ಮೈಸೂರು,ಮಾರ್ಚ್,03,2021(www.justkannada.in) : ಎಲ್ಲರಲ್ಲೂ ಒಂದಲ್ಲ, ಒಂದು ವೈಫಲ್ಯವಿರುತ್ತದೆ. ಆದರೆ, ಬದುಕಿನಲ್ಲಿ ಭರವಸೆ ಬಹಳ ಮುಖ್ಯ. ಭರವಸೆಯಿಲ್ಲದೇ ಸಾಧನೆ ಮಾಡುವುದಕ್ಕೆ ಸಾಧ್ಯವಿಲ್ಲ ಎಂದು ಮೈಸೂರು ವಿವಿ ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್ ಅಭಿಪ್ರಾಯವ್ಯಕ್ತಪಡಿಸಿದರು.ಮಾನಸಗಂಗೋತ್ರಿಯ ಡಾ.ಬಾಬು ಜಗಜೀವನರಾಂ ಸಭಾಂಗಣದಲ್ಲಿ ಮೈಸೂರು ವಿವಿ ಡಾ.ಬಾಬು ಜಗಜೀವನರಾಂ ಸಂಶೋಧನ ಮತ್ತು ವಿಸ್ತರಣ ಕೇಂದ್ರ ಹಾಗೂ ಸುಂದರ್ ರಾಜ್ ಸ್ನೇಹ ಕಲಾನಿಕೇತನ ಸಹಯೋಗದಲ್ಲಿ ಅ.ಸುಂದರ್ ರಾಜ್ ಅವರ “ಬಳ್ಳಿಯೊಡಲು ಹೂಗಳು” ಕವನ ಸಂಕಲನ ಕೃತಿ ಬಿಡುಗಡೆ ಮಾಡಿ ಅವರು ಮಾತನಾಡಿದರು.
ಯುಗ,ಯುಗಗಳಿಂದ ಕಲೆ ಮೈಲಿಗಲ್ಲು ಸಾಧಿಸುತ್ತಿದೆ
ಭರವಸೆಯಿದ್ದರೆ ಏನು ಬೇಕಾದರೂ ಸಾಧಿಸಬಹುದು ಎಂಬುದಕ್ಕೆ ವಿಶೇಷಚೇತನ ಸುಂದರ್ ರಾಜ್ ಅವರ ಕವನಸಂಕಲನವೇ ಸಾಕ್ಷಿ. ಯುಗಗಳಿಂದ ಕಲೆ ಮೈಲಿಗಲ್ಲು ಸಾಧಿಸುತ್ತ ಬಂದಿದೆ. ಸುಂದರ್ ರಾಜ್ ಅವರು ಸಂಗೀತವನ್ನು ಪರಿಶ್ರಮದಿಂದ ಕಲಿತು, ಸಾಧಕರಿಂದ ಸ್ಪೂರ್ತಿಪಡೆದು ಜೀವನದ ಅವಿಭಾಜ್ಯ ಅಂಗವನ್ನಾಗಿ ಮಾಡಿಕೊಂಡು ಸಾಧನೆ ಮಾಡುತ್ತಿದ್ದಾರೆ ಎಂದು ಮೆಚ್ಚುಗೆವ್ಯಕ್ತಪಡಿಸಿದರು.
ವೃತ್ತಿಯನ್ನು ಪ್ರೀತಿಸಿದಾಗ ಮಾತ್ರ ಉತ್ತಮ ಸೇವೆ
ಸುಂದರ್ ರಾಜ್ ಅವರು ಉತ್ತಮ ವಿದ್ಯಾಭ್ಯಾಸ ಮಾಡಿ ಸರ್ಕಾರಿ ಹುದ್ದೆ ಪಡೆದಿದ್ದರು. ಬಳಿಕ ಸರ್ಕಾರಿ ಹುದ್ದೆ ತೊರೆದು ಸಂಗೀತಕ್ಷೇತ್ರದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಸಂಗೀತದ ಜೊತೆಗೆ 20 ನಾಟಕಗಳನ್ನು ಕಲಿಸಿದ್ದಾರೆ. ಪ್ರತಿಯೊಬ್ಬರು ತಮ್ಮ ವೃತ್ತಿಯನ್ನು ಪ್ರೀತಿಸಿದಾಗ ಮಾತ್ರ ಉತ್ತಮ ಸೇವೆ ಒದಗಿಸಲು ಸಾಧ್ಯ. ಎಲ್ಲರಿಗೂ ಇವರ ಸಾಧನೆ ಮಾದರಿಯಾಗಿದೆ ಎಂದು ತಿಳಿಸಿದರು.
ಮೈಸೂರು ವಿವಿ ಪ್ರಸಾರಾಂಗ ನಿರ್ದೇಶಕ ಪ್ರೊ.ನೀಲಗಿರಿ ತಳವಾರ್ ಕೃತಿ ಕುರಿತು ಮಾತನಾಡಿ, ಹದವಿಲ್ಲದ ಮನದೊಳಗೆ ಪದ ಹುಟ್ಟಲಾರದು. ಭಾವ, ಅನುಭವ, ಭಾಷೆ ಹದವಾಗಿ ಬೆರೆಸಿ ಕವನಸಂಕಲವನ್ನು ಸಿದ್ಧಪಡಿಸಿದ್ದಾರೆ ಎಂದರು.
ಅಭ್ಯಾಸದಿಂದ ಪ್ರತಿಭೆಯನ್ನು ಸಾಧಿಸಿಕೊಳ್ಳಲು ಸಾಧ್ಯ
ಅಭ್ಯಾಸದಿಂದ ಪ್ರತಿಭೆಯನ್ನು ಸಾಧಿಸಿಕೊಳ್ಳಲು ಸಾಧ್ಯವಿದೆ. ದೇಹಕ್ಕೆ ವೈಫಲ್ಯ ಹೊರತು ಭಾವಕ್ಕೆ ಅಲ್ಲ. ಪ್ರಕೃತಿಯು ಕರುಣಾಮಯಿಯಾಗಿದ್ದು, ಎಲ್ಲರಿಗೂ ಬದುಕುವ ಅವಕಾಶವನ್ನು ಒದಗಿಸಿಕೊಟ್ಟಿದೆ. ಸುಂದರ್ ರಾಜ್ ಅವರು ಸಂಗೀತ ಕ್ಷೇತ್ರಕ್ಕೆ ಮತ್ತಷ್ಟು ಕೊಡುಗೆ ನೀಡಲಿ ಎಂದು ಶುಭಹಾರೈಸಿದರು.
ಕಾರ್ಯಕ್ರಮದಲ್ಲಿ ಡಾ.ಬಾಬು ಜಗಜೀವನ ರಾಂ ಸಂಶೋಧನ ವಿಸ್ತರಣ ಕೇಂದ್ರದ ನಿರ್ದೇಶಕ ಡಾ.ಕೆ.ಸದಾಶಿವ, ಡಾ.ಬಾಬು ಜಗಜೀವನ ರಾಂ ಸಂಶೋಧನ ವಿಸ್ತರಣ ಕೇಂದ್ರ ಸಂದರ್ಶಕ ಪ್ರಾಧ್ಯಾಪಕ ಪ್ರೊ.ಸಿ.ರಾಮಸ್ವಾಮಿ, ಕ.ಸಾ.ಪ ನಿಕಟ ಪೂರ್ವ ಅಧ್ಯಕ್ಷ ಚಂದ್ರಶೇಖರ್, ಸಮಾಜ ಸೇವಕ ಡಾ.ಕೆ.ರಘುರಾಂ ವಾಜಪೇಯಿ ಇತರರು ಉಪಸ್ಥಿತರಿದ್ದರು.
ENGLISH SUMMARY….
‘Hope is important in life’: MoU VC
Mysuru, Mar. 03, 2021 (www.justkannada.in): “There will be one or the other kind of failure in everything. But, hope is very important in life. Nothing can be achieved without hope,” opined Prof. G. Hemanth Kumar, Vice-Chancellor, University of Mysore.
He was speaking after releasing a book titled, “Belliyodala Hoovugalu,” authored by A. Sundar Raj, at a program organized by the Dr. Babu Jagjivanram Research and Extension Center and Sundar Raj Sneha Kalaniketana, today in Mysuru.
“Sundar Raj’s collection of poems are evidence to prove that you can achieve anything if you have hope. He learned music by struggling hard and is achieving on his own. He also quit his government job for his love for music. He has set an example to others that if we love life we can serve well,” he added.
Dr. K. Sadashiva, Director, Dr. Babu Jagjivanram Research and Extension Center, University of Mysore, Prof. C. Ramaswamy, Chandrashekar, immediate past President, Ka.Sa.Pa, Dr. K. Raghuram Vajapayee, Social Worker, and others were present.
Keywords: Hope is important for life/ Prof. G. Hemanth Kumar/ book release program/ University of Mysore
key words : life-promise-Very Main-Chancellor-Prof.G.Hemant Kumar