ಶಿವಮೊಗ್ಗ,ಏಪ್ರಿಲ್,15,2021(www.justkannada.in): ಸಿಎಂ ಬಿಎಸ್ ಯಡಿಯೂರಪ್ಪ ವಿರುದ್ಧ ರಾಜ್ಯಪಾಲರಿಗೆ ಸಚಿವ ಕೆ.ಎಸ್ ಈಶ್ವರಪ್ಪ ಪತ್ರ ಬರೆದಿದ್ದಾರೆಂದು ಸುದ್ದಿಹರಡಿತ್ತು. ಈ ಕುರಿತು ಇಂದು ಸಚಿವ ಕೆ.ಎಸ್ ಈಶ್ವರಪ್ಪ ಸ್ಪಷ್ಟನೆ ನೀಡಿದ್ದಾರೆ.
ಶಿವಮೊಗ್ಗದಲ್ಲಿ ಈ ಕುರಿತು ಇಂದು ಮಾತನಾಡಿದ ಸಚಿವ ಕೆ.ಎಸ್ ಈಶ್ವರಪ್ಪ, ಇಲಾಖೆ ಅನುದಾನ ಕುರಿತು ನಿಯಮದಲ್ಲಿ ವ್ಯತ್ಯಾಸವಿತ್ತು. ಇಲಾಖಾ ನಿಯಮ ಮೀರಿದ್ದರಿಂದ ಅದನ್ನ ರಾಜ್ಯಪಾಲರ ಗಮನಕ್ಕೆ ತಂದಿದ್ದೆ. ಆದರೆ ಈ ವಿಚಾರದಲ್ಲಿ ನನ್ನ ಮತ್ತು ಸಿಎಂ ಬಿಎಸ್ ವೈ ಮಧ್ಯೆ ಭಿನ್ನಮತವಿದೆ ಎಂದು ಸಿದ್ಧರಾಮಯ್ಯ ಹೇಳಿದ್ದಾರೆ. ರಾಜಕೀಯವಾಗು ಬಳಸಿಕೊಂಡಿದ್ದಾರೆ ಎಂದು ಕಿಡಿಕಾರಿದರು.
ಸಿದ್ಧರಾಮಯ್ಯ ವಿರುದ್ಧ ಹುಚ್ಛ, ಬೆಪ್ಪ, ಕುಡುಕರು ಬಳಸುವ ಪದವನ್ನು ಬಳಸಲು ಕೆಲವರು ಹೇಳಿದ್ದರು. ಆದರೆ ನಾನು ಬಳಸಲ್ಲ. ಸಿದ್ಧರಾಮಯ್ಯ ಘನತೆಗೆ ತಕ್ಕಂ ತೆ ಮಾತನಾಡಲಿ ಎಂದು ಸಚಿವ ಕೆ.ಎಸ್ ಈಶ್ವರಪ್ಪ ಟಾಂಗ್ ನೀಡಿದರು.
Key words: Letter – Governor- Minister -KS Eshwarappa -clarified.