ನಕಾರಾತ್ಮಕ ಚಿಂತನೆಗಳನ್ನು ಮನಸ್ಸಿನಿಂದ ತೆಗೆದು ಹಾಕಿ- ತಮ್ಮನ್ನ ಭೇಟಿಯಾದ ಬೆಂಗಳೂರಿನ ವಿದ್ಯಾರ್ಥಿಗಳಿಗೆ ಪಾಂಡಿಚೇರಿಯ ಲೆಫ್ಟಿನೆಂಟ್ ಗವರ್ನರ್ ಕಿರಣ್ ಬೇಡಿ ಸಲಹೆ

 

ಪಾ0ಡಿಚೇರಿ,ನ,7,2019(www.justkannada.in): ಬೆಂಗಳೂರಿನ ಜೈನ್ ವಿಶ್ವ ವಿದ್ಯಾಲಯದ ಸೆಂಟರ್ ಫಾರ್ ಮ್ಯಾನೇಜ್ಮೆಂಟ್ ನ ಪತ್ರಿಕೋದ್ಯಮ ವಿದ್ಯಾರ್ಥಿಗಳು ,ಇತ್ತೀಚೆಗೆ ಪಾಂಡಿಚೇರಿಯ ಲೆಫ್ಟಿನೆಂಟ್ ಗವರ್ನರ್ ಕಿರಣ್ ಬೇಡಿ ಅವರನ್ನು ಭೇಟಿ ಆದರು .

ವಿದ್ಯಾರ್ಥಿಗಳೊಂದಿಗೆ ಸರಿ ಸುಮಾರು ಒಂದೂವರೆಯಿಂದ ಎರಡು ಗಂಟೆಗಳ ಕಾಲ ಮಾತನಾಡ ಕಿರಣ್ ಬೇಡಿ ತಮ್ಮ ಪೊಲೀಸ್ ಜೀವನದ ಅನುಭವಗಳನ್ನು ಹಾಗೂ ತಾವು ಈಗ ಆಗಿರುವ ಗವರ್ನರ್ ವೃತ್ತಿಯ ಅನುಭವಗಳನ್ನು ಮನ ಬಿಚ್ಚಿ ಹಂಚಿಕೊಂಡರು. ವಿದ್ಯಾರ್ಥಿಗಳು ಕಿರಣ್ ಬೇಡಿ ಅವರ ಮು೦ದೆ ಪ್ರಶ್ನೋತ್ತರಗಳ ಸರಮಾಲೆಯನ್ನೇ  ಹಾಕಿದರು. ಇದಕ್ಕೆ ಕಿರಣ್ ಬೇಡಿ ನಗುನಗುತ್ತಲೇ ಎಲ್ಲದಕ್ಕೂ ಉತ್ತರ ನೀಡಿದರು.

ಪಾಂಡಿಚೇರಿಯ ಗವರ್ನರ್ ಕಾರ್ಯಾಲಯ ರಾಜ್ ನಿವಾಸ್ ,ಅದನ್ನು ಕಿರಣ್ ಬೇಡಿ ಅವರು ಪಾಂಡಿಚೇರಿಯ ಗವರ್ನರ್ ಆದ ನಂತರ ಸಾರ್ವಜನಿಕರ ವೀಕ್ಷಣೆಗೆ  , ಒಂದು ಪ್ರವಾಸಿ ತಾಣವಾಗಿ ಮಾರ್ಪಾಡು ಮಾಡಿದ್ದಾರೆ . ಪ್ರತಿ ವಾರದ ಶನಿವಾರ ರಾಜ್ ಭವನ್  ಪ್ರವಾಸಿಗರಿಗೆ ತೆರೆದಿರುತ್ತದೆ . ರಾಜಭವನದ ಆತಿಥ್ಯಕ್ಕೆ ಮಾರು ಹೋದ ಬೆಂಗಳೂರು ವಿದ್ಯಾರ್ಥಿಗಳು ಸರಿ ಸುಮಾರು ಒಂದೂವರೆ ಗಂಟೆಗಳ ಕಾಲ ಕಿರಣ್ ಬೇಡಿ ಹಾಗೂ ರಾಜ್ ಭವನ್  ದವರೊಂದಿಗೆ ಸಂವಾದ ನಡೆಸಿದರು.

ವಿದ್ಯಾರ್ಥಿಗಳೊಂದಿಗೆ ಮಾತನಾಡುತ್ತಾ ಕಿರಣ್ ಬೇಡಿಯವರು ನಕಾರಾತ್ಮಕ ಚಿಂತನೆಗಳನ್ನು ವಿದ್ಯಾರ್ಥಿಗಳು ಮೊದಲು ತಮ್ಮ ಮನಸ್ಸಿನಿಂದ  ತೆಗೆದು ಹಾಕಬೇಕು   ಕೇವಲ ಸಕಾರಾತ್ಮಕ ಚಿಂತನೆಯಿಂದ ಮಾತ್ರ ಒಬ್ಬ ಮನುಷ್ಯನು ಪರಿಪೂರ್ಣನಾಗಲು ಸಾಧ್ಯ ಎಂದರು . ತಮ್ಮ ವೈಯಕ್ತಿಕ ಜೀವನ ಹಾಗೂ ವೃತ್ತಿ ಜೀವನದ ಹಲವಾರು ಮಜಲುಗಳನ್ನು ಕಿರಣ್  ಬೇಡಿ ವಿದ್ಯಾರ್ಥಿಗಳ ಮುಂದೆ ತೆರೆದಿಟ್ಟರು  .

‌ಜೈನ್  ವಿಶ್ವವಿದ್ಯಾಲಯದ ಸೆಂಟರ್ ಫಾರ್ ಮ್ಯಾನೇಜ್ಮೆಂಟ್ ಸ್ಟಡೀಸ್ ನ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥೆ ಭಾರ್ಗವಿ ಹೆಮ್ಮಿಗೆ  ಸಹ ಪ್ರಾಧ್ಯಾಪಕರಾದ ಪ್ರೊ .ಕೈಲಾಶ್ ಕೌಶಿಕ್ , ಪ್ರೊ .ಸಂತೋಷ್  ಪ್ರೊ . ಡಿಕಿಲಾ ಭೂಟಿಯಾ ಪ್ರೊ . ದಿವ್ಯಾ ಕುಮಾರಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Key words: Lieutenant Governor –Pondicherry- Kiran Bedi –advises- Bangalore- students