ಬೆಂಗಳೂರು,ಡಿಸೆಂಬರ್,15,2020(www.justkannada.in): ವಿಧಾನಪರಿಷತ್ ನಲ್ಲಿ ಉಪಸಭಾಪತಿಯನ್ನ ಎಳೆದಾಡಿದ ಕಾಂಗ್ರೆಸ್ ಸದಸ್ಯರ ನಡೆ ಖಂಡನೀಯ. ಇದು ಪ್ರಜಾಪ್ರಭುತ್ವಕ್ಕೆ ಕಳಂಕ ಎಂದು ಕಂದಾಯ ಸಚಿವ ಆರ್.ಅಶೋಕ್ ಕಿಡಿಕಾರಿದರು.
ವಿಧಾನ ಪರಿಷತ್ ನಲ್ಲಿ ಇಂದು ನಡೆದ ಹೈಡ್ರಾಮ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಸಚಿವ ಆರ್.ಅಶೋಕ್, ವಿಧಾನಪರಿಷತ್ ನಲ್ಲಿ ನಡೆದ ಘಟನೆ ಪ್ರಜಾಪ್ರಭುತ್ವದಲ್ಲಿ ಒಂದು ಕಳಂಕವಾಗಿದೆ. ಅವಿಶ್ವಾಸದ ನಿರ್ಣಯದ ಪರ ಮತ ಹಾಕಿಸುವುದು ಪ್ರಜಾಪ್ರಭುತ್ವ, ಅವಿಶ್ವಾಸವೇ ನಡೆಯಬಾರದು ಅಂದ್ರೆ ಪ್ರಜಾಪ್ರಭುತ್ವ ಎಲ್ಲಿ ಉಳಿಯುತ್ತೆ? ಎಂದು ಪ್ರಶ್ನಿಸಿದರು.
ಬಹುಮತವಿರುವವರು ಸಭಾಪತಿಗಳಾಗುತ್ತಾರೆ. ಕಾಂಗ್ರೆಸ್ ಗೆ ಬಹುಮತ ಇಲ್ಲ. ಹೀಗಾಗಿ ಗಲಾಟೆ ಮಾಡಿದ್ದಾರೆ. ಕಾಂಗ್ರೆಸ್ ನವರದ್ದು ನಾಟಕ. ದೇಶದಲ್ಲಿ ತುರ್ತು ಪರಿಸ್ಥಿತಿ ತಂದವರು ಅವರು. ಅವರಿಗೆ ಪ್ರಜಾಪ್ರಭುತ್ವದ ಮೇಲೆ ನಂಬಿಕೆ ಇಲ್ಲ ಎಂದು ಸಚಿವ ಆರ್.ಅಶೋಕ್ ವಾಗ್ದಾಳಿ ನಡಸಿದರು.
Key words: legislative council- Congress –democracy- Minister -R. Ashok