ಮೈಸೂರು,ಏಪ್ರಿಲ್,30,2025 (www.justkannada.in): ಶೀಲ ಶಂಕಿಸಿ ಪತ್ನಿಯನ್ನು ಕೊಲೆ ಮಾಡಿದ್ದ ಪತಿಗೆ ಜೀವಾವಧಿ ಶಿಕ್ಷೆ ಮತ್ತು 5 ಸಾವಿರ ರೂ. ದಂಡ ವಿಧಿಸಿ ಮೈಸೂರು ಜಿಲ್ಲಾ ನ್ಯಾಯಾಲಯ ತೀರ್ಪು ನೀಡಿದೆ.
ಪಿರಿಯಾಪಟ್ಟಣದ ಬೂದಿತಿಟ್ಟು ಗ್ರಾಮದ ಸ್ವಾಮಿನಾಯಕ ಶಿಕ್ಷೆಗೆ ಗುರಿಯಾದ ವ್ಯಕ್ತಿ. ಕಳೆದ ಏಳು ವರ್ಷಗಳ ಹಿಂದ ಅಬ್ಬಳತಿ ಗ್ರಾಮದ ಸೌಮ್ಯ ಎಂಬಾಕೆಯನ್ನು ಸ್ವಾಮಿ ನಾಯಕ ವಿವಾಹವಾಗಿದ್ದನು. ಈ ನಡುವೆ 2022 ಮೇ 9 ರಂದು ಪತ್ನಿ ಸೌಮ್ಯ ಮುಖಕ್ಕೆ ತಲೆ ದಿಂಬು ಹಾಕಿ ಉಸಿರುಗಟ್ಟಿಸಿ ಸ್ವಾಮಿನಾಯಕ ಕೊಲೆ ಮಾಡಿದ್ದನು.
ಪ್ರಕರಣ ವಿಚಾರಣೆ ನಡೆಸಿದ 5 ನೇ ಅಧಿಕ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶ ಗುರುರಾಜ್ ಸೋಮಕ್ಕನವರ್, ಸಾಕ್ಷ್ಯಾಧಾರಗಳ ಮೂಲಕ ಕೊಲೆ ಮಾಡಿರುವುದು ದೃಢ ಪಟ್ಟ ಹಿನ್ನಲೆ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿದರು.
ಸರ್ಕಾರದ ಪರವಾಗಿ ಅಭಿಯೋಜಕ ಯೋಗೇಶ್ವರ್ ವಾದ ಮಂಡಿಸಿದ್ದರು.
Key words: Life sentence, husband, murdered, wife, Mysore court