ಬೆಂಗಳೂರು,ಡಿಸೆಂಬರ್,15,2020(www.justkannada.in): ಸಭಾಪತಿ ವಿರುದ್ಧ ಅವಿಶ್ವಾಸ ನಿರ್ಣಯ ಮತ್ತು ಗೋಹತ್ಯೆ ನಿಷೇಧ ಕಾಯ್ದೆ ಮಂಡನೆ ಸಂಬಂಧ ಇಂದು ವಿಧಾನಪರಿಷತ್ ಕಲಾಪ ನಡೆಯುತ್ತಿದ್ದು, ಈ ಮಧ್ಯೆ ಕಲಾಪ ಆರಂಭವಾಗುತ್ತಿದ್ದಂತೆ ಗದ್ದಲ ಗಲಾಟೆ ನಡೆದಿದೆ.
ಪರಿಷತ್ ಸಭಾಪತಿ ಸ್ಥಾನದಲ್ಲಿ ಕೂತಿದ್ಧ ಉಪಸಭಾಪತಿ ಧರ್ಮೇಗೌಡರನ್ನ ಕಾಂಗ್ರೆಸ್ ಸದಸ್ಯರು ಎಳೆದಾಡಿದ್ದಾರೆ. ಸಭಾಪತಿಸ್ಥಾನದಲ್ಲಿ ಕೂರದಂತೆ ಎಳೆದು ಹಾಕಿದ ಹಿನ್ನೆಲೆ ನಂತರ ಬಿಜೆಪಿ ಸದಸ್ಯರು ಉಪಸಭಾಪತಿ ಧರ್ಮೇಗೌಡರನ್ನ ವಾಪಸ್ ಕರೆ ತಂದು ಆಸನದಲ್ಲಿ ಕೂರಿಸಲು ಮುಂದಾದರು. ಈ ವೇಳೆ ಕಾಂಗ್ರೆಸ್ ಬಿಜೆಪಿ ಸದಸ್ಯರ ನಡುವೆ ವಾಕ್ಸಮರ ನಡೆದು ತಳ್ಳಾಟ ನೂಕಾಟ ನಡೆದಿದೆ.
ಇನ್ನು ಈ ವೇಳೆ ಕಾಂಗ್ರೆಸ್ ಸದಸ್ಯರು ಸಭಾಪತಿ ಪೀಠದ ಬಳಿ ವಸ್ತು ಕಿತ್ತೆಸೆದು ಪೇಪರ್ ಹರಿದು ಹಾಕಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಇನ್ನು ಬಿಜೆಪಿ ಕಾಂಗ್ರೆಸ್ ಸದಸ್ಯರ ನಡುವೆ ಭಾರಿ ಗದ್ದಲ ಗಲಾಟೆ ಉಂಟಾಗಿದ್ದು ಮಾರ್ಷೆಲ್ ಗಳು ಪರಿಸ್ಥಿತಿ ನಿಯಂತ್ರಿಸಲು ಹರಸಾಹಸ ಪಟ್ಟರು.
ವಿಧಾನಪರಿಷತ್ ನಲ್ಲಿ ಸಭಾಪತಿ ವಿರುದ್ದದ ಬಿಜೆಪಿಯ ಅವಿಶ್ವಾಸ ನಿರ್ಣಯಕ್ಕೆ ಜೆಡಿಎಸ್ ಬೆಂಬಲ ನೀಡಿದೆ. ಇನ್ನು ಭಾರಿ ಗದ್ದಲ ಗಲಾಟೆ ಉಂಟಾದ ಹಿನ್ನೆಲೆ ವಿಧಾನಪರಿಷತ್ ಸಭಾಪತಿ ಪ್ರತಾಪ್ ಚಂದ್ರಶೆಟ್ಟಿ ಕಲಾಪವನ್ನ ಅನಿರ್ಧಿಷ್ಟಾವಧಿಗೆ ಮುಂದೂಡಿದ್ದಾರೆ.
english summary…
Commotion in Legislative Council: Wordy duel between Cong and BJP members
Bengaluru, Dec. 15, 2020 (www.justkannada.in): The legislative council witnessed a commotion today during the tabling of the anti-cow slaughter bill and no-confidence motion against the council chairman.
The BJP and Congress members landed in a wordy duel leading to the commotion. The JDS has extended its support to the BJP’s no-confidence motion move. Legislative Council Chairman Pratap Chandrashetty has adjourned the house indefinitely.
Keywords: Legislative Council/ Commotion/ BJP/ Congress
Key words: legislative- council-congress-bjp- -adjourned