ಕಲ್ಬುರ್ಗಿ,ಜನವರಿ,4,2022(www.justkannada.in): ರಾಜ್ಯದಲ್ಲಿ ಕೊರೋನಾ ಒಮಿಕ್ರಾನ್ ಹೆಚ್ಚಳವಾಗುತ್ತಿದ್ದು, ಸೋಂಕು ತಡೆ ಸಂಬಂಧ ಇಂದು ತಜ್ಞರ ಸಭೆ ಇದೆ. ಸಭೆಯಲ್ಲಿ ಲಾಕ್ ಡೌನ್, ಸೆಮಿ ಲಾಕ್ ಡೌನ್ ಬಗ್ಗೆ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದರು.
ಕಲ್ಬುರ್ಗಿಯಲ್ಲಿ ಮಾಧ್ಯಮಗಳ ಜತೆ ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ, ಕೋವಿಡ್ ನಿಯಮ ಪಾಲಿಸುವ ಮೂಲಕ ಜನರು ಸಹಕರಿಸಬೇಕು. ಜನರು ಸಹಕರಿಸಿದರೇ ಮಾತ್ರ ಕೋವಿಡ್ ನಿಯಂತ್ರಣ ಸಾಧ್ಯ. ತಜ್ಞರ ಜತೆ ಚರ್ಚಿಸಿ ಮುಂದಿನ ನಿರ್ಧಾರ ಕೈಗೊಳ್ಳುತ್ತೇವೆ. ಔಷಧ ಸೇರಿ ಎಲ್ಲಾ ವ್ಯವಸ್ಥೆ ಮಾಡಿಕೊಳ್ಳಲಾಗಿದೆ ಎಂದರು.
ಶಾಲಾ ಕಾಲೇಜು ಬಂದ್ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಸಿಎಂ ಬೊಮ್ಮಾಯಿ, ತಜ್ಞರ ಸಲಹೆ ಬಳಿಕ ಶಾಲೆ ಬಂದ್ ಬಗ್ಗೆ ನಿರ್ಧಾರ ಕೈಗೊಳ್ಳುತ್ತೇವೆ. ಕೊರೋನಾ ತಡೆಗೆ ಮತ್ತಷ್ಟು ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ. ರಾಜ್ಯದಲ್ಲಿ ಕಟ್ಟಚ್ಚರ ವಹಿಸಲಾಗಿದೆ. ಗಡಿಯಲ್ಲಿ ಹೆಚ್ಚಿನ ಪೊಲೀಸ್ ಸಿಬ್ಬಂದಿ ನಿಯೋಜನೆ ಮಾಡಲಾಗಿದೆ ಎಂದರು.
Key words: Lockdown-state-Decision – today- meeting- about -semi-lockdown-CM Basavaraja Bommai.
ENGLISH SUMMARY…
‘Decision on imposition of lockdown, semi-lockdown in today’s meeting’: CM Bommai
Kalaburagi, January 4, 2022 (www.justkannada.in): “The number of Omicron cases in the state is increasing there is a meeting today to know about the situation, where we will decide whether to impose lockdown or semi-lockdown,” said Chief Minister Basavaraj Bommai.
Speaking to the press persons at Kalaburagi today, he informed that the people should cooperate with the government by strictly following COVID-appropriate behavior. “The pandemic can be controlled only if people cooperate. However, we will decide after discussing it with the experts. However, we have made all arrangements concerning medicine, treatment, etc.,” he said.
In his reply on the closing of schools and colleges, the Chief Minister said the government would decide after availing expert advice. However, he also informed that tough rules would be initiated. “High alert has been taken in the State, police security and strict vigil has been taken in the border areas,” he added.
Keywords: COVID-19 Pandemic/ Chief Minister Bommai/ meeting/ lockdown/