ಮೊದಲು ಒಮ್ಮತದ ಮೈತ್ರಿ ಅಭ್ಯರ್ಥಿ ಘೋಷಿಸಲಿ :  ಬಿಜೆಪಿ-ಜೆಡಿಎಸ್‌ ಕಾಲೆಳೆದ ಕೈ ಅಭ್ಯರ್ಥಿ ಮರಿತಿಬ್ಬೇಗೌಡ.

Let's announce a consensus alliance candidate first: Marithibbegowda

ಮೈಸೂರು, ಮೇ.14, 2024: (www.justkannada.in news) ಬಿಜೆಪಿ ಜೆಡಿಎಸ್ ನಲ್ಲಿ ಯಾರು ಅಭ್ಯರ್ಥಿ ಅನ್ನೋದೇ ಗೊಂದಲವಿದೆ. ಮೊದಲು ಅವರು ಅವರ ಒಮ್ಮತ ಅಭ್ಯರ್ಥಿಯನ್ನ ಘೋಷಣೆ ಮಾಡಲಿ ಎಂದು ಕಾಂಗ್ರೆಸ್‌ ಅಭ್ಯರ್ಥಿ ಮರಿತಿಬ್ಬೇಗೌಡ ಸವಾಲು ಹಾಕಿದರು.

ದಕ್ಷಿಣ ಶಿಕ್ಷಕರ ಕ್ಷೇತ್ರ ಚುನಾವಣೆ ಹಿನ್ನೆಲೆ. ಕಾಂಗ್ರೆಸ್ ಅಭ್ಯರ್ಥಿ ಮರಿತಿಬ್ಬೇಗೌಡ ಇಂದು ನಾಮಪತ್ರ ಸಲ್ಲಿಸಿದರು.. ಮೈಸೂರಿನ ಪ್ರಾದೇಶಿಕ ಕಚೇರಿಯಲ್ಲಿ ನಾಮಪತ್ರ ಸಲ್ಲಿಸಿದ ವೇಳೆ ಸಿಎಂ ಸಿದ್ದರಾಮಯ್ಯ, ಸಚಿವರಾದ ಹೆಚ್ ಸಿ ಮಹದೇವಪ್ಪ,ಮಧು ಬಂಗಾರಪ್ಪ,ಚಲುವರಾಯಸ್ವಾಮಿ ಜತೆಗಿದ್ದರು.

ಬಳಿಕ ಮಾಧ್ಯಮಗಳ ಜತೆ ಮಾತನಾಡಿದ ಮರಿತಿಬ್ಬೇಗೌಡ ಅವರು ಹೇಳಿದಿಷ್ಟು..

ನನ್ನನ್ನು ನಾಲ್ಕು ಜಿಲ್ಲೆಯ ಶಿಕ್ಷಕರು ಸೇರಿ ನಾಲ್ಕು ಬಾರಿ ಆಯ್ಕೆ ಮಾಡಿದ್ದಾರೆ. ನಾನು ಮೊದಲ ಬಾರಿಗೆ ಕಾಂಗ್ರೆಸ್, ಎರಡನೇ ಬಾರಿ ಪಕ್ಷೇತರ, ಮೂರು ಮತ್ತು ನಾಲ್ಕನೇ ಬಾರಿ ಜೆಡಿಎಸ್ ನಿಂದ ಆಯ್ಕೆಗೊಂಡಿದ್ದೆ. ಈಗ ಐದನೆ ಬಾರಿಗೆ ಮತ್ತೆ  ನನ್ನ ತವರು ಪಕ್ಷ ಕಾಂಗ್ರೆಸ್ ಗೆ ಬಂದಿದ್ದೇನೆ. ಈ ಕ್ಷೇತ್ರದಲ್ಲಿ ಶಿಕ್ಷಕರ ಪಾವಿತ್ರತೆ ಕಾಪಾಡಿಕೊಂಡು ಬಂದಿದ್ದೇನೆ. ನನ್ನ ಅಧಿಕಾರದ ಅವಧಿಯಲ್ಲಿ ಶಿಕ್ಷಕರ ಭಾವನೆಗೆ ಧಕ್ಕೆ ತರದೇ ಕೆಲಸ ಮಾಡಿದ್ದೇನೆ.

ಸಿಎಂ, ಡಿಸಿಎಂ ಇಬ್ಬರು ಕೂಡ ಶಿಕ್ಷಕರ ಪರವಾಗಿ ಇದ್ದಾರೆ. ಏಳನೇ ವೇತನ ಜಾರಿ ಮಾಡುವುದಾಗಿಯೂ ಭರವಸೆ ನೀಡಿದ್ದಾರೆ. ಶಿಕ್ಷಣದ ಬಗ್ಗೆ ಕಾಳಜಿಯುಳ್ಳ ನಾಯಕರಾಗಿದ್ದಾರೆ. ನನ್ನ ಹೋರಾಟ ಶಿಕ್ಷಕರ ಪರವಾಗಿ ಮಾತ್ರ ಶಿಕ್ಷಕರ ಕ್ಷೇತ್ರದಲ್ಲಿ ಅನೇಕ ಸುಧಾರಣೆ ಆಗಬೇಕಿದೆ ಎಂದರು.

ಮೈತ್ರಿ ಬಗ್ಗೆ ವ್ಯಂಗ್ಯ :

ಬಿಜೆಪಿ ಜೆಡಿಎಸ್ ಮೈತ್ರಿ ವಿಚಾರ ಪ್ರಸ್ತಾಪಿಸಿ ಇದು ಕಾಂಗ್ರೆಸ್‌ ಅಭ್ಯರ್ಥಿ ನಾಗಾಲೋಟಕ್ಕೆ ಅಡ್ಡಿಯಾಗುವುದಿಲ್ಲವೇ ಎಂದು ಪ್ರಶ್ನಿಸಿದಾಗ, ಆ ಎರಡು ಪಕ್ಷಗಳಲ್ಲಿ ಅಭ್ಯರ್ಥಿ ಯಾರಾಗಬೇಕು ಎಂಬ ಬಗ್ಗೆ ಸ್ಪಷ್ಟತೆ ಇಲ್ಲ. ಬಿಜೆಪಿ ಅಭ್ಯರ್ಥಿ ಘೋಷಿಸುತ್ತಿದ್ದಂತೆ ಜೆಡಿಎಸ್‌ , ನಮಗೆ ಕ್ಷೇತ್ರ ಬೇಕು ಎಂದು ತಗಾದೆ ತೆಗೆದಿದೆ. ಹಾಗಾಗಿ ಮೊದಲು ಅವರು ಒಮ್ಮತದ ಮೈತ್ರಿ ಅಭ್ಯರ್ಥಿ ಘೋಷಣೆ ಮಾಡಲಿ ಎಂದು ಜೆಡಿಎಸ್‌ ಹಾಗೂ ಬಿಜೆಪಿ ಮುಖಂಡರ ಕಾಲೆಳೆದರು.

ನೈರುತ್ಯ ಪದವೀಧರ ಕ್ಷೇತ್ರದ ಚುನಾವಣೆ ಹಿನ್ನೆಲೆ.

ಕಾಂಗ್ರೆಸ್ ಅಭ್ಯರ್ಥಿ ಮಂಜುನಾಥ್ ನಾಮಪತ್ರ ಸಲ್ಲಿಕೆ. ಮೈಸೂರಿನ ಪ್ರಾದೇಶಿಕ ಕಚೇರಿಯಲ್ಲಿ ನಾಮಪತ್ರ ಸಲ್ಲಿಕೆ. ಚುನಾವಣೆ ಅಧಿಕಾರಿ ಡಾ ಪ್ರಕಾಶ್ ಅವರಿಗೆ ನಾಮಪತ್ರ ಸಲ್ಲಿಕೆ. ನಾಮಪತ್ರ ಸಲ್ಲಿಕೆಯಲ್ಲಿ ಸಿಎಂ ಸಿದ್ದರಾಮಯ್ಯ, ಮಧು ಬಂಗಾರಪ್ಪ ಭಾಗಿ.

key words :  Let’s announce, a consensus alliance candidate,  Marithibbegowda

 

summary: 

There is confusion as to who will be the candidate in the BJP-JD(S). Congress candidate Marithibbegowda challenged them to first announce their consensus candidate.

 

ದಕ್ಷಿಣ ಶಿಕ್ಷಕರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ನಾಮಪತ್ರ ಸಲ್ಲಿಸಿದ ಮರಿತಿಬ್ಬೇಗೌಡ ಅವರನ್ನು ಹಿರಿಯ ವಕೀಲ ಹಾಗೂ ಲಾಗೈಡ್ ಕನ್ನಡ ಕಾನೂನು ಮಾಸಪತ್ರಿಕೆ ಗೌರವ ಸಂಪಾದಕ ಹೆಚ್ ಎನ್ ವೆಂಕಟೇಶ ಮತ್ತು ಮೈಸೂರು ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎಸ್ ಲೋಕೇಶ್ ಅಭಿನಂದಿಸಿ ಶುಭಕೋರಿದರು.

I have been selected four times by teachers from four districts. I was elected from the Congress for the first time, an independent for the second time, and a JD(S) for the third and fourth time. Now, for the fifth time, I have come back to my home party, the Congress. I have maintained the sanctity of teachers in this field. During my tenure, I have worked without hurting the sentiments of teachers.