ಮಹಾರಾಷ್ಟ್ರ,ಅ,2,2019(www.justkannada.in): ಮಹಾರಾಷ್ಟ್ರದಲ್ಲಿರುವ ಕೊಯ್ನಾ ಜಲಾಶಯದ ಬಳಿ ಲಘುಭೂಕಂಪ ಸಂಭವಿಸಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಮಹಾರಾಷ್ಟ್ರದ ಸತಾರಾ ಜಿಲ್ಲೆಯ ಪಟನಾ ತಾಲ್ಲೂಕಿನ ಕೊಯ್ನಾ ಡ್ಯಾಂ ಬಳಿ ಲಘುಭೂಕಂಪವಾಗಿದ್ದು ರಿಕ್ಟರ್ ಮಾಪಕದಲ್ಲಿ 3.9 ರಷ್ಟು ತೀವ್ರತೆ ದಾಖಲಾಗಿದೆ. ಕೊಯ್ನಾ ಡ್ಯಾಂನ ಸುತ್ತಮುತ್ತ 20 ಕಿ.ಮೀ ವ್ಯಾಪ್ತಿಯಲ್ಲಿ ಭೂಕಂಪನದ ಅನುಭವವಾಗಿದೆ. ಭೂಮಿ ಕಂಪಿಸಿದ ಹಿನ್ನೆಲೆ ಕೃಷ್ಣಾ ನದಿಗೆ ಹೆಚ್ಚುವರಿ ನೀರು ಬಿಡುವ ಸಾಧ್ಯತೆ ಇದೆ. ಈ ಡ್ಯಾಂ 105 ಟಿಎಂಸಿ ನೀರು ಸಂಗ್ರಹದ ಸಾಮರ್ಥ್ಯವಿದೆ.
ಹೆಚ್ಚುವರಿ ನೀರು ಹರಿಸಿದರೇ ರಾಜ್ಯಕ್ಕೆ ಅಪಾಯವಾಗುವ ಸಂಭವವಿದೆ ಡ್ಯಾಂಗೆ ಏನಾದರೂ ಧಕ್ಕೆಯಾದರೇ ಕರ್ನಾಟಕ ಮತ್ತು ಮಹಾರಾಷ್ಟ್ರ ರಾಜ್ಯಕ್ಕೆ ತೊಂದರೆಯಾಗುವ ಸಾಧ್ಯತೆ ಇದೆ.
Key words: Light earthquake- near- Koina Dam –Maharashtra-Krishna river