ಕರೋನಾ ಕಲಿಸಿದ ಜೀವನ ಪಾಠ: ಕೃಷಿ ಮತ್ತು ಉದ್ಯಮದಲ್ಲಿ ಸಾಧನೆಗೈದ ಬ್ಯಾಂಕ್ ಉದ್ಯೋಗಿ….

ಕೊಪ್ಪಳ,ಮಾರ್ಚ್,2,2021(www.justkannada.in):  ಕೊರೋನಾ ಮಹಾಮಾರಿ ಮತ್ತು ಲಾಕ್ ಡೌನ್ ನಿಂದಾಗಿ ದೇಶದ ಜನರು ತತ್ತರಿಸಿ ಹಲವು ಮಂದಿ ಉದ್ಯೋಗ ಕಳೆದು ಕೊಂಡರೇ ಕೂಲಿ ಕಾರ್ಮಿಕರ ಬದುಕು ಸಂಕಷ್ಟಕ್ಕೆ ಸಿಲುಕಿತ್ತು. ಈ ಮಧ್ಯೆ ಕರೋನಾ ಜನರನ್ನ ಸಂಕಷ್ಟಕ್ಕೆ ದೂಡಿದ್ದಲ್ಲದೇ ಹಲವು ಪಾಠಗಳನ್ನ ಕಲಿಸಿದೆ.life-lesson-taught-corona-bank-employee-agriculture-industry

ಹೌದು ಇದಕ್ಕೆ ಸಾಕ್ಷಿ ಎಂಬಂತೆ ಬ್ಯಾಂಕ್ ಉದ್ಯೋಗಿ ಮುರಾದ್ ಬೇಗ್ ಎಂಬುವವರು ಕೃಷಿ ಮತ್ತು ಉದ್ಯಮದಲ್ಲಿ ತೊಡಗಿ ಸಾಧನೆಗೈದಿದ್ದಾರೆ. ಮೂಲತಹ ಗಂಗಾವತಿ ನಗರದವರಾದ ಮುರಾದ್ ಬೇಗ ಅವರು ಬಿಕಾಂ ಪದವೀಧರರು. ಹಲವಾರು ಬ್ಯಾಂಕುಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಇವರು ಕರೋನಾ ಪ್ರಾರಂಭವಾದ ಕಾಲದಲ್ಲಿ ಅಮೇರಿಕನ್ ಎಕ್ಸ್ಪ್ರೆಸ್ ಬ್ಯಾಂಕಿನಲ್ಲಿ ಕೆಲಸ ಮಾಡುತ್ತಿದ್ದರು. ಕೋವಿಡ್ ನಿಂದಾಗಿ ಹಲವಾರು ಜನರು ನೌಕರಿ ವಂಚಿತರಾದರು. ಅದರಂತೆ ಬೆಂಗಳೂರಿನಿಂದ ನೇರವಾಗಿ ಗಂಗಾವತಿಗೆ ಆಗಮಿಸಿದ ಬೇಗ್ ಅವರು 4 ಎಕರೆ ಭೂಮಿಯನ್ನು ಲಾವಣಿ ಹಿಡಿದು  ಕೃಷಿಗೆ ನಿಂತರು. ಕೆಲಸ ಮಾಡುತ್ತಿದ್ದ ಬ್ಯಾಂಕ್ ನಿಂದ 6 ಲಕ್ಷ ಸಾಲ ಪಡೆದು ಸಮಗ್ರ ಕೃಷಿಯತ್ತ ವಾಲಿದರು.

ಬ್ಯಾಂಕ್ ವಹಿವಾಟು ಅರಿವಿದ್ದ ಅವರು ಕೇವಲ ಬೆಳೆ ಬೆಳೆದರೆ ಸಾಲದು ಉದ್ಯಮಿಯಾಗಿ ಬದಲಾಗಬೇಕು ಎಂದುಕೊಂಡು ವಿವಿಧ ತರಕಾರಿ ಸೊಪ್ಪು ಕಾಯಿಪಲ್ಯಗಳನ್ನು ಬೆಳೆಯಲು ಪ್ರಾರಂಭಿಸಿದರು. ನಂತರ ಬಹುಬೇಡಿಕೆಯ ಜವಾರಿ ಕೋಳಿ, ಕಡಕ್ನಾಥ್, ಟರ್ಕಿ ಕೋಳಿ ಹಾಗೂ ಕೌಜಗನ ಹಕ್ಕಿಗಳನ್ನು ಸಾಕಾಣಿಕೆ ಮಾಡುತ್ತಿದ್ದಾರೆ. ಸದ್ಯಕ್ಕೆ ಪ್ರತಿ ತಿಂಗಳು ಸಾವಿರದ ಐನೂರು ಕೌಜಗ ಹಕ್ಕಿಗಳನ್ನು ಮಾರಾಟ ಮಾಡುತ್ತಿರುವ ಇವರು ಮುಂದಿನ ದಿನಗಳಲ್ಲಿ 4000 ಹಕ್ಕಿಗಳನ್ನು ಮಾರುವ ಗುರಿ ಹೊಂದಿದ್ದಾರೆ. ಕನಿಷ್ಠ ಒಂದು ಹಕ್ಕಿಗೆ 10 ರೂ ಲಾಭ ಉಳಿದರು ತಿಂಗಳಿಗೆ 40000 ಸಂಪಾದನೆ ಮಾಡಬಹುದು ಎಂಬುದು ಇವರ ಲೆಕ್ಕಾಚಾರ. ಟರ್ಕಿ ಕೋಳಿಯ ಮೊಟ್ಟೆಗೆ ಬೇಡಿಕೆ ಇದ್ದು ಸದ್ಯ ಒಂದು ಮೊಟ್ಟೆಯ ಬೆಲೆ 100ರು. ಎಲ್ಲಾ ಕೃಷಿ ತ್ಯಾಜ್ಯಗಳನ್ನು ಸಂಗ್ರಹಿಸಿ ಎರೆಹುಳು ಗೊಬ್ಬರವಾಗಿ ಪರಿವರ್ತಿಸಿ ಮಾರಾಟ ಮಾಡಲು ಸೂಕ್ತವಾಗುವಂತೆ 6 ಎರೆಹುಳು ತೊಟ್ಟಿಗಳನ್ನು ನಿರ್ಮಾಣ ಮಾಡಿದ್ದಾರೆ. ಅನೇಕ ವಾಣಿಜ್ಯ ಬೆಳೆಗಳನ್ನು ಬೆಳೆದು ಕೃಷಿ ಲಾಭದಾಯಕ ಎಂದು ರೈತರಿಗೆ ಮನವರಿಕೆ ಮಾಡಿಕೊಡುವ ಅಭಿಲಾಷೆ ಮುರಾದ ಬೇಗ್ ಅವರದ್ದಾಗಿದೆ. life-lesson-taught-corona-bank-employee-agriculture-industry

ಪ್ರಸ್ತುತಿ: ಡಾ. ಪಿ. ಆರ್ ಬದರಿಪ್ರಸಾದ್

ENGLISH SUMMARY….

‘Lessons from Corona: Bank employee achieves in agriculture and business
Koppal, March 02, 2021 (www.justkannada.in): Thousands of people in the country have been left in a lurch due to the COVID-19 Pandemic and lockdown, many of them have lost jobs and the condition of the labour class has still not improved.
In such a situation here is a person who has set an example for all those who have lost hope. Murad Begum, a bank employee is a resident of Gangavathi in Koppal District. She has experience of working in a few bank. Earlier to the onset of the COVID-19 Pandemic she was working at the American Express Bank in Bengaluru. Like many others, she also lost her job and returned to Gangavathi. She started doing agriculture in her 4-acre land here. She was successful in getting a loan of Rs. 6 lakh from her bank to start agricultural works.life-lesson-taught-corona-bank-employee-agriculture-industry
As she was aware of the banking business she also was aware that she also has to transform as a businessman along with growing agricultural crop. She started growing various types of vegetables and greens. Slowly she started a poultry farm and started rearing several types of chicken that are in demand including Jawaari chicken, Turkey chicken, and Kowjaga chicken. Presently she is selling about 1,500 chicken every month and has plans to increase the sale to 4,000 chicken in the coming days. According to her even if you get Rs.10 profit from every chicken you can easily earn Rs.40,000 per month. The Turkey eggs have a lot of demand and it is being sold at around Rs. 100 each. She has also constructed six vermicompost pits in the agriculture field for producing vermicompost. She is also interested in educating fellow farmers about growing commercial crops and earns more profits.
Keywords: Murad Begum/ Gangavathi/Koppal/ Vermicompost/ Corona/ Lessons from COVID-19 Pandemic

Key  words: Life -lesson -taught –Corona-bank employee – agriculture – industry.