ಡ್ರಗ್ಸ್ ದಂಧೆಗೆ ಕಡಿವಾಣ ಹಾಕುವಂತೆ ಎಬಿವಿಪಿಯಿಂದ ಪತ್ರ ಚಳವಳಿ

ಮೈಸೂರು,ಸೆಪ್ಟೆಂಬರ್,26,2020(www.justkannada.in)  : ಡ್ರಗ್ಸ್ ದಂಧೆಯಲ್ಲಿ ತೊಡಗಿಸಿಕೊಂಡಿರುವವರನ್ನು ತಕ್ಷಣವೇ ಬಂಧಿಸಿ ಅವರ ಮೇಲೆ ರಾಷ್ಟ್ರದ್ರೋಹದ ಪ್ರಕರಣ ದಾಖಲಿಸಬೇಕೆಂದು ಆಗ್ರಹಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ವತಿಯಿಂದ ಪತ್ರ ಚಳವಳಿ ನಡೆಸಲಾಯಿತು.jk-logo-justkannada-logo

ನಗರದ ಇರ್ವಿನ್ ರಸ್ತೆಯ ನೆಹರು ವೃತ್ತದಲ್ಲಿರುವ ಮುಖ್ಯ ಅಂಚೆಕಚೇರಿ ಎದುರು ಶನಿವಾರ ಜಮಾವಣೆಗೊಂಡ ಎಬಿವಿಪಿ ಸದಸ್ಯರು ಡ್ರಗ್ಸ್ ದಂಧೆಯ ವಿರುದ್ಧ ಕ್ರಮಕೈಗೊಳ್ಳುವಂತೆ ಆಗ್ರಹಿಸಿ ವಿವಿಧ ಘೋಷಣೆಗಳನ್ನು ಕೂಗಿದರು.

ಈ ಸಂದರ್ಭ ಎಬಿವಿಪಿ ರಾಜ್ಯ ಸಹಕಾರ್ಯದರ್ಶಿ ಶ್ರೀರಾಮ ಮಾತನಾಡಿ, ಮಾದಕ ವಸ್ತುಗಳ ಬಳಕೆ ಇಂದು ಸಮಾಜದ ಎಲ್ಲ  ಕ್ಷೇತ್ರಗಳಿಗೂ ವ್ಯಾಪಿಸಿದೆ. ಹೀಗಾಗಿ, ಡ್ರಗ್ಸ್ ದಂಧೆಗೆ ಕಡಿವಾಣಕ್ಕೆ ಸಶಕ್ತ ನೀತಿಯನ್ನು ರೂಪಿಸಬೇಕೆಂದು ಒತ್ತಾಯಿಸಿದರು.

Letter-campaign-ABVP-cut-drug-dealing

ಈ ಜಾಲಕ್ಕೆ ಶಾಲಾ ಕಾಲೇಜುಗಳಲ್ಲಿ ಅಧ್ಯಯನ ಮಾಡುತ್ತಿರುವ ಮುಗ್ಧ ವಿದ್ಯಾರ್ಥಿಗಳು ಬಲಿಯಾಗುತ್ತಿರುವುದು ಭವಿಷ್ಯದ ದೃಷ್ಟಿಯಿಂದ ಅಪಾಯಕಾರಿ ವಿದ್ಯಾಮಾನವಾಗಿದೆ.  ಡ್ರಗ್ಸ್ ದಂಧೆಯಲ್ಲಿ ಬಹುಪ್ರಭಾವಿಗಳು ಭಾಗಿಯಾಗಿರುವುದರಿಂದ ಅಂಥಹವರನ್ನು ಮಟ್ಟ ಹಾಕುವ ಸವಾಲು ರಾಜ್ಯ ಸರಕಾರದ ಮುಂದಿದೆ ಎಂದರು.

ಡ್ರಗ್ಸ್ ದಂಧೆ ಮಟ್ಟ ಹಾಕುವುದಕ್ಕೆ ಪ್ರಬಲವಾದ ಕಾನೂನನ್ನು ರೂಪಿಸುವುದೊಂದೆ ಪರಿಹಾರವಾಗಿದೆ. ಸರಕಾರ ನಿಷ್ಪಕ್ಷಪಾತವಾದ ಕಾನೂನು ಕ್ರಮದ ಮೂಲಕ ಡ್ರಗ್ಸ್ ದಂದೆಯ ವಿರುದ್ಧ ಸಮರ ಸಾರಬೇಕು ಎಂದು ಪತ್ರದ ಮೂಲಕ ಆಗ್ರಹಿಸಿದರು.

ಪತ್ರ ಚಳವಳಿಯಲ್ಲಿ ನಗರ ಸಂಘಟನಾಕಾರ್ಯದರ್ಶಿ ಶರತ್, ನಗರ ಸಹಕಾರ್ಯದರ್ಶಿಗಳಾದ ಪ್ರಜ್ಞಾ, ಚಿರಂತ್, ಕಾರ್ಯಕರ್ತರುಗಳಾದ ನಾಗಶ್ರೀ, ರಚನಾ, ಸುಹಾಸ್, ಆದರ್ಶ್ ಇತರರು ಭಾಗವಹಿಸಿದ್ದರು.

key words : Letter-campaign-ABVP-cut-drug-dealing