ಮೈಸೂರು,ಅಕ್ಟೋಬರ್,19,2021(www.justkannada.in): ಮೈಸೂರು ತಾಲೂಕಿನ ಜಯಪುರ ಗ್ರಾಮದಲ್ಲಿ ಕೋಳಿ ಫಾರ್ಮ್ ಗೆ ಲಗ್ಗೆ ಇಟ್ಟು ಕೋಳಿ ತಿಂದ ಚಿರತೆ ಕೊನೆಗೂ ಸೆರೆಯಾಗಿದೆ.
ಜಯಪುರದ ಮೂಡೆಗೌಡ ಎಂಬವರ ಕೋಳಿ ಫಾರ್ಮ್ ನಲ್ಲಿ ಚಿರತೆ ಸೆರೆಯಾಗಿದೆ.
ಜಯಪುರ ಗ್ರಾಮದ ರೈತ ಬಸಪ್ಪ ಅವರು ತಮ್ಮ ತೋಟದ ಮನೆಯಲ್ಲಿ ಫಾರ್ಮ್ನಲ್ಲಿ ಕೋಳಿ ಸಾಕಿದ್ದರು. ಈ ಫಾರ್ಮ್ಗೆ ಸೋಮವಾರ ರಾತ್ರಿ ಆಗಮಿಸಿದ ಚಿರತೆ ಕೋಳಿಗಳನ್ನು ತಿಂದು ಆರಾಮಾಗಿ ಫಾರ್ಮ್ ನಲ್ಲೇ ರಾತ್ರಿ ಉಳಿದಿದೆ.
ಬೆಳಗಿನ ಜಾವ 4.45ರ ವೇಳೆಗೆ ಕೋಳಿಗಳನ್ನು ನೋಡಲು ಬಸಪ್ಪ ಫಾರ್ಮ್ಗೆ ಆಗಮಿಸಿ ಟಾರ್ಚ್ ಬಿಟ್ಟ ಸಂದರ್ಭ ಚಿರತೆ ಘರ್ಜಿಸಿತು. ತಕ್ಷಣ ಬಾಗಿಲು ಹಾಕಿದ ಬಸಪ್ಪ ಅವರು ಚಿರತೆ ಹೊರ ಹೋಗದಂತೆ ನೋಡಿಕೊಂಡರು.
ಚಿರತೆ ಕೋಳಿ ಫಾರ್ಮ್ನಲ್ಲಿರುವ ಬಗ್ಗೆ ಅರಣ್ಯ ಇಲಾಖೆ ಸಿಬ್ಬಂದಿ ಮಾಹಿತಿ ನೀಡಿದ್ದು, ತಕ್ಷಣ ಸ್ಥಳಕ್ಕೆ ಆಗಮಿಸಿದ ಅರಣ್ಯ ಇಲಾಖೆ ಸಿಬ್ಬಂದಿ ಚಿರತೆಯನ್ನು ಸೆರೆ ಹಿಡಿದಿದ್ದಾರೆ.
Key words: leopard – came – farm -eat –hen-mysore