ಬೆಂಗಳೂರು,ಫೆಬ್ರವರಿ,28,2024(www.justkannada.in): ಪಾಕ್ ಪರ ಘೋಷಣೆ ಕೂಗಿದ ಆರೋಪ ಸಂಬಂಧ ವಿಧಾನಮಂಡಲ ಅಧಿವೇಶನದಲ್ಲಿ ಪ್ರಸ್ತಾಪವಾಗಿ ಕಲಾಪ ಗದ್ದಲ ಗಲಾಟೆಗಳಲ್ಲಿ ಮುಳುಗಿದೆ.
ವಿಧಾನಸಭೆಯಲ್ಲಿ ಈ ವಿಚಾರವನ್ನ ವಿಪಕ್ಷನಾಯಕ ಆರ್.ಅಶೋಕ್ ಪ್ರಸ್ತಾಪಿಸಿ ಸರ್ಕಾರದ ವಿರುದ್ದ ಗುಡುಗಿದರೆ ಇತ್ತ ವಿಧಾನಪರಿಷತ್ ನಲ್ಲೂ ಪಾಕ್ ಪರ ಘೋಷಣೆ ಕೂಗಿದ ಆರೋಪ ಪ್ರಸ್ತಾಪವಾಗಿ ಗದ್ದಲ ಉಂಟಾಗಿದೆ.
ಪರಿಷತ್ ಕಲಾಪ ವೇಳೆ ಅಬ್ದುಲ್ ಜಬ್ಬಾರ್ ಮತ್ತು ರವಿಕುಮಾರ್ ನಡುವೆ ಗಲಾಟೆ ನಡೆದಿದೆ. ಬಿಜೆಪಿ ಎಂಎಲ್ ಸಿ ರವಿಕುಮಾರ್ ವಿರುದ್ದ ಕಾಂಗ್ರೆಸ್ ಸದಸ್ಯ ಅಬ್ದುಲ್ ಜಬ್ಬಾರ್ ಏಕವಚನ ಪ್ರಯೋಗಿಸಿದರು. ರವಿ ಕುಮಾರ್ ಬಾಯಿ ಬಿಟ್ಟರೇ ಬೆಂಕಿ ಹಚ್ಚೋದೇ ಕೆಲಸ. ಮೊದಲು ಅವನ ಬಾಯಿ ಬಂದ್ ಮಾಡಿಸಿ ಎಂದು ಏಕವಚನದಲ್ಲಿ ವಾಗ್ದಾಳಿ ನಡೆಸಿದರು.
ಈ ವೇಳೆ ಕೋಪಗೊಂಡು ಸ್ಥಾನದಿಂದ ಬಂದ ರವಿಕುಮಾರ್, ಏಕವಚನದಲ್ಲಿ ಮಾತನಾಡಿದ್ರೆ ಸರಿಯಿಲ್ಲ ಎಂದು ಕಿಡಿಕಾರಿದರು. ಈ ಸಮಯದಲ್ಲಿ ಗದ್ದಲ ಉಂಟಾಗಿ ಗಲಾಟೆ ಕೈ ಕೈ ಮಿಲಾಯಿಸುವ ಹಂತಕ್ಕೆ ತಲುಪಿದ್ದು ಬಿಜೆಪಿ ಸದಸ್ಯರು ಸದನದ ಬಾವಿಗಿಳಿದು ಪ್ರತಿಭಟನೆಗೆ ಮುಂದಾದರು. ಈ ವೇಳೆ ಮಾರ್ಷೆಲ್ ಗಳು ಆಗಮಿಸಿ ತಡೆದಿದ್ದಾರೆ. ನಂತರ ಕಲಾಪ ಮುಂದೂಡಲಾಯಿತು.
Key words: legislative –council-bjp-congress- singular