ಬೆಂಗಳೂರು, ಏಪ್ರಿಲ್ 30, 2020 (www.justkannada.in): ಸಿಎಂ ಯಡಿಯೂರಪ್ಪ ನೇತೃತ್ವದಲ್ಲಿ ನಡೆದ ಸಭೆ ಹೈಲೈಟ್ಸ್ ಇಂತಿದೆ…
ಪ್ರಧಾನಮಂತ್ರಿಗಳು ಕೊಟ್ಟಿರುವ ಸೂಚನೆ ಪ್ರಕಾರ ಮೇ 4 ನಂತರ ಏನೇನು ವಿನಾಯಿತಿ ಕೊಡಬೇಕು ಅಂತ ತಿಳಿಸುತ್ತೇವೆ.
ಕಂಟೋನ್ಮೆಂಟ್ ಜೋನ್ ಬಿಟ್ಟು ಬೇರೆಡೆಗೆ ಕೈಗಾರಿಕೆಗಳ ಆರಂಭಕ್ಕೆ ತೀರ್ಮಾನ
ಹಂತ ಹಂತವಾಗಿ ವಿನಾಯಿತಿ ನೀಡುವ ಕುರಿತು ಮೂರನೇ ತಾರೀಖಿನ ನಂತರ ನಿರ್ಧಾರ ಮಾಡ್ತೀವಿ
ಕೊರೋನಾ ಹೋಗೋದು ಇನ್ನೂ ಮೂರ್ನಾಲ್ಕು ತಿಂಗಳು ಆಗಬಹುದು. ಹೀಗಾಗಿ ಆರ್ಥಕ ಪರಿಸ್ಥಿತಿ ಕೂಡಾ ನಾವು ನೋಡಿಕೊಳ್ಳಬೇಕಿದೆ.
ಸದ್ಯ ದೊಡ್ಡ ದೊಡ್ಡ ಹೋಟೆಲ್, ಮಾಲ್ ಗಳನ್ನು ತೆರೆಯುವ ಯೋಚನೆ ನಮ್ಮ ಮುಂದೆ ಇಲ್ಲ. ರಾಜ್ಯದ ಮೂಲೆ ಮೂಲೆಗೆ ಸಂಚರಿಸಿ ಸರ್ಕಾರದ ಗಮನ ಸೆಳಿದಿದ್ದಕ್ಕೆ ಮಾದ್ಯಮಕ್ಕೆ ಧನ್ಯವಾದಗಳು
ಸಾರ್ವಜನಿಕರು ಭಯಭೀತರಾಗುವ ಸುದ್ದಿ ಪ್ರಸಾರ ಮಾಡದೇ ಸಹಕರಿಸಿ ಒಂದು ಮಾದ್ಯಗಳಿಗೆ ಪ್ರಾರ್ಥನೆ ಮಾಡ್ತೀನಿ. ಕರೋನಾ ವಿರುದ್ದ ಸಾರ್ವಜನಿಕರಿಗೆ ಆತ್ಮಸ್ಥೈರ್ಯ ತುಂಬುವ ಸುದ್ದಿ ಬಿತ್ತರಿಸಿ.