ಮೈಸೂರು,ಜನವರಿ,12,2021(www.justkannada.in): ಇತ್ತೀಚೆಗೆ ವಿಧಾನ ಪರಿಷತ್ ನಲ್ಲಿ ನಡೆದ ಗದ್ಧಲ ಗಲಾಟೆ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ವಿಧಾನಪರಿಷತ್ ಹಿರಿಯ ಸದಸ್ಯ ಅಲ್ಲಂ ವೀರಭಧ್ರಪ್ಪ, ಮುಂದಿನ ಅಧಿವೇಶನದಲ್ಲಿ ಎಲ್ಲರೂ ಪ್ರಮಾಣ ಮಾಡಬೇಕು. ನಾವು ಮುಂದೆ ಆ ರೀತಿ ನಡೆದುಕೊಳ್ಳುವುದಿಲ್ಲ ಎಂದು ಪ್ರಮಾಣ ಮಾಡಿ ಸದನ ಶುರು ಮಾಡಬೇಕು ಎಂದು ಸಲಹೆ ನೀಡಿದ್ದಾರೆ.
ಮೈಸೂರಿನಲ್ಲಿ ಈ ಬಗ್ಗೆ ಇಂದು ಮಾತನಾಡಿದ ಎಂಎಲ್ ಸಿ ಅಲ್ಲಂ ವೀರಭಧ್ರಪ್ಪ, ಅಂದು ನಡೆದದ್ದು ಗದ್ದಲವಲ್ಲ, ದುರ್ಘಟನೆ. ಮುಂದಿನ ಅಧಿವೇಶನದಲ್ಲಿ ನಾವು ಮುಂದೆ ಆ ರೀತಿ ನಡೆದುಕೊಳ್ಳುವುದಿಲ್ಲ ಎಂದು ಎಲ್ಲರೂ ಪ್ರಮಾಣ ಮಾಡಬೇಕು ಎಂದು ತಿಳಿಸಿದರು.
ಪರಿಷತ್ ಬೇಕೊ ಬೇಡವೋ ಎಂಬ ಚರ್ಚೆ ನಡೆಯುತ್ತಿರುವ ವಿಚಾರ ಕುರಿತು ಪ್ರತಿಕ್ರಿಯಿಸಿದ ಅಲ್ಲಂ ವೀರಭದ್ರಪ್ಪ, ಪರಿಷತ್ ರದ್ದು ಮಾಡೋದು ಬಿಡೋದು ಸರ್ಕಾರಕ್ಕೆ ಬಿಟ್ಟ ವಿಚಾರ. ವಿಧಾನಸಭೆಗಿಂತ ವಿಧಾನ ಪರಿಷತ್ ನಲ್ಲಿ ಹೆಚ್ಚು ಚರ್ಚೆ ಆಗುತ್ತಿತ್ತು. ನಾನು ಈ ಹಿಂದೆ ಸಚಿವನಾಗಿದ್ದ ವೇಳೆ ಪರಿಷತ್ ಸದಸ್ಯರ ಪ್ರಶ್ನೆಗಳಿಗೆ ಭಯ ಬೀಳುತಿದ್ದೆ. ಹೀಗಾಗಿಯೇ ಪರಿಷತ್ತನ್ನ ಬುದ್ದಿಜೀವಿಗಳು, ಹಿರಿಯರ ಮನೆ ಅಂತಿದ್ದರು. ಈಗ ಆ ರೀತಿ ಇಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
Key words: legislative council-riot-case – Swear-session-mysore- MLC- Allam Veerabhadrappa