ಮೈಸೂರು,ಸೆಪ್ಟಂಬರ್,13,2021(www.justkannada.in): ಈ ದೇಶಕಂಡ ಅತ್ಯಂತ ಸುಳ್ಳುಗಾರ ಮತ್ತು ಭ್ರಷ್ಟ ಪ್ರಧಾನಿ ಇದ್ದರೆ ಅದು ಮಿಸ್ಟರ್ ನರೇಂದ್ರ ಮೋದಿ ಎಂದು ಮಾಜಿ ಸಂಸದ, ಕಾಂಗ್ರೆಸ್ ಮುಖಂಡ ವಿ.ಎಸ್ ಉಗ್ರಪ್ಪ ವಾಗ್ದಾಳಿ ನಡೆಸಿದರು.
ಮೈಸೂರಿನ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಿ.ಎಸ್ ಉಗ್ರಪ್ಪ, ರಫೆಲ್ ಹಗರಣದಲ್ಲಿ 39 ಸಾವಿರ ಕೋಟಿ ರೂ ಕಿಕ್ ಬ್ಯಾಕ್ ಹೋಗಿದೆ. ಇತ್ತ ರಾಜ್ಯದ ಮಂತ್ರಿಗಳು ಟೂಲ್ ಅಂಡ್ ಟ್ರೈನಿಂಗ್ ಸೆಂಟರ್ ನಲ್ಲಿ ೩೪.೩೭ ಲಕ್ಷ ರೂ ಗುಳುಂ ಮಾಡಿದ್ದಾರೆ. ಈ ಹಗರಣದಲ್ಲಿ ಸಚಿವ ಅಶ್ವತ್ ನಾರಾಯಣ್ ಅವರ ಪಾಲೂ ಇರಬಹುದು ಎಂದು ಆರೋಪಿಸಿದರು.
ಕಾಂಗ್ರೆಸ್ ನಾಯಕರು ಮಾನಸಿಕ ಅಸ್ವಸ್ಥರಾಗಿದ್ದಾರೆ, ಅವರ ವಿರುದ್ಧ ನೋಟೀಸ್ ನೀಡ್ತೇವೆ ಎಂಬ ಸಚಿವ ಅಶ್ವತ್ ನಾರಾಯಣ್ ಹೇಳಿಕೆಗೆ ಸವಾಲು ಹಾಕಿದ ವಿ.ಎಸ್ ಉಗ್ರಪ್ಪ, ಅಶ್ವತ್ ನಾರಾಯಣ್ ಅವರೇ ನಿಮಗೆ ತಾಕತ್ತಿದ್ದರೆ, ದಮ್ಮಿದ್ದರೆ ನಮಗೆ ನೋಟಿಸ್ ಕೊಡಿ. ನಾನು ಮತ್ತು ರೇವಣ್ಣ ಕಾನೂನಾತ್ಮಕ ಹೋರಾಟಕ್ಕೆ ಸಿದ್ದರಿದ್ದೇವೆ ಎಂದು ಹೇಳಿದರು.
ಗುಜರಾತ್ ಮುಖ್ಯಮಂತ್ರಿ ಬದಲಾವಣೆ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಮಾಜಿ ಸಂಸದ ವಿ.ಎಸ್ ಉಗ್ರಪ್ಪ, ಸಿಎಂ ಬದಲಾವಣೆ ಮಾಡಿರೋದು ನೋಡಿದ್ರೆ ಮೋದಿ ಇಮೇಜ್ ಕುಸಿದಿದೆ. ಈ ಹಿಂದೆ ಮೋದಿ ಇಮೇಜ್ ೬೪.೬೫ % ಇತ್ತು, ಇತ್ತೀಚೆಗೆ ಅವರ ಇಮೇಜ್ ೨೪ % ಗೆ ಕುಸಿದಿದೆ. ಅವರ ಸ್ವಂತ ರಾಜ್ಯದಲ್ಲಿ ಮೋದಿಯಿಂದ ವೋಟ್ ಪಡೆಯಲಾಗಲ್ಲ ಎಂದು ತಿಳಿದು ಪಟೇಲ್ ಸಮುದಾಯದ ವ್ಯಕ್ತಿಯನ್ನ ಸಿಎಂ ಮಾಡಿದ್ದಾರೆ. ಇದು ಜಾತಿ ಆಧಾರದ ಮೇಲೆ ವೋಟ್ ಪಡೆಯುವ ತಂತ್ರ ಎಂದು ಟೀಕಿಸಿದರು.
ಮೂರು ರಾಜ್ಯಗಳ ಸಿಎಂ ಬದಲಾವಣೆ ಬಿಜೆಪಿ ಆಡಳಿತ ವೈಪಲ್ಯ ಮಚ್ಚಿಡುವ ಪ್ರಯತ್ನ ಇದು-ವಿಧಾನ ಪರಿಷತ್ ಮಾಜಿ ಸಭಾಪತಿ ಸುದರ್ಶನ್.
ಇದೇ ವೇಳೆ ಮಾತನಾಡಿದ ಧಾನ ಪರಿಷತ್ ಮಾಜಿ ಸಭಾಪತಿ ಸುದರ್ಶನ್, ಕರ್ನಾಟಕ ಸೇರಿದಂತೆ ಮೂರು ರಾಜ್ಯಗಳ ನಲ್ಲಿ ಸಿಎಂ ಬದಲಾವಣೆ ಬಿಜೆಪಿ ಮಾಡಿದೆ. ಸಿಎಂ ಸ್ಥಾನ ಬದಲಾವಣೆ ಸಂವಿಧಾನಿಕ ಹುದ್ದೆ. ಹಾಗಾಗಿ ಇದು ಬಹಳ ಗಂಭೀರವಾದ ವಿಚಾರ. ಬಿಜೆಪಿ ಆಡಳಿತ ವೈಪಲ್ಯ ಮಚ್ಚಿಡುವ ಪ್ರಯತ್ನ ಇದು. ಜನರು ಬಿಜೆಪಿ ಆಡಳಿತದಿಂದ ಭ್ರಮನಿರಶರಾಗಿದ್ದಾರೆ. ಕೋವಿಡ್ 19 , ಬೆಲೆ ಏರಿಕೆಯಿಂದ ಬಡವರು ಮಧ್ಯಮವರ್ಗದ ಜನರು ಸಾಕಷ್ಟು ಕಷ್ಟದಲ್ಲಿ ಇದ್ದಾರೆ. ಬೆಲೆ ಏರಿಕೆ ನಿಯಂತ್ರಣ ಮಾಡಲು ಸರ್ಕಾರದ ಕೈಲಿ ಆಗುತ್ತಿಲ್ಲ. ನರೇಂದ್ರ ಮೋದಿ ಅವರ ಪಾಪುಲಾರಿಟಿ ಕಡಿಮೆ ಆಗಿದೆ. ಜನರ ಭಾವನೆ, ನಾಡಿಮಿಡಿತ ಅರ್ಥ ಮಾಡಿಕೊಂಡು ನೋಡೋದಾದ್ರೆ ಮೋದಿ ಅವರ ಪಪ್ಯುಲಾರಿಟಿ ಕಡಿಮೆಯಾಗಿದೆ. ಇದನ್ನ ಬೇರೆಡೆಗೆ ಸೆಳೆಯಲು ಬಿಜೆಪು ಮುಖ್ಯಮಂತ್ರಿಗಳ ಬದಲಾವಣೆ ಮಾಡುತ್ತಿದೆ ಎಂದು ವಾಗ್ದಾಳಿ ನಡೆಸಿದರು.
ಜಿಪಂ ತಾಪಂ ಚುನಾವಣೆ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಸುದರ್ಶನ್ ಅವರು, ಸ್ಥಳೀಯ ನಾಯಕತ್ವ, ಸ್ಥಳೀಯ ಅಭಿವೃದ್ಧಿ ಮಾಡಬೇಕು ಎಂಬುದು ಸ್ಥಳೀಯ ಆಡಳಿತ ವ್ಯವಸ್ಥೆ ಆಗಿದೆ. 73, 74 ಕಾಯ್ದೆ ಬರಲು ಮುಂಚಿತವಾಗಿ ತಮಗೆ ಬೇಕಾದ ಚುನಾವಣೆ ಸರ್ಕಾರಗಳು ಮಾಡಿಕೊಳ್ಳುತ್ತಿದ್ದವು. ಅದೇ ಕೆಲಸವನ್ನು ಈಗ ಬಿಜೆಪಿ ಸರ್ಕಾರ ಮಾಡುತ್ತಿದೆ. ಜಿಲ್ಲಾ ಪಂಚಾಯತ್ ತಾಲೂಕು ಪಂಚಾಯತಿ ಮುಂದೂಡಿಕೊಂಡು ಬರುತ್ತಿದೆ. 6 ತಿಂಗಳಿಗಿಂತ ಹೆಚ್ಚಿನ ಅವಧಿ ಆಡಳಿತಾಧಿಕಾರಿ ನೇಮಕ ಮಾಡಬಾರದು ಎಂಬುದು ಕಾನೂನಲ್ಲಿ ಇದೆ. ಜಿಲ್ಲಾಪಂಚಾಯತ್ ತಾಲೂಕಿನ ಪಂಚಾಯತಿಯಲ್ಲಿ ಗೆಲ್ಲಲು ಸಾಧ್ಯ ಇಲ್ಲ ಎಂದು ಹೀಗೆ ಮಾಡುತ್ತಿದ್ದೀರಿ. ಬಿಜೆಪಿ ಆಡಳಿತ ವಿಕೇಂದ್ರೀಕರಣ ಮಾಡಲೇ ಇಲ್ಲ. ಸರ್ಕಾರದ ಆಡಳಿತ ವೀಕೇಂದ್ರಿಕರಣ ಬಲಪಡಿಸುವ ಕೆಲಸ ಮಾಡಬೇಕು. ನಾನು ಸರ್ಕಾರವನ್ನು ಒತ್ತಾಯಿಸುತ್ತೇನೆ ಎಂದು ಹೇಳಿದರು.
ರಾಜ್ಯದಲ್ಲಿ ರೈತರಿಗೆ ಸಾಕಷ್ಟು ತೊಂದರೆ ಆಗುತ್ತಿದೆ. ಇಂಡೋ ಅಮೇರಿಕನ್ ಕಂಪನಿ ಬಿತ್ತನೆ ಬೀಜಗಳಿಂದ ರೈತರಿಗೆ ನಷ್ಟ ಆಗುತ್ತಿದೆ. ಈ ಕಂಪನಿ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು. ಇಂತಹ ದೋಖಾ ಮಾಡುವ ಕಂಪನಿಗಳ ವಿರುದ್ಧ ಕ್ರಮ ಆಗಬೇಕು. ಸರ್ಕಾರ ರೈತರ ಸಂಕಷ್ಟ ಬಗ್ಗೆ ಗಮನಹರಿಸಬೇಕು. ವಿದ್ಯಾರ್ಥಿಗಳಿಗೂ ರಾಜ್ಯದಲ್ಲಿ ಅನಾನುಕೂಲ ಆಗಿದೆ. ಹಳ್ಳಿ ಮಕ್ಕಳು ಶಿಕ್ಷಣ ಮರೆತು ಹೋಗುತ್ತಿದ್ದಾರೆ. ಮಕ್ಕಳಿಗೆ ಶಿಕ್ಷಣ ತಪ್ಪಿಹೋಗುತ್ತಿದೆ. ಆಹಾರವೂ ಸಿಗುತ್ತಿಲ್ಲ. ಕೂಡಲ ಎಲ್ಲಾ ಶಾಲೆಗಳನ್ನು ತೆರೆಯಬೇಕು. ರಾಜ್ಯ ಸರ್ಕಾರ ಗಂಭೀರ ವಿಚಾರ ಬಗ್ಗೆ ಗಮನ ಹರಿಸಬೇಕು ಎಂದು ಸುದರ್ಶನ್ ಸಲಹೆ ನೀಡಿದರು.
Key words: liar – corrupt- Prime Minister –country-Mr. Narendra Modi- Former MP- VS Ugrappa