ಬೆಂಗಳೂರು,ಮಾರ್ಚ್,22,2021(www.justkannada.in): ರಾಜ್ಯದಲ್ಲಿ ಸದ್ಯಕ್ಕೆ ಲಾಕ್ ಡೌನ್ ಜಾರಿಯಾಗುವುದಿಲ್ಲ. ಸದ್ಯ ಸೆಮಿ ಲಾಕ್ ಡೌನ್, ಲಾಕ್ ಡೌನ್ ಅಗತ್ಯವಿಲ್ಲ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಸ್ಪಷ್ಟನೆ ನೀಡಿದ್ದಾರೆ.
ಈ ಕುರತು ಇಂದು ಮಾಧ್ಯಮಗಳ ಜತೆ ಮಾತನಾಡಿದ ಸಚಿವ ಡಾ.ಕೆ.ಸುಧಾಕರ್, ರಾಜ್ಯದ ಜನರು ಲಾಕ್ ಡೌನ್ ಬಗ್ಗೆ ಸುಳ್ಳುಸುದ್ದಿಗೆ ಕಿವಿಕೊಡಬಾರದು .ಸೆಮಿ ಲಾಕ್ ಡೌನ್ ಬಗ್ಗೆ ಸರ್ಕಾರವೇ ಸ್ಪಷ್ಟನೆ ನೀಡುತ್ತಿದೆ. ಸದ್ಯಕ್ಕೆ ಆ ರೀತಿಯ ಯಾವುದೇ ನಿರ್ಧಾರವನ್ನು ಸರ್ಕಾರ ನಿರ್ಧರಿಸಿಲ್ಲ. ಬದಲಾಗಿ ಕೊರೋನಾ 2ನೇ ಅಲೆಯ ನಿಯಂತ್ರಣಕ್ಕಾಗಿ ಕಠಿಣ ನಿಯಮಗಳ ಕುರಿತು ಚರ್ಚೆ ಮಾಡಲಾಗುತ್ತದೆ ಎಂದರು.
ಸಭೆ, ಸಮಾರಂಭಗಳಲ್ಲಿ ಮಾಸ್ಕ್ ಧರಿಸುವುದು ಕಡ್ಡಾಯವಾಗಿದೆ. ಅಂತರ ಕಾಪಾಡದೇ ಕಾರ್ಯಕ್ರಮಗಳನ್ನು ಆಯೋಜಿಸುವವರ ವಿರುದ್ಧವೂ ಕ್ರಮ ಕೈಗೊಳ್ಳಲಾಗುತ್ತದೆ. ಮಾಸ್ಕ್ ಹಾಕದಿದ್ದರೇ ಮಾರ್ಷಲ್ ಗಳ ಮೂಲಕ 250 ದಂಡ ಹಾಕಲಾಗುತ್ತದೆ ಎಂದು ಸಚಿವ ಸುಧಾಕರ್ ತಿಳಿಸಿದ್ದಾರೆ.
ರಾಜ್ಯ ರಾಜಧಾನಿಯಲ್ಲಿ ಕೊರೋನಾ ಎರಡನೇ ಅಲೆ ಆರಂಭಗೊಂಡಿದೆ. ಇಂತಹ ಕೊರೋನಾ ನಿಯಂತ್ರಣವನ್ನು ಕಠಿಣ ಕಾನೂನಿನ ಮೂಲಕ ನಿಯಂತ್ರಣಕ್ಕೆ ತರಲಾಗುತ್ತದೆ. ಸಾರ್ವಜನಿಕ ಸ್ಥಳದಲ್ಲಿ ಮಾಸ್ಕ್ ಹಾಕೋದು ಕಡ್ಡಾಯ ಎಂದು ಎಚ್ಚರಿಕೆ ನೀಡಿದ್ದಾರೆ.
ENGLISH SUMMARY….
Health Minister Dr. K. Sudhkar clarifies on lockdown, semi-lockdown
Bengaluru, Mar. 22, 2021 (www.justkannada.in): Health and Medical Education Minister D. K. Sudhakar today clarified that there are no plans as of now regarding imposing lockdown or semi-lockdown in the state.
Speaking to the press persons today Minister Dr. K. Sudhakar requested the people not to heed to rumors. ‘We don’t have any plans of lockdown as of now. But discussions of imposing tough rules following the onset of 2nd wave of COVID-19 pandemic will be held,” he said.
He also requested the people to compulsorily wear masks during functions and celebrations. He also warned of action against the organizers who conduct programs without taking any precautionary measures. “A sum of Rs. 250 fine will be imposed on those who won’t wear masks,” he said.
Keywords: Health Minister Dr. K. Sudhakar/ Rs.250 fine/ mask compulsory/ No lockdown/ semi-lockdown
Key words: Lockdown-Semi Lockdown-Health Minister -Dr.K. sudhakar-clear