ಬೆಂಗಳೂರು,ಜು,15,2020(www.justkannada.in): ಕೊರೋನಾ ಹೆಚ್ಚಾಗುತ್ತಿರುವ ಹಿನ್ನೆಲೆ, ಬೆಂಗಳೂರು ಸೇರಿ ಕೆಲ ಜಿಲ್ಲೆಗಳಲ್ಲಿ ಲಾಕ್ ಡೌನ್ ಮಾಡಲಾಗಿದ್ದು ಪೊಲೀಸರಿಗೆ ಜನರು ಸಹಕರಿಸಬೇಕು. ಅನಗತ್ಯವಾಗಿ ಓಡಾಡಿದರೇ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಜನರಿಗೆ ಎಚ್ಚರಿಕೆ ನೀಡಿದರು.
ನಗರದಲ್ಲಿ ಇಂದು ಮಾಧ್ಯಮದ ಜೊತೆ ಮಾತನಾಡಿದ ಗೃಹ ಸಚಿವ ಬಸವರಾಜ ಬೊಮ್ಮಾಯಿ, ಬೆಂಗಳೂರು ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಲಾಕ್ಡೌನ್ಗೆ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಲಾಗಿದೆ. ಎಲ್ಲ ಕಡೆ ಬ್ಯಾರಿಕೇಟ್ ಹಾಕಿ ಸೂಕ್ತ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಂಡಿದ್ದೇವೆ. ಕಳೆದ ಬಾರಿಗಿಂತ ಈ ಬಾರಿಯ ಲಾಕ್ಡೌನ್ ಮಹತ್ವದ್ದು, ಬೆಂಗಳೂರು ಸೇರಿದಂತೆ ಐದು ಜಿಲ್ಲೆಗಳಲ್ಲಿ ಲಾಕ್ಡೌನ್ ಮಾಡಲಾಗಿದೆ ಎಂದು ತಿಳಿಸಿದರು.
ಇನ್ನು 12 ಗಂಟೆ ವರೆಗೆ ಮಾತ್ರ ಜನರಿಗೆ ಅವಶ್ಯ ವಸ್ತು ಖರೀದಿಸಲು ಅವಕಾಶ ನೀಡಲಾಗಿದೆ. 12 ಗಂಟೆ ನಂತರ ಲಾಕ್ ಡೌನ್ ನಿಯಮ ಉಲ್ಲಂಘಿಸಿದರೇ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ. ಲಾಕ್ಡೌನ್ ಯಶಸ್ವಿ ಆಗಬೇಕಾದರೆ ಜನರ ಸಹಕಾರ ಕೂಡಬೇಕು. ಜನರು ಸ್ವಯಂ ಪ್ರೇರಣೆ ಯಿಂದ ಲಾಕ್ಡೌನ್ ಮಾಡಬೇಕಿದೆ. ಅನಿವಾರ್ಯವಾದರೇ ಪೊಲೀಸ್ ಫೋರ್ಸ್ ಬಳಕೆ ಮಾಡಲಾಗುತ್ತದೆ. ಹೀಗಾಗಿ ಪೊಲೀಸ್ ಫೋರ್ಸ್ ಬಳಕೆ ಮಾಡದ ರೀತಿ ಜನರು ಸಹಕಾರ ನೀಡಬೇಕು ಎಂದು ಸಚಿವ ಬಸವರಾಜ ಬೊಮ್ಮಾಯಿ ಮನವಿ ಮಾಡಿದರು.
Key words: lock down-Home Minister -Basavaraja Bommai -warns -people