ಮೈಸೂರು,ಆ,20,2020(www.justkannada.in): ಸ್ವಚ್ಚ ಸರ್ವೇಕ್ಷಣಾ ಅಭಿಯಾನದಡಿ ಸ್ವಚ್ಛ ನಗರಗಳ ಫಲಿತಾಂಶ ಪ್ರಕಟವಾಗಿದ್ದು 3 ರಿಂದ 10 ಲಕ್ಷ ಜನಸಂಖ್ಯೆಯುಳ್ಳ ನಗರಗಳ ವಿಭಾಗದಲ್ಲಿ ಸಾಂಸ್ಕೃತಿಕ ನಗರಿ ಮೈಸೂರು ಮೊದಲ ಸ್ಥಾನ ಪಡೆದಿದೆ.
3ರಿಂದ 10 ಲಕ್ಷ ಜನಸಂಖ್ಯೆಯುಳ್ಳ ಸ್ವಚ್ಚ ನಗರಗಳ ಪೈಕಿ ಮೈಸೂರಿಗೆ ಮೊದಲ ಸ್ಥಾನ ಲಭಿಸಿದೆ. ಇನ್ನು ಉತ್ತಮ ಸುಸ್ಥಿರ ನಗರಗಳ ಪೈಕಿ ಕರ್ನಾಟಕದ ಬೆಂಗಳೂರಿಗೆ ಮೊದಲ ರ್ಯಾಂಕ್ ಬಂದಿದೆ. ಈ ನಡುವೆ ಒಂದು ಲಕ್ಷ ಜನಸಂಖ್ಯೆ ಹೊಂದಿರುವ ನಗರಗಳ ಪೈಕಿ ಇಂದೋರ್ ಗೆ ಮೊದಲ ಸ್ಥಾನ ಲಭಿಸಿದ್ದು ಈ ಬಾರಿಯೂ ನಂ1 ಪಟ್ಟ ಉಳಿಸಿಕೊಳ್ಳುವಲ್ಲಿ ಮಧ್ಯಪ್ರದೇಶದ ಇಂದೋರ್ ಯಶಸ್ವಿಯಾಗಿದೆ.
ಈ ಪಟ್ಟಿಯಲ್ಲಿ ಗುಜರಾತ್ ನ ಸೂರತ್ ಎರಡನೇ ಸ್ಥಾನ ಪಡೆದರೇ ಮಹಾರಾಷ್ಟ್ರದ ನವಿ ಮುಂಬೈ ಮೂರನೇ ಸ್ಥಾನ ಬಾಚಿಕೊಂಡಿದೆ.
ಒಂದು ಲಕ್ಷ ಮೇಲ್ಪಟ್ಟ ಜನಸಂಖ್ಯೆ ನಗರಗಳ ಪೈಕಿ ಮುಂಬೈನ ಮೂರು ನಗರಗಳಿಗೆ ಸ್ಥಾನ ಸಿಕ್ಕಿದೆ. ಮಹಾರಾಷ್ಟ್ರದ ಕರಾಡ್ ಮೊದಲ ಸ್ಥಾನ ಪಡೆದಿದ್ದು, ಮಹಾರಾಷ್ಟ್ರದ ಸಾಸ್ವಾಡ್ ಗೆ ಎರಡನೇ ಸ್ಥಾನ ಹಾಗೂ ಮಹಾರಾಷ್ಟ್ರದ ಲೋನವಾಲ ಮೂರನೇ ಸ್ಥಾನ ಲಭಿಸಿದೆ.
Key words: List -clean city- swach sarvekshan abhiyan- Mysore -first