ಲಿಂಗಾಯತ ಪ್ರತ್ಯೇಕ ಧರ್ಮದ ಹೋರಾಟ ಕೂಗು ಇಲ್ಲ – ಮಾಜಿ ಸಚಿವ ಎಂ.ಬಿ ಪಾಟೀಲ್

ಬೆಂಗಳೂರು,ಸೆಪ್ಟಂಬರ್,3,2021(www.justkannada.in):  ನಾನು  ಪ್ರತ್ಯೇಕ ಧರ್ಮದ ಕೂಗು ಎತ್ತಲೇ ಇಲ್ಲ ಲಿಂಗಾಯಿತ, ವೀರಶೈವ ಯಾವುದೇ ಪ್ರತ್ಯೇಕ ಧರ್ಮದ ಬಗ್ಗೆ ನಾನು ಮಾತನಾಡಿಲ್ಲ,ಲಿಂಗಾಯತ ಪ್ರತ್ಯೇಕ ಧರ್ಮದ ಹೋರಾಟ ಇಲ್ಲ ಎಂದು ಮಾಜಿ ಸಚಿವ ಎಂ.ಬಿ.ಪಾಟೀಲ್ ಸ್ಪಷ್ಟನೆ ನೀಡಿದ್ದಾರೆ.

ಪ್ರತ್ಯೇಕ ಧರ್ಮ ವಿಚಾರವಾಗಿ ತಾವು ನೀಡಿದ್ದ ಹೇಳಿಕೆ ಚರ್ಚೆಗೆ  ಬಂದ ಹಿನ್ನೆಲೆ ಈ ಕುರಿತು ಸುದ್ಧಿಗೋಷ್ಠಿ ನಡೆಸಿ ಮಾತನಾಡಿದ ಎಂ.ಬಿ.ಪಾಟೀಲ್ ಲಿಂಗಾಯಿತ, ವೀರಶೈವ, ಪಂಚಮಸಾಲಿ ಹೀಗೆ ನಮ್ಮಲ್ಲಿಯೂ ಸಾಕಷ್ಟು ಉಪಪಂಗಡಗಳಿವೆ. 99 ಉಪಪಂಗಡಗಳು ಒಟ್ಟಾಗಿ ಸೇರುತ್ತೇವೆ. 99 ಉಪಪಂಗಡ ಸೇರಿಸಿ ವೀರಶೈವರನ್ನು ಸೇರಿಸಿ  ಧರ್ಮದ ಮಾನ್ಯತೆಯನ್ನ ಕೇಳಿದ್ದವು. ನಾನು  ಪ್ರತ್ಯೇಕ ಧರ್ಮದ ಕೂಗು ಎತ್ತಲೇ ಇಲ್ಲ.  ಆದ್ರೆ ನನ್ನ ಹೇಳಿಕೆಯನ್ನ ತಪ್ಪಾಗಿ ಅರ್ಥೈಸಲಾಗಿದೆ.  ನಾವು ಎಲ್ಲರೂ ಸೇರುತ್ತೇವೆ ಎಂದರೇ ಏನು ಸಮಸ್ಯೆ ಇದೆ ಎಂದು ಪ್ರಶ್ನಿಸಿದರು.

ಚುನಾವಣೆ ನಂತರ ನಾವೆಲ್ಲರೂ ಒಟ್ಟಾಗಿ ಸೇರಿ ಹೇಗೆ ಮುನ್ನಡೆಯಬೇಕು ಎಂಬುದನ್ನು ಚರ್ಚಿಸುತ್ತೇವೆ. ನಮ್ಮ ಸಮಾಜಕ್ಕೆ ಒಳ್ಳೆಯದಾಗಬೇಕು. ನಮ್ಮ ಸಮುದಾಯದ ಮಕ್ಕಳಿಗೆ ಶಿಕ್ಷಣ, ಉದ್ಯೋಗದಲ್ಲಿ ಮೀಸಲಾತಿ ಬೇಕು ಎಂಬ ಕಾರಣಕ್ಕೆ 2023ರ ಚುನಾವಣೆ ನಂತರ ಪಂಚಪೀಠದ ಗುರುಗಳು, ವಿರಕ್ತ ಸ್ವಾಮಿಜಿಗಳ ಜೊತೆ ಚರ್ಚಿಸಿ ಎಲ್ಲರೂ ಒಂದು ಗೂಡಿ ಧರ್ಮದ ಮಾನ್ಯತೆಗೆ ಹೋರಾಡುತ್ತೇವೆ. ಈ ನಿಟ್ಟಿನಲ್ಲಿ ಮಾತುಕತೆ ನಡೆಸೋಣ ಎಂದರು. ಅಲ್ಲದೇ ನಾನು ಪ್ರತ್ಯೇಕ ಧರ್ಮದ ವಿಚಾರ ಎಲ್ಲಿಯೂ ಎತ್ತಲಿಲ್ಲ. ಸಾಮೂಹಿಕ ನಾಯಕತ್ವದಲ್ಲಿ ಎಲ್ಲರೂ ಒಟ್ಟಾಗಿ ಮುನ್ನಡೆಯೋಣ ಎಂದಿದ್ದೇನೆ ಎಂದು ಎಂಬಿ ಪಾಟೀಲ್ ತಿಳಿಸಿದರು.

ನಮಗೆ ಪ್ರತ್ಯೇಕ ಧರ್ಮ ಸಿಕ್ಕಿದ್ದರೆ ಅನುಕೂಲವಾಗ್ತಿತ್ತು. ಆಗ ನಮ್ಮಲ್ಲೂ ಕೆಲವು ಲೋಪದೋಷಗಳಾಗಿದ್ದವು. ಆಗ ರಾಜಕಾರಣದಿಂದ ಅಪಪ್ರಚಾರ ಮಾಡಿದ್ದರು. ಹಾಗಾಗಿ ವೀರಶೈವ,ಲಿಂಗಾಯತ ಪ್ರತ್ಯೇಕ ಎಂದಾಯ್ತು. ನಮಗೆ ಅಲ್ಪಸಂಖ್ಯಾತ ಸ್ಥಾನಮಾನ ಸಿಕ್ಕಿದ್ದರೆ ಅನುಕೂಲ. ಇದು ಸಿಕ್ಕಿದ್ದರೆ 2A ಮೀಸಲಾತಿ ಕೇಳ್ತಿರಲಿಲ್ಲ. ಅಲ್ಪಸಂಖ್ಯಾತ ಸ್ಥಾನಮಾನ ಸಿಗದಿದ್ದಕ್ಕೆ ಹೋರಾಟ ಮಾಡಲಾಗುತ್ತಿದೆ. 2ಎ ಮೀಸಲಾತಿಗೆ ಹೋರಾಟ ಮಾಡಬೇಕಿದೆ. ಕೂಡಲಸಂಗಮ,ಹರಿಹರ ಪೀಠದಿಂದ ಮಾಡಬೇಕಿದೆ.

ಇವತ್ತು ನಮ್ಮ ಸಮುದಾಯದಲ್ಲಿ ಬಡವರಿದ್ದಾರೆ. ನನ್ನ ಸಮಾಜದಲ್ಲೂ ಬಡವರಿದ್ದಾರೆ. ಹಾಗಾಗಿಯೇ ಧರ್ಮಕ್ಕೆ ನಾವು ಧ್ವನಿ‌ ಎತ್ತಬೇಕಿದೆ. ಚುನಾವಣೆಯ ನಂತರವೇ ಈ ಧ್ವನಿ ಎತ್ತುತ್ತೇವೆ. ಚುನಾವಣೆಗೆ ಮುನ್ನ ಅಂದರೆ ಮತ್ತೆ ರಾಜಕೀಯ ಆಗಲಿದೆ. ಹಾಗಾಗಿ ನಮ್ಮ ಸಮುದಾಯದ ಎಲ್ಲರೂ ಸೇರುತ್ತೇವೆ. ಪೀಠಾಧಿಪತಿಗಳು,ಮುಖಂಡರು ಸೇರಿ ಚರ್ಚಿಸುತ್ತೇವೆ. ನಂತರ ಅನುಕೂಲವಾಗುವ ರೀತಿ ನಿರ್ಧಾರ ಮಾಡ್ತೇವೆ. ಇದು ಚುನಾವಣೆಯ ನಂತರವೇ ಮಾಡುತ್ತೇವೆ. ನಾನು ಕಾಂಗ್ರೆಸ್ ಪಕ್ಷದವನಾಗಿರಬಹುದು. ಆದರೆ ಇದು ಕಾಂಗ್ರೆಸ್ ಪಕ್ಷಕ್ಕೆ ಸಂಬಂಧಿಸಿದ್ದಲ್ಲ. ನಾವೆಲ್ಲ ಒಟ್ಟಾಗುವುದು ಯಾರಿಗಾದ್ರೂ ಸಮಸ್ಯೆಯಾಗುತ್ತಾ? ಎಂದು ಮಾಜಿ ಸಚಿವ ಎಂ.ಬಿ.ಪಾಟೀಲ್ ಪ್ರಶ್ನಿಸಿದರು.

ಪ್ರತ್ಯೇಕ ಧರ್ಮದ ವಿಚಾರದಲ್ಲಿ ಯೂಟರ್ನ್ ಹೊಡೆದಿಲ್ಲ. ಹಿಂದೆಯೂ ನಮ್ಮ ಉದ್ದೇಶ ಸ್ಪಷ್ಟವಾಗಿತ್ತು. ಈಗಲೂ ನಮ್ಮ ಉದ್ದೇಶ ಸ್ಪಷ್ಟವಾಗಿದೆ. ಸಮುದಾಯಕ್ಕೆ ಅನುಕೂಲವಾಗುವ ದೃಷ್ಟಿಯಿಂದ ಈ ನಿರ್ಧಾರ ಮಾಡಿದ್ದೇವೆ. ಒಟ್ಟಾಗಿಯೇ ನಾವು ಮುನ್ನಡೆಯಲು ಹೊರಟಿದ್ದೇವೆ. ನಾನು‌ ಎಲ್ಲೂ ಲಿಂಗಾಯತ ಧರ್ಮದ ಬಗ್ಗೆ ಮಾತನಾಡಿಲ್ಲ. ನೀವು ಕೇಳಿದ್ದಕ್ಕಷ್ಟೇ ನಾನು‌ಹೇಳಿದ್ದು. ನನ್ನದು ಯಾವುದೇ ಪೊಲಿಟಿಕಲ್ ಅಜೆಂಡಾ ಇಲ್ಲ. ಇದರಲ್ಲಿ ಯಾವ ರಾಜಕೀಯ ಉದ್ದೇಶವಿಲ್ಲ. ಯಡಿಯೂರಪ್ಪ ಬಹಳ ದೊಡ್ಡ ನಾಯಕರು. ನಾನು ‌ನಾಯಕ ಅಂತ ಹೇಳೋಕೆ ಆಗಲ್ಲ. ಜನ ಯಾರನ್ನ ಬಯಸುತ್ತಾರೆ ಅವರು ನಾಯಕರಾಗ್ತಾರೆ. ನಮ್ಮ ನಡುವೆ ಯಾವುದೇ ಭಿನ್ನಾಬಿಪ್ರಾಯ ಇರಲಿಲ್ಲ. ತಾತ್ವಿಕ ಭಿನ್ನಾಬಿಪ್ರಾಯಗಳಿದ್ದವಷ್ಟೇ ನಮ್ಮ ಅವರ ನಡುವೆ ತಾತ್ವಿಕ ಸ್ವರೂಪ ಬೇರೆ ಇತ್ತು. ಹಾಗಾಗಿ ಹಿಂದೆ ಆ ರೀತಿ ತಪ್ಪು ಭಾವನೆ ಹೋಗಿದೆ ಎಂದು ಎಂಬಿ ಪಾಟೀಲ್ ತಿಳಿಸಿದರು.

ವೀರಶೈವ ಲಿಂಗಾಯತ ಧರ್ಮಕ್ಕೆ ಶಿಫಾರಸ್ಸು ಕಳಿಸಿದ್ದರು. ನಾಗಮೋಹನ್ ದಾಸ್ ಕಮಿಟಿ ಕೂಡ ಕೊಟ್ಟಿತ್ತು. ಶಾಮನೂರು ವೀರಶೈವ ಲಿಂಗಾಯತ ಅನ್ನಬಹುದು. ನಾವು ಬಸವತತ್ವ ಲಿಂಗಾಯತ ಅನ್ನಬಹುದು. ನನ್ನಿಂದ ಪ್ರತ್ಯೇಕ‌ಧರ್ಮದ ಹೋರಾಟ ಪ್ರಾರಂಭವಾಗಲಿಲ್ಲ. ಲಿಂಗಾಯತ ಸ್ವತಂತ್ರ್ಯ ಧರ್ಮದ ಬೇಡಿಕೆ ಇಂದಿನದಲ್ಲ. ಸ್ವಾತಂತ್ರ್ಯಕ್ಕೂ ಮುನ್ನವೂ ಅದು ಇತ್ತು. ನಾನು ಪ್ರತ್ಯೇಕ‌ಧರ್ಮದ ಹೋರಾಟ ಹುಟ್ಟು ಹಾಕಿದವನಲ್ಲ. ಹಿಂದಿನದನ್ನೇ ನಾವು ಮುಂದುವರಿಸಿದ್ದೇವೆ ಅಷ್ಟೇ ಎಂದು ಮಾಜಿ ಸಚಿವ ಎಂ.ಬಿ.ಪಾಟೀಲ್  ಸ್ಪಷ್ಟನೆ ನೀಡಿದರು.

ನಾನು ಯಾವುದೇ ಸಿಎಂ ಹುದ್ದೆಗೆ ಟವೆಲ್ ಹಾಕಿಲ್ಲ

ನಾನು ಯಾವುದೇ ಸಿಎಂ ಹುದ್ದೆಗೆ ಟವೆಲ್ ಹಾಕಿಲ್ಲ. ನಮ್ಮ ಪಕ್ಷದಲ್ಲಿ ಅಂತಹ ವ್ಯವಸ್ಥೆಯಿಲ್ಲ. ಪಕ್ಷದಲ್ಲಿ‌ ಹೈಕಮಾಂಡ್, ವರಿಷ್ಠರು ನಿರ್ಧಾರ ತೆಗೆದುಕೊಳ್ತಾರೆ. ನಾನು ಸಿಎಂ ಸ್ಥಾನಕ್ಕೆ ಎಲ್ಲೂ ಬೇಡಿಕೆ ಇಟ್ಟಿಲ್ಲ ಎಂದು ಎಂ.ಬಿ ಪಾಟೀಲ್ ತಿಳಿಸಿದರು.

ENGLISH SUMMARY…

“No demand for separate Lingayath Religion”: Former Minister M.B. Patil
Bengaluru, September 3, 2021 (www.justkannada.in): “I did not speak about the Lingayath separate religion, nor there is any struggle for it,” opined former minister M.B. Patil.
Addressing a press meet in Bengaluru today he informed that there are so many sub castes within the Lingayath, Veerashaiva and Panchamasali. “There are totally 99 sub castes and we had demanded for a separate religion by joining all the 99 sub castes and Veerashaivas. I never demanded for a separate religion. The media has misquoted my views. What is the problem if we all join together?” he questioned.
Keywords: Separate religion/ struggle/ no fight/ former Minister M.B. Patil

Key words: Lingayatha – separate- religion-no  fight-  Former Minister- MB Patil