ಮೈಸೂರು,ಡಿಸೆಂಬರ್,2,2021(www.justkannada.in): ದಕ್ಷಿಣ ಮಧ್ಯ ವಲಯ ವಿಮಾ ನೌಕರರ ಒಕ್ಕೂಟದ ಕರೆಯಂತೆ ವಿಮಾ ನಿಗಮ ನೌಕರರ ಸಂಘ, ಮೈಸೂರು ವಿಭಾಗ ಇಂದು LIC IPO ವಿರುದ್ಧ ಕರಪತ್ರ ಬಿಡುಗಡೆ ಕಾರ್ಯಕ್ರಮವನ್ನು ಹಮ್ಮಿಕೊಂಡಿತ್ತು.
LIC IPO ವಿರುದ್ಧ ನೌಕರರು ವ್ಯಾಪಕವಾಗಿ ಜನಾಂದೋಲನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು, ಈ ಮಧ್ಯೆ ಇಂದು ಭೋಜನ ವಿರಾಮ ವೇಳೆಯಲ್ಲಿ ಮೈಸೂರು ವಿಭಾಗದ ಐದು ಜಿಲ್ಲೆಗಳ ಎಲ್ಲಾ 23 ಶಾಖೆಗಳ ಎದುರು ಈ ಕರಪತ್ರ ಬಿಡುಗಡೆ ಕಾರ್ಯಕ್ರಮವನ್ನು ನಡೆಸಲಾಯಿತು. ಮೈಸೂರು ವಿಭಾಗೀಯ ಕಛೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಹಿರಿಯ LIC ಪ್ರತಿನಿಧಿ ಕೆಂಚಯ್ಯ ಕರಪತ್ರ ಬಿಡುಗಡೆ ಮಾಡಿದರು.
ಆರ್ ಎಂಎಸ್ ಯೂನಿಯನ್ ನ ಸಂಗಾತಿ ಝಾಕಿರ್ ಹುಸೇನ್ ಮತ್ತು ತುಲಾಜಪ್ಪ, BRGIEA ನ ಸಂಗಾತಿ ಬಲರಾಮ್, SCZIEF ನ ಜಂಟಿ ಕಾರ್ಯದರ್ಶಿ ಜೆ ಸುರೇಶ್, ICEU ನ ಅಧ್ಯಕ್ಷರಾದ ಎಸ್ ಕೆ ರಾಮು, ಪ್ರಧಾನ ಕಾರ್ಯದರ್ಶಿ ಎಸ್. ಎಸ್. ನಾಗೇಶ್, ಮಹಿಳಾ ಉಪಸಮಿತಿ ಸಂಚಾಲಕಿ ಜಿ. ವಿದ್ಯಾವತಿ ಸೇರಿದಂತೆ ಇತರ ಪದಾಧಿಕಾರಿಗಳು ಮತ್ತು ನೂರಾರು ಸದಸ್ಯರು, ಹಿತೈಷಿಗಳು ಈ ಸಂದರ್ಭದಲ್ಲಿ ಹಾಜರಿದ್ದರು.
Key words: Campaigning- against -LIC IPO-Pamphlet –Release-mysore