ಬೆಂಗಳೂರು,ನವೆಂಬರ್ ,10,2020(www.justkannada.in): ವಿಧಾನಪರಿಷತ್ ನ ಬೆಂಗಳೂರು ಶಿಕ್ಷಕರ ಕ್ಷೇತ್ರದ ಚುನಾವಣಾ ಫಲಿತಾಂಶ ಹೊರಬೀಳುತ್ತಿದ್ದು ಈ ನಡುವೆ ಬಿಜೆಪಿ ಅಭ್ಯರ್ಥಿ ಪುಟ್ಟಣ್ಣ ಜಯಭೇರಿ ಬಾರಿಸಿದ್ಧಾರೆ.
ಬೆಂಗಳೂರು ಶಿಕ್ಷಕರ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿ ಪುಟ್ಟಣ್ಣ 2200 ಪ್ರಥಮ ಪ್ರಾಶಸ್ತ್ಯದ ಮತಗಳಿಂದ ಗೆಲುವು ಸಾಧಿಸಿದ್ದಾರೆ. ಈ ಮೂಲಕ ಪುಟ್ಟಣ್ಣ ಸತತ ನಾಲ್ಕನೇ ಬಾರಿಗೆ ಜಯ ಸಾಧಿಸಿದ್ದಾರೆ. ಇನ್ನು ಪುಟ್ಟಣ್ಣ ಅವರ ಗೆಲುವಿನ ಬಗ್ಗೆ ಚುನಾವಣಾ ಆಯೋಗದಿಂದ ಅಧಿಕೃತ ಘೋಷಣೆಯೊಂದೇ ಬಾಕಿ ಇದೆ.
ಈಶಾನ್ಯ ಶಿಕ್ಷಕರ ಕ್ಷೇತ್ರದ ಮತ ಎಣಿಕೆ ಕಾರ್ಯ ನಡೆಯುತ್ತಿದ್ದು, ಒಟ್ಟು ಚಲಾವಣೆಯ 21437 ಮತಗಳ ಪೈಕಿ ಪ್ರಥಮ ಪ್ರಾಶಸ್ಯದ ಪ್ರಥಮ ಸುತ್ತಿನ 7000 ಮತ ಎಣಿಕೆ ಕಾರ್ಯ ಮುಗಿದಿದ್ದು, ಇದರಲ್ಲಿ ಬಿ.ಜೆ.ಪಿ. ಪಕ್ಷದ ಶಶೀಲ ಜಿ.ನಮೋಶಿ ಅವರು 956 ಮತಗಳ ಅಂತರದಿಂದ ಮುನ್ನಡೆ ಸಾಧಿಸಿದ್ದಾರೆ.
ಮತಗಳ ವಿವರ:
ತಿಮ್ಮಯ್ಯ ಪುರ್ಲೆ(ಜೆ.ಡಿ.ಎಸ್)-983
ಶರಣಪ್ಪ ಮಟ್ಟೂರು (ಕಾಂಗ್ರೆಸ್)-2192
ಶಶೀಲ ಜಿ. ನಮೋಶಿ(ಬಿ.ಜೆ.ಪಿ)-3148
ವಾಟಾಳ ನಾಗರಾಜ( ವಾಟಾಳ ಪಕ್ಷ)-15
ಡಾ.ಚಂದ್ರಕಾಂತ ಸಿಂಗೆ(ಇಂಡಿಪೆಂಡೆಂಟ್)-26
Key words: legislative council-Bengaluru Teachers- constituency- BJP candidate –Puttanna-won