ಬೆಂಗಳೂರು,ನವೆಂಬರ್,14,2020(www.justkannada.in) : ಸಾರಿಗೆ ನೌಕರರು ಪ್ರತಿ ತಿಂಗಳು ಸಂಬಳ ಬಂದ್ರೇ ಖುಷಿಯಾಗುತ್ತಾರೆ. ಸಂಬಳ ನೀಡದಿದ್ದಾಗ ಸಹಜವಾಗಿ ಅಸಮಾಧಾನ ಪಡುತ್ತಾರೆ. ಕೊರೋನಾದಿಂದ ಜನ ಸರ್ಕಾರಿ ಬಸ್ ಗಳಲ್ಲಿ ಓಡಾಡುತ್ತಿಲ್ಲ. ಈಗ ಬರುವ ಹಣ ಡೀಸಲ್ ಗೆ ಸರಿಹೊಂದುತ್ತೆ. ಹೀಗಾಗಿ ಸಂಬಳ ವಿಳಂಬವಾಗಿದೆ. ಮೂರ್ನಾಲ್ಕು ದಿನಗಳಲ್ಲಿ ಸ್ವಲ್ಪ ಪ್ರಮಾಣದಲ್ಲಿಯಾದ್ರೂ ಸಂಬಳ ಕೊಡಿಸುತ್ತೇನೆ ಎಂದು ಬೆಳಗಾವಿಯಲ್ಲಿ ಡಿಸಿಎಂ,ಸಾರಿಗೆ ಸಚಿವ ಲಕ್ಷ್ಮಣ ಸವದಿ ಹೇಳಿದ್ದಾರೆ.
ಬರ್ತಾಯಿರುವ ಆದಾಯ ಬರೀ ಡೀಸೆಲ್ ಗೆ ಸಾಕಾಗುತ್ತಿದೆ
ಸಾರಿಗೆ ನೌಕರರ ಸಂಬಳ ವಿಳಂಬದ ಬಗ್ಗೆ ಸಚಿವ ಲಕ್ಷ್ಮಣ ಸವದಿ ಮಾತನಾಡಿ, ಸಾರಿಗೆ ನೌಕರರು ಅಳಲನ್ನು ನಾನು ಒಪ್ಪಿಕೊಳ್ಳುತ್ತೇನೆ. ದುರ್ದೈವದಿಂದ ಸಂಬಳ ನೀಡಲು ಆಗಿಲ್ಲ. ಎಂಟು ತಿಂಗಳಿಂದ ಕೊರೊನಾ ಬಂದಿದ್ದು, ಮೊದಲ ಎರಡು ತಿಂಗಳು ಸರ್ಕಾರದಿಂದ ಸಂಬಳ ನೀಡಿದ್ದೇವೆ. ಆದರೆ, ಬಸ್ ನಲ್ಲಿ ಯಾರು ಜನ ಬರ್ತಾಯಿಲ್ಲ. ಹೀಗಾಗಿ, ಬರ್ತಾಯಿರುವ ಆದಾಯ ಬರೀ ಡೀಸೆಲ್ ಗೆ ಸಾಕಾಗುತ್ತಿದೆ ಎಂದರು.
ಪ್ರತಿ ತಿಂಗಳು 325 ಕೋಟಿ ಸಂಬಳಕ್ಕೆ ಹಣ ಬೇಕು
ಈ ಕಾರಣಕ್ಕೆ ಸರ್ಕಾರಕ್ಕೆ ಸಂಬಳ ನೀಡುವಂತೆ ಪ್ರಸ್ತಾವನೆ ಕಳುಹಿಸಿದ್ದೇವು. ಪ್ರತಿ ತಿಂಗಳು 325 ಕೋಟಿ ಸಂಬಳಕ್ಕೆ ಹಣ ಬೇಕು. ಇನ್ನೂ ಮೂರು ತಿಂಗಳು ಸರ್ಕಾರವೇ ಹಣ ಕೊಡಬೇಕು ಅಂತಾ ಪ್ರಸ್ತಾವನೆ ಸಲ್ಲಿಸಿದ್ದೇವೆ. ಅಲ್ಲದೆ ಮೂರ್ನಾಲ್ಕು ದಿನಗಳಲ್ಲಿ ಸಿಎಂಗೆ ಮನವರಿಕೆ ಮಾಡಿಕೊಟ್ಟು ಸಂಬಳ ನೀಡಲು ಮನವಿ ಮಾಡುತ್ತೇನೆ ಎಂದು ಸವದಿ ಹೇಳಿದ್ದಾರೆ.
ನಾವು ಕಳಿಸಿದ್ದ ಪ್ರಸ್ತಾವನೆ ವಾಪಾಸ್ ಬಂದಿದೆ
ಮೂರು ತಿಂಗಳಿಂದ ಸಂಬಳಕ್ಕಾಗಿ ಎರಡು ಬಾರಿ ಪ್ರಸ್ತಾವನೆ ಕಳುಹಿಸಿದ್ದೆವು. ಅದರಲ್ಲಿ ಎರಡು ಬಾರಿ ನಾವು ಕಳಿಸಿದ್ದ ಪ್ರಸ್ತಾವನೆ ವಾಪಾಸ್ ಬಂದಿದೆ. ಮತ್ತೇ ಈಗ ಪ್ರಸ್ತಾವನೆ ಕಳ್ಸಿದ್ದೇವೆ. ಶೇಕಡಾ 70ರಷ್ಟಾದ್ರೂ ಸರ್ಕಾರ ಹಣ ಕೊಟ್ರೇ ಉಳಿದಿದ್ದನ್ನ ಸಾಲ ಪಡೆದುಕೊಂಡಾದ್ರೂ ಸಂಬಳ ನೀಡುತ್ತೇವೆ. ಸರ್ಕಾರದಲ್ಲಿ ಆದಾಯದ ಕೊರತೆ ಇರುವುದಕ್ಕೆ ಮುಂದಕ್ಕೆ ಹಾಕುತ್ತಿದ್ದಾರೆ. ಈ ಸಂಬಂಧ ಅಧಿಕಾರಿಗಳ ಜತೆಗೆ ನಿರಂತರ ಸಂಪರ್ಕದಲ್ಲಿದ್ದೇನೆ ಎಂದು ತಿಳಿಸಿದ್ದಾರೆ.
key words : little-over-four-days-will-pay-salary-Transport- Minister-Lakshmana Sawadi