ಮೈಸೂರು,ಆ,31,2019(www.justkannada.in): ವಾಹನ ಚಾಲಕರಿಗೆ ಪರವಾನಿಗೆ ಹೊಂದಲು ನಿಗದಿಗೊಳಿಸಿದ್ದ ಕಾಯ್ದೆಯನ್ನು ಕೇಂದ್ರ ಸರ್ಕಾರ ಸಡಿಲಗೊಳಿಸಿದ್ದು, ಆದ್ದರಿಂದ ಸೆ.4 ರಿಂದ ಆನ್ ಲೈನ್ ನೋಂದಾಣಿ ಏರ್ಪಡಿಸಲಾಗಿದೆ ಎಂದು ಶಾಸಕ ರಾಮದಾಸ್ ತಿಳಿಸಿದರು..
ಪತ್ರಕರ್ತರ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶಾಸಕ ರಾಮದಾಸ್ , ಕಳೆದ ಹಲವು ವರ್ಷಗಳಿಂದ ನಡೆದ ಹೋರಾಟದ ಪ್ರತಿಫಲವಾಗಿ ಜಯ ಲಭಿಸಿದೆ ಎಂದು ಕೇಂದ್ರ ಸರ್ಕಾರದ ನಿಲುವನ್ನು ಸ್ವಾಗತಿಸಿ, ಆದ್ದರಿಂದ ಓದು ಬರಹ ಬರದವರಿಗೆ ರಸ್ತೆ ಚಾಲನೆ ಬಗ್ಗೆ ತಿಳುವಳಿಕೆ ನೀಡುವ ಮೂಲಕ, ಚಾಲನೆ ಪರವಾನಿಗೆ ನೀಡುವ ಮೂಲಕ ಅವರನ್ನು ಮುಖ್ಯವಾಹಿನಿಗೆ ತರುಲಿದ್ದು, ಅವರುಗಳಿಗೆ ಜೀವ ವಿಮೆ ಸೇರಿದಂತೆ ಹಲವು ಸೌಲಭ್ಯ ಒದಗಿಸಲು ಕ್ರಮ ಕೈಗೊಳ್ಳಲಾಗುವುದು ಎಂದು
ಅಂದು ಬೆಳಗ್ಗೆ 10 ಗಂಟೆಯಿಂದ ಗನ್ ಹೌಸ್ ವೃತ್ತದ ಬಳಿಯಿರುವ ಶ್ರೀ ವಿದ್ಯಾಶಂಕರ ಕಲ್ಯಾಣ ಮಂಟಪದಲ್ಲಿ ದಾಖಲಾತಿ ಆರಂಭವಾಗಲಿದ್ದು ಸೂಕ್ತ ದಾಖಲೆಗಳ ಮೂಲಕ ಹಾಜರಾಗಬಹುದು. ನಂತರ ದಿ.17ರಂದು ಪ್ರಧಾನಿ ನರೇಂದ್ರ ಮೋದಿಯವರ ಜನ್ಮ ದಿನದಂದು ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಹಾಗೂ ಉಸ್ತವಾರಿ ಸಚಿವ ಸೋಮಣ್ಣನವರು ಯೋಜನೆಗೆ ವಿದ್ಯುಕ್ತವಾಗಿ ಚಾಲನೆ ನೀಡುವರು. ಆದ್ದರಿಂದ ಆಟೋ, ಗೂಡ್ಸ್, ಕಾರ್, ಮಿನಿ ಲಾರಿ, ಟ್ರ್ಯಾಕ್ಟರ್, ರೋಡ್ ರೋಲರ್, ಜೆಸಿಬಿ, ಟ್ರಕ್ ಇನ್ನಿತರೆ ವಾಹನಗಳ ಚಾಲಕರು ಇದನ್ನು ಸದುಪಯೋಗಪಡಿಸಿಕೊಳ್ಳಬೇಕೆಂದು ತಿಳಿಸಿದರು.
Key words: License Act- Online -aplication – Sep.4 – MLA Ramdas -mysore