ಭಾರತದೊಂದಿಗೆ ಮೂರು ಯುದ್ಧಗಳಿಂದ ಪಾಠ ಕಲಿತಿದ್ದೇವೆ: ಶಾಂತಿಯುತ ಮಾತುಕತೆ ಬಯಸಿದ ಪಾಕ್ ಪ್ರಧಾನಿ ಶೆಹಬಾಜ್ ಷರೀಫ್.

ನವದೆಹಲಿ,ಜನವರಿ,17,2023(www.justkannada.in):  ಪಾಕಿಸ್ತಾನದಲ್ಲಿ ಆರ್ಥಿಕ ಪರಿಸ್ಥಿತಿ ಹದಗೆಟ್ಟು ತಿನ್ನುವ ಅನ್ನಕ್ಕೂ ಹಾಹಾಕಾರ ಪಡುವ ಸ್ಥಿತಿ ಉಂಟಾಗಿದೆ. ಈ ಹಿನ್ನೆಲೆಯಲ್ಲಿ ಆರ್ಥಿಕ ಪರಿಸ್ಥಿತಿ ಸುಧಾರಿಸಿಕೊಳ್ಳಲು ಇದೀಗ ಪಾಕಿಸ್ತಾನ ನೆರೆಯ ರಾಷ್ಟ್ರಗಳ ಸಹಕಾರ ಕೇಳಲು ಮುಂದಾಗಿದೆ. ಈ ಮಧ್ಯೆ ಇದೀಗ ಭಾರತದ ಜೊತೆ ಶಾಂತಿಯುತ ಪ್ರಾಮಾಣಿಕ ಮಾತುಕತೆಯ ಬಯಕೆಯನ್ನ ಪಾಕ್  ಪ್ರಧಾನಿ ಶೆಹಬಾಜ್ ಷರೀಫ್ ವ್ಯಕ್ತಪಡಿಸಿದ್ದಾರೆ.

ಸಂದರ್ಶನವೊಂದರಲ್ಲಿ ಮಾತನಾಡಿರುವ ಪಾಕಿಸ್ತಾನ ಪ್ರಧಾನಿ ಶೆಹಬಾಜ್ ಷರೀಫ್, ಭಾರತದೊಂದಿಗೆ ಮೂರು ಯುದ್ಧಗಳ ನಂತರ ಪಾಕಿಸ್ತಾನ ಪಾಠ ಕಲಿತಿದೆ.  ಒಟ್ಟಿಗೆ ಕುಳಿತು ಮಾತನಾಡಿ ಶಾಂತಿ ಬಯಸೋಣ ಎಂದು ಹೇಳಿದ್ದಾರೆ.

‘ನಾವು ದೇಶದಲ್ಲಿನ ಬಡತನವನ್ನು ಕಡಿಮೆ ಮಾಡಲು, ಸಮೃದ್ಧಿ ಸಾಧಿಸಲು. ನಮ್ಮ ಜನರಿಗೆ ಶಿಕ್ಷಣ ಮತ್ತು ಆರೋಗ್ಯ ಸೌಲಭ್ಯದ ಜೊತೆಗೆ ಉದ್ಯೋಗ ಒದಗಿಸಲು ಬಯಸುತ್ತೇವೆಯೇ ಹೊರತು ಬಾಂಬ್ ದಾಳಿ ನಡೆಸುವುದಿಲ್ಲ. ನಿಮ್ಮ ಸಂಪನ್ಮೂಲಗಳನ್ನು ಮದ್ದುಗುಂಡುಗಳಿಗಾಗಿ ವ್ಯರ್ಥ ಮಾಡಲು ನಾವು ಬಯಸುವುದಿಲ್ಲ ಎಂದು ಶೆಹಬಾಜ್ ಷರೀಫ್ ಹೇಳಿದ್ದಾರೆ.

ನರೇಂದ್ರ ಮೋದಿಯವರಿಗೆ ಮನವಿ ಮಾಡುತ್ತೇನೆ, ಪಾಕಿಸ್ತಾನವು ಶಾಂತಿಯನ್ನು ಬಯಸುತ್ತದೆ ಆದರೆ ಕಾಶ್ಮೀರದಲ್ಲಿ ಈಗ ನಡೆಯುತ್ತಿರುವ ಸೈನಿಕ ಅಥವಾ ಸರ್ಕಾರ ಕಾರ್ಯಚರಣೆಯನ್ನು ನಿಲ್ಲಿಸಬೇಕು ಎಂದು ಹೇಳಿದ್ದಾರೆ. ಮಾನವ ಹಕ್ಕುಗಳ ಉಲ್ಲಂಘನೆಯ ಆರೋಪಕ್ಕೆ ಷರೀಫ್ ತರಾಟೆಗೆ ತೆಗೆದುಕೊಂಡರು ಮತ್ತು ಈ ಬಗ್ಗೆ ಯಾವುದೇ ನಿರ್ಲಕ್ಷಿ ಇಲ್ಲ ಎಂದು ತಿಳಿಸಿದ್ದಾರೆ.

Key words: Lessons- three –wars- with- India- Pak PM