ಬೆಂಗಳೂರು,ನವೆಂಬರ್,27,2020(www.justkannada.in): ವೀರಶೈವ-ಲಿಂಗಾಯತ ಸಮುದಾಯವನ್ನು ಒಬಿಸಿ ಪಟ್ಟಿಗೆ ಸೇರಿಸುವಂತೆ ಒತ್ತಾಯ ಕೇಳಿ ಬಂದಿದ್ದು ಆದರೆ ಈ ವಿಚಾರದ ಬಗ್ಗೆ ಸದ್ಯಕ್ಕೆ ಯಾವುದೇ ತೀರ್ಮಾನ ಕೈಗೊಳ್ಳುವುದಿಲ್ಲ ಎಂಧು ಸಿಎಂ ಬಿಎಸ್ ಯಡಿಯೂರಪ್ಪ ಹೇಳಿಕೆ ನೀಡಿದ್ದಾರೆ.
ಬಸವ ಜಯಮೃತ್ಯುಂಜಯ ಸ್ವಾಮೀಜಿಗಳು ಸೇರಿದಂತೆ ಸಮುದಾಯದ ಮುಖಂಡರು ಲಿಂಗಾಯತ ಸಮುದಾಯವನ್ನ ಒಬಿಸಿಗೆ ಸೇರಿಸುವಂತೆ ಸಿಎಂಗೆ ಮನವಿ ಮಾಡಿದ್ದರು. ಇಂದಿನ ಸಂಪುಟ ಸಭೆಯಲ್ಲಿ ವೀರಶೈವ-ಲಿಂಗಾಯತ ಸಮುದಾಯವನ್ನು ಒಬಿಸಿ ಪಟ್ಟಿಗೆ ಸೇರ್ಪಡೆ ಕುರಿತು ಚರ್ಚೆ ನಡೆಯುತ್ತದೆ ಎನ್ನಲಾಗಿತ್ತು.
ಸಚಿವ ಸಂಪುಟ ಸಭೆಯಲ್ಲಿ ಈ ವಿಚಾರ ಪ್ರಸ್ತಾಪವಾಗಿದ್ದು ಆದರೆ ಲಿಂಗಾಯತ ಸಮುದಾಯವನ್ನ ಒಬಿಸಿಗೆ ಸೇರಿಸುವ ವಿಷಯಕ್ಕೆ ಅಡ್ವಕೇಟ್ ಜನರಲ್ ಆಕ್ಷೇಪ ವ್ಯಕ್ತಪಡಿಸಿದರು.
ಈ ಬಗ್ಗೆ ಇನ್ನಷ್ಟು ಅಧ್ಯಯನ ನಡೆಯಬೇಕಿದೆ. ಕಾನೂನು ವ್ಯಾಪ್ತಿ ನೋಡಬೇಕಿದೆ. ಸದ್ಯಕ್ಕೆ ಈ ವಿಚಾರ ಮುಂದಕ್ಕೆ ಹಾಕಿ ಎಂದು ಅಡ್ವೋಕೇಟ್ ಜನರಲ್ ತಿಳಿಸಿದರು. ಎಜಿ ಆಕ್ಷೇಪದ ಬಗ್ಗೆ ಸಚಿವ ಮಾಧುಸ್ವಾಮಿ ಸಚಿವ ಸಂಪುಟ ಸಭೆಯಲ್ಲಿ ಸಿಎಂಗೆ ಮಾಹಿತಿ ನೀಡಿದರು.
ಈ ಹಿನ್ನೆಲೆ ಲಿಂಗಾಯತ ಸಮುದಾಯವನ್ನ ಒಬಿಸಿಗೆ ಸೇರಿಸುವ ವಿಚಾರವನ್ನ ಮುಂದಿನ ಸಚಿವ ಸಂಪುಟ ಸಭೆಗೆ ಸಿಎಂ ಬಿಎಸ್ ಯಡಿಯೂರಪ್ಪ ಮುಂದೂಡಿದರು. ಈ ಕುರಿತು ಮುಂದೆ ಚರ್ಚಿಸೋಣ ಎಂದರು.
ಸಂಪುಟ ಸಭೆಗೂ ಮುನ್ನ ಮಾತನಾಡಿದ್ದ ಸಿಎಂ ಯಡಿಯೂರಪ್ಪ, ವೀರಶೈವ-ಲಿಂಗಾಯತ ಮೀಸಲಾತಿ ವಿಚಾರದ ಬಗ್ಗೆ ಚರ್ಚೆ ನಡೆಸುತ್ತೇವೆ. ಆದರೆ ಈ ಬಗ್ಗೆ ಇಂದಿನ ಸಭೆಯಲ್ಲಿ ಯಾವುದೇ ನಿರ್ಧಾರ ಕೈಗೊಳ್ಳಲ್ಲ. ಇನ್ನೊಮ್ಮೆ ದೆಹಲಿಗೆ ಹೋಗಿ ಈ ಬಗ್ಗೆ ಸಮಾಲೋಚನೆ ನಡೆಸಿ ನಂತರ ನಿರ್ಧಾರ ಕೈಗೊಳ್ಳುವುದಾಗಿ ಹೇಳಿದ್ದರು.
English summary….
No decision as of now regarding inclusion of Lingayath community under OBC
Bengaluru, Nov. 22, 2020 (www.justkannada.in): Chief Minister B.S. Yedyurappa today informed that no decision would be taken with respect to the topic of including Veerashaiva-Lingayath Community under OBC list.
It can be recalled here that several community leaders including Basava Mrutyunjaya Swamiji had demanded the government to include Lingayath community in the list of OBC and it was also expected that this topic would come for discussion in today’s cabinet meeting.
Though the topic was discussed, the Advocate General had submitted an objection in this matter, stating a need of conducting a thorough research regarding this matter and assess the legal scope and requested the government to postpone the matter. Minister Madhuswamy informed about the objection to the Chief Minister in the meeting.
Keywords: Veerashaiva-Lingayath/OBC/
Key words: Lingayat Community- OBC-No decision –cabinet meeting