ಮಡಿಕೇರಿ,ನವೆಂಬರ್,01,2020: ರಾಜ್ಯೋತ್ಸವದ ಸಂದೇಶ ಓದುವಾಗ ‘ಹಳೆಗನ್ನಡ ಕವಿಗಳಾದ ಪಂಪ, ರನ್ನ, ಜನ್ನ, ಪೊನ್ನ, ಕುಮಾರವ್ಯಾಸ’ ಎನ್ನುವ ಬದಲು ‘ಕುಮಾರಸ್ವಾಮಿ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಹೇಳಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಕರ್ನಾಟಕ ರಾಜ್ಯೋತ್ಸವ ಸಮಾರಂಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಅವರು ಧ್ವಜಾರೋಹಣ ನೆರವೇರಿಸಿ ರಾಜ್ಯೋತ್ಸವದ ಸಂದೇಶ ಓದುವ ಸಂದರ್ಭ ಈ ರೀತಿಯಾಗಿ ಎಡವಟ್ಟು ಮಾಡಿಕೊಂಡಿದ್ದಾರೆ.
‘ಹಳೆಗನ್ನಡ ಕವಿಗಳಾದ ಪಂಪ, ರನ್ನ, ಜನ್ನ, ಪೊನ್ನ, ಕುಮಾರವ್ಯಾಸ’ ಎನ್ನುವ ಬದಲು ‘ಕುಮಾರಸ್ವಾಮಿ’ ಎಂದಿದ್ದಾರೆ.
ಅದೇ ರೀತಿ ಕನ್ನಡ ಭಾಷೆಗೆ ಸುಮಾರು 2,000 ವರ್ಷಗಳ ಇತಿಹಾಸವಿದೆ ಎಂದು ಹೇಳುವ ಬದಲಿಗೆ 2 ವರ್ಷಗಳ ಇತಿಹಾಸವಿದೆ ಎಂದು ಓದಿರುವ ವಿಡಿಯೋ ತುಣಕು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಅನೇಕರಿಂದ ಟೀಕೆಗಳು ವ್ಯಕ್ತವಾಗಿದೆ.
key words : line-old-poets-Minister V.Somanna-added-Kumaraswamy-social-media-video-viral