ಬೆಂಗಳೂರು,ಅ,4,2019(www.justkannada.in): ರಾಜ್ಯದ ನೆರೆ ಹಾವಳಿ ಬಗ್ಗೆ ವಿಸ್ತೃತವಾಗಿ ಮತ್ತೆ ಪತ್ರ ಬರೆಯುತ್ತೇನೆ. ನನಗೆ ಗೊತ್ತಾಗುತ್ತೆ ಆರ್ಥಿಕ ಬಿಕ್ಕಟ್ಟು ಇದೆ. ಆದ್ರೆ ಕೇಂದ್ರ ಹೇಗಾದ್ರೂ ಮಾಡಿ ಪರಿಹಾರ ಕೊಡಲಿ ಎಂದು ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರು ಆಗ್ರಹಿಸಿದರು.
ಜೆಪಿ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರು. 38 ಸಾವಿರ ಕೋಟಿ ಸರಿಯಾಗಿಲ್ಲ ಅಂದ್ರೆ ಹತ್ತು ಸಾವಿರ ಕೋಟಿ ಆದ್ರೂ ಕೊಡಲಿ. ಈಗಿನ ಸ್ಥಿತಿ ನೋಡಿದ್ರೆ, ಕೇಂದ್ರ ಮತ್ತು ರಾಜ್ಯದ ಮಧ್ಯೆ ಕೊಂಡಿ ಕಳಚಿದೆಯಾ? ಅನ್ನೋ ಪ್ರಶ್ನೆ ಮೂಡಿದೆ. ನಾವು ಏನು ಮಾಡಿದ್ರೂ ನಡೆಯುತ್ತೇ ಅನ್ನೋ ಧೋರಣೆ ಕೇಂದ್ರ ಸರ್ಕಾರದ್ದು ಇವತ್ತಿನ ಪರಿಸ್ಥಿತಿಗೆ ಇದೇ ಕಾರಣ ಎಂದು ಟೀಕಿಸಿದರು.
ರಾಜ್ಯದ ಬಿಜೆಪಿ ಸಂಸದರಿಗೆ ಹೆದರಿಕೆ ಶುರುವಾಗಿದೆ. ಮೋದಿ ಎದರು ಮಾತನಾಡದಿರುವುದು ಶಿಸ್ತು ಅಲ್ಲ. ಅದು ಅವರಿಗಿರುವ ಭಯ. ಚಕ್ರವರ್ತಿ ಸೂಲಿಬೆಲೆ ಅವರು ಉತ್ತಮವಾಗಿ ನೆರೆಯ ವಿಷಯದಲ್ಲಿ ತಮ್ಮ ಅಭಿಪ್ರಾಯ ತಿಳಿಸಿದ್ದಾರೆ ಅವರಿಗೆ ಅಭಿನಂದನೆ ಸಲ್ಲಿಸುತ್ತೀನಿ ಎಂದರು.
ಇಲ್ಲೀವರೆಗೂ ಸರ್ಕಾರದ ನಡವಳಿಕೆ ಮೇಲೆ ಆಕ್ರೋಶದ ಮಾತು ಆಡಲಿಲ್ಲ ನನ್ನ ಮನಸ್ಸಿಗೆ ತೀವ್ರ ನೋವುಂಟಾಗಿದೆ. ರಾಜ್ಯದಲ್ಲಿ ಭೀಕರವಾದ ಅತಿವೃಷ್ಠಿ ಇದೆ. ಉತ್ತರ ಕರ್ನಾಟಕದಲ್ಲಿ ಅತಿ ಹೆಚ್ಚಾಗಿ ಕೃಷ್ಣಾ ಮತ್ತು ಉಪನದಿಗಳಲ್ಲಿ ಅನಿರೀಕ್ಷಿತ ಪ್ರವಾಹ ಬಂದಿದೆ. ಕೋಯ್ನಾ ಡ್ಯಾನಿಂದ ಐದು ಲಕ್ಷಕ್ಕೂ ಹೆಚ್ಚು ಕ್ಯೂಸೆಕ್ಸ್ ನೀರು ಬಿಟ್ಟಿದ್ದಾರೆ. ಆಗಿರುವ ಅನಾಹುತವನ್ನ ಎಲ್ಲಾ ಪಕ್ಷದ ಮುಖಂಡರು ನೋಡಿದ್ದಾರೆ. ಕೇಂದ್ರದ ಕ್ಯಾಬಿನೆಟ್ ನಲ್ಲಿ ಲೋಕಸಭಾ ಸದಸ್ಯರ ಬಗ್ಗೆ ಕಠಿಣವಾದ ಶಬ್ದದಿಂದ ಆಪಾದನೆ ಮಾಡಿದ್ದಾರೆ. ನೆರೆ ನಿಭಾಯಿಸೋಕೆ ಆಗಲ್ವಾ ಅಂತ. ನಾನು ಈಗ ಲೋಕಸಭೆಯಲ್ಲಿ ಇಲ್ಲ, ಖರ್ಗೆಯವರೂ ಇಲ್ಲ ಅದರ ಬಗ್ಗೆ ಚರ್ಚೆ ಮಾಡೋಕೆ ಹೋಗಲ್ಲ, ಮಹಾಜನತೆ ತೀರ್ಪು ಕೊಟ್ಟಿದ್ದಾರೆ. ರಾಜ್ಯದ ನಷ್ಟದ ವರದಿಯನ್ನ ಸರಿಯಾಗಿ ಮಾಡಿಲ್ಲ ಅಂತ ವರದಿ ವಾಪಸ್ ಕಳಿಸಿದ್ದಾರೆ. ಇಂಥ ಘಟನೆ ರಾಜ್ಯದಲ್ಲಿ ಮೊದಲ ಬಾರಿಗೆ ನಡೆದಿದೆ. ನಷ್ಟದ ಅಂದಾಜನ್ನ ಒಪ್ಪಲಿಕ್ಕೆ ಆಗಲ್ಲ, ಮತ್ತೆ ವರದಿ ಸಂಗ್ರಹಿಸಿ ಕಳುಹಿಸಿ ಅಂತ ಹೇಳಿದ್ದಾರೆ ಎಂದರು.
ನೀವೇ ಕೊಟ್ಟ ವರದಿ ನಿಮ್ಮದೇ ಕೇಂದ್ರ ಸರ್ಕಾರ ವಾಪಾಸ್ ಕಳುಹಿಸಿದೆ ಅಲ್ವಾ..? ಈ ಪರಿಸ್ಥಿತಿಗೆ ಯಾರು ಹೊಣೆ. ಕೇಂದ್ರ ಸರ್ಕಾರಕ್ಕೆ ಜವಾಬ್ದಾರಿ ಇದೆ. ಮುಂದೆನೂ ನಮಗೇ ಮತ ಕೊಡ್ತಾರೆ ಅನ್ನೋ ಭ್ರಮಾ ಲೋಕದಲ್ಲಿ ಇದ್ದಾರೆ ಎಂದು ಕಿಡಿಕಾರಿದ ಹೆಚ್.ಡಿ ದೇವೇಗೌಡರು, ಹತ್ತನೇ ತಾರೀಖು ಪಾದಯಾತ್ರೆ ಇದೆ. ಎಲ್ಲಾ ಕಾರ್ಯಕರ್ತರು, ಸಂಘ ಸಂಸ್ಥೆಯವ್ರು ಬರಬೇಕು ಅಂತ ನಾನು ಮನವಿ ಮಾಡ್ತೇನೆ. ಪಾದಯಾತ್ರೆಯಲಿ ನಾನೂ ಇರ್ತೇನೆ, ಶಾಂತಿಯುತವಾಗಿ ಹೋರಾಟ ಮಾಡ್ತೇವೆ ಎಂದರು.
Key words: letter –central govrnament-flood relief- Former Prime Minister -H. D Deve Gowda.