾಗಿ ದೇಶಕ್ಕೂ ಸಂಭ್ರಮ, ಕಾಂಗ್ರೆಸ್ ಗೂ ಸಂಭ್ರಮ.  2013ರಲ್ಲಿ  ರಾಹುಲ್ ಗಾಂಧಿ ಸೋನಿಯಾಗಾಂಧಿ ಸಿಎಂ ಆಗಿ ಸಿದ್ಧರಾಮಯ್ಯರನ್ನ ನೇಮಿಸಿದ್ದರು. ಬಸವ ಜಯಂತಿ ದಿನ ಸಿಎಂ ಆಗಿ ಪ್ರಮಾಣವಚನ ಸ್ವೀಕರಿಸಿದ್ದರು. ಸಿದ್ಧರಾಮಯ್ಯನವರ ಆಡಳಿತ ನೋಡಿದ್ದೇವೆ.  ಬಸವಣ್ಣನವರ ತತ್ವವೇ ಕಾಂಗ್ರೆಸ್ ತತ್ವವಾಗಿದೆ. ಸಿದ್ಧರಾಮೋತ್ಸವ ಕಾರ್ಯಕ್ರಮದ ಬಗ್ಗೆ ಹೇಳಿದಾಗ ಸಂತೋಷಪಟ್ಟೆ. ಇಂತಹ ಐತಿಹಾಸಿಕ ಕಾರ್ಯಕ್ರಮಕ್ಕೆ ಬಂದಿದ್ದಕ್ಕೆ ರಾಹುಲ್ ಗಾಂಧಿಗೆ ಧನ್ಯವಾದಗಳು ಎಂದರು.

ಅನ್ನಭಾಗ್ಯ ಸೇರಿ ಹಲವು ಜನರ ಯೋಜನೆ ಜಾರಿಗೆ ತಂದರು. ಸಿದ್ಧರಾಮಯ್ಯರನ್ನ ಕೇವಲ ಹಿಂದುಳಿದ ನಾಯಕ ಎಂದು ಬಿಂಬಿಸಬೇಡಿ. ಸಿದ್ಧರಾಮಯ್ಯ ಕೇವಲ ಹಿಂದೂಳಿದ ನಾಯಕ ಅಲ್ಲ. ಸರ್ವಜನಾಂಗ, ಸರ್ವಧರ್ಮಕ್ಕೂ ನಾಯಕ. ಸಿದ್ದರಾಮಯ್ಯಗೆ ಉತ್ತಮ ಆರೋಗ್ಯ, ಈ ರಾಜ್ಯಕ್ಕೆ ಬಲಿಷ್ಠ ಸೇವೆ ನೀಡುವ ಶಕ್ತಿ ನೀಡಲಿ ಎಂದು ಡಿಕೆಶಿವಕುಮಾರ್ ಹೇಳಿದರು .

Key words: leadership -Siddaramaiah: – corrupt- BJP –government-DK Shivakumar

ENGLISH SUMMARY…

Let us all work under the leadership of Siddaramaiah: Let us drive away BJP – DKS
Davanagere, August 3, 2022 (www.justkannada.in): “Let us all pledge to work under the leadership of Siddaramaiah. Let us face the coming elections under the mass leadership. Let us drive away the corrupt BJP government in the state,” KPCC President D.K. Shivakumar called upon the Congress party activists today.
He participated in the 75th Birthday celebrations of the former Chief Minister Siddaramaiah, held at the S.S. Grounds, in Davanagere today.
In his address, D.K. Shivakumar said, “Today is Siddaramaiah’s birthday celebration. Our country has completed 75 years of independence. Hence, it is celebration for the entire country along with Congress party. Congress high command led by Rahul and Sonia Gandhi had appointed Siddaramaiah as the Chief Minister in 2013. Siddaramaiah was sworn-in as the CM on Basava Jayanti day. We all have seen his administration. Congress follows Basavanna’s principles. I indeed was happy when I heard about Siddaramotsava. I thank Rahul Gandhi for attending this historic program.”
“Siddaramaiah introduced several poor-friendly programs like ‘Annabhagya’. Please don’t project him as the leader of the backward classes. He is indeed a leader of the masses and all religions. I wish him good health and strength to serve the state,” he added.
Keywords: Siddaramotsava/ Davanagere/ D.K. Shivakumar