ತಮ್ಮ ತಮ್ಮ ಊರುಗಳತ್ತ ಮುಖ ಮಾಡಿದ ಜನ: ಮೈಸೂರು ಬಸ್ ನಿಲ್ದಾಣ ಫುಲ್ ಬ್ಯುಸಿ…

ಮೈಸೂರು,ಏಪ್ರಿಲ್,26,2021(www.justkannada.in):  ಕೊರೋನಾ ತಡೆಗಾಗಿ ನಾಳೆಯಿಂದ 14 ದಿನಗಳ ಕಾಲ ಜನತಾ ಕರ್ಫ್ಯೂ ಜಾರಿ ಮಾಡಿ ರಾಜ್ಯ ಸರ್ಕಾರ ಘೋಸಿದಿದ್ದು ಈ ಹಿನ್ನೆಲೆಯಲ್ಲಿ ಸಾರಿಗೆ ವ್ಯವಸ್ಥೆ ಬಂದ್ ಆಗಲಿದೆ. ಹೀಗಾಗಿ ಜನರು ತಮ್ಮ ತಮ್ಮ ಊರಿನತ್ತ ತೆರಳಲು ಬಸ್ ನಿಲ್ದಾಣಕ್ಕೆ ಲಗ್ಗೆ ಇಡುತ್ತಿದ್ದಾರೆ.jk

ನಾಳೆಯಿಂದ ಲಾಕ್ ಡೌನ್ ಹಿನ್ನೆಲೆ.ಜನರು ತಮ್ಮ ತಮ್ಮ ಊರುಗಳತ್ತ ಮುಖ ಮಾಡುತ್ತಿದ್ದು, ಸಾರಿಗೆ ಸಂಚಾರ ಬಂದ್ ಆಗುವ 24ಗಂಟೆಗಳ ಮುಂಚೆಯೇ ಜನರು ಪಟ್ಟಣ ಬಿಡುತ್ತಿದ್ದಾರೆ. ಹೊರ ಜಿಲ್ಲೆ, ಹೊರ ರಾಜ್ಯದ ಬಸ್ ಸಂಚಾರ ಬಂದ್ ಹಿನ್ನೆಲೆ ಹೊರ ಭಾಗಗಳಿಗೆ ತೆರಳುತ್ತಿರುವವರ ಸಂಖ್ಯೆಯೇ ಹೆಚ್ಚಾಗಿದ್ದು, ಮೈಸೂರಿನಿಂದ ಗ್ರಾಮೀಣ ಭಾಗಕ್ಕೆ ತೆರಳುತ್ತಿರುವ ಬಸ್ ಗಳು ಹೌಸ್ ಫುಲ್ ಆಗುತ್ತಿವೆ.lockdown-down-people-mysore-bus-stand-full-busy

144 ಸೆಕ್ಷನ್ ಜಾರಿ ಹಿನ್ನೆಲೆ KSRTC ಬಸ್ ನಿಲ್ದಾಣದಲ್ಲಿ ಬಸ್ ಸಂಚಾರ, ಜನರ ಓಡಾಟ ವಿರಳವಾಗಿತ್ತು. ಇದೀಗ ಲಾಕ್ ಡೌನ್ ಘೋಷಣೆ ಬೆನ್ನಲ್ಲೆ ಕೈಗಳಲ್ಲಿ ಬ್ಯಾಗ್ ಹಿಡಿದು, ಹೆಗಲ ಮೇಲೆ ಬ್ಯಾಗ್ ಹೊತ್ತು  ಜನರು  ಮೈಸೂರು ಖಾಲಿ ಮಾಡುತ್ತಿದ್ದು ಇದರಿಂದಾಗಿ ಮೈಸೂರು ಬಸ್ ನಿಲ್ದಾಣ ಜನರಿಂದ ಫುಲ್ ಬ್ಯುಸಿಯಾಗಿದೆ.

Key words: Lockdown down-people -Mysore Bus stand-Full Busy.