ರಾಜ್ಯದ ಆಟೊಮೊಬೈಲ್‌ ಕ್ಷೇತ್ರದಲ್ಲಿ ಎಲೆಕ್ಟ್ರಿಕ್‌ ಕ್ರಾಂತಿಗೆ ದಿನಗಣನೆ-ಡಿಸಿಎಂ ಡಾ.ಸಿ.ಎನ್.‌ಅಶ್ವತ್ಥನಾರಾಯಣ್

 

ಬೆಂಗಳೂರು,ಏಪ್ರಿಲ್,6,2021(www.justkannada.in):  ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನು ಎಲೆಕ್ಟ್ರೀಕರಣ ಮಾಡುವುದು ಸೇರಿದಂತೆ ಆಡಳಿತ, ಅಭಿವೃದ್ಧಿ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲೂ ತಂತ್ರಜ್ಞಾನವನ್ನು ಪರಿಣಾಮಕಾರಿಯಾಗಿ ಬಳಕೆ ಮಾಡಿಕೊಳ್ಳಲಾಗುವುದು ಎಂದು ವಿಜ್ಞಾನ-ತಂತ್ರಜ್ಞಾನ, ಐಟಿ-ಬಿಟಿ ಸಚಿವರೂ ಆದ ಉಪ ಮುಖ್ಯಮಂತ್ರಿ ಡಾ.ಸಿ.ಎನ್.‌ಅಶ್ವತ್ಥನಾರಾಯಣ ಹೇಳಿದರು.Illegally,Sand,carrying,Truck,Seized,arrest,driver

ಜಪಾನ್ ನಲ್ಲಿ‌ ನಡೆಯುತ್ತಿರುವ ಜಾಗತಿಕ ತಂತ್ರಜ್ಞಾನ ಆಡಳಿತ ಶೃಂಗಸಭೆಯಲ್ಲಿ ವರ್ಚುಯಲ್ ನಲ್ಲಿ ಪ್ರಧಾನ ಭಾಷಣ ಮಾಡಿದ  ಡಿಸಿಎಂ ಅಶ್ವಥ್ ನಾರಾಯಣ್,  ಈಗಾಗಲೇ ಬೆಂಗಳೂರು ಮೆಟ್ರೋ ವಿದ್ಯುತ್‌ನಿಂದಲೇ ನಡೆಯುತ್ತಿದೆ. ಮುಂದಿನ ದಿನಗಳಲ್ಲಿ ಇತರೆ ಸಾರ್ವಜನಿಕ ಸಾರಿಗೆ ವ್ಯವಸ್ಥೆಯೂ ಎಲೆಕ್ಟ್ರೀಕರಣ ಆಗಲಿದೆ. ಜತೆಗೆ, ಸರಕಾರದ ಮಟ್ಟದಲ್ಲೂ ಪೆಟ್ರೋಲ್-ಡೀಸೆಲ್‌ ವಾಹನಗಳಿಗೆ ಬದಲು ಎಲೆಕ್ಟ್ರಿಕ್‌ ವಾಹನಗಳನ್ನೇ ಬಳಸಲಾಗುವುದು. ಎಲೆಕ್ಟ್ರಿಕ್‌ ವಾಹನ ಕ್ರಾಂತಿಗೆ ದಿನಗಣನೆ ಶುರುವಾಗಿದೆ ಎಂದರು.

ಸಾಂಪ್ರದಾಯಿಕ ಮೂಲಗಳ ಜತೆಗೆ ಅಸಂಪ್ರದಾಯಿಕ ಮೂಲಗಳಿಂದ ಕರ್ನಾಟಕ ಉತ್ತಮ ರೀತಿಯಲ್ಲಿ ವಿದ್ಯುತ್‌ ಉತ್ಪಾದನೆ ಮಾಡುತ್ತಿದ್ದು, ರಾಜ್ಯದಲ್ಲಿ ವಿದ್ಯುತ್‌ ಕೊರತೆ ಇಲ್ಲ. ಹೀಗಾಗಿ ಕೈಗಾರಿಕೆ ಹೂಡಿಕೆಗೆ ಇದಕ್ಕಿಂತ ಉತ್ತಮ ರಾಜ್ಯ ಮತ್ತೊಂದಿಲ್ಲ. ವಿದ್ಯುತ್‌ ಸ್ವಾವಲಂಭನೆ ಸಾಧಿಸುವ ಮೂಲಕ ರಾಜ್ಯದ ಆಟೋಮೊಬೈಲ್‌ ಕ್ಷೇತ್ರದಲ್ಲಿ ದೊಡ್ಡ ಕ್ರಾಂತಿಯೇ ಆಗುತ್ತಿದೆ. ಇನ್ನು ಕೆಲ ದಿನಗಳಲ್ಲಿಯೇ ರಾಜ್ಯದ ಉದ್ದಗಲಕ್ಕೂ ಎಲೆಕ್ಟ್ರಿಕ್‌ ವಾಹನಗಳೇ ರಸ್ತೆಗಳ ಮೇಲೆ ರಾರಾಜಿಸಲಿವೆ ಎಂದರು ಉಪ ಮುಖ್ಯಮಂತ್ರಿ.

ಎಲೆಕ್ಟ್ರಿಕ್‌ ವಾಹನ & ಇಆರ್‌&ಡಿ ನೀತಿ:

ಹೊಸ ತಲೆಮಾರಿನ ವಾಹನಗಳಿಗೆ ಪೂರಕವಾದ ಎಲ್ಲ ವ್ಯವಸ್ಥೆಗಳನ್ನು ರಾಜ್ಯ ಸರಕಾರ ಮಾಡಿದೆ. ಇಡೀ ದೇಶದಲ್ಲಿಯೇ ಮೊತ್ತ ಮೊದಲಿಗೆ ʼಎಲೆಕ್ಟ್ರಿಕ್‌ ವಾಹನ ನೀತಿʼಯನ್ನು ಜಾರಿಗೆ ತಂದ ರಾಜ್ಯವೆಂದರೆ ಕರ್ನಾಟಕ ಮಾತ್ರ. ಇದಕ್ಕೆ ಪೂರಕವಾಗಿ ಕೆಲ ದಿನಗಳ ಹಿಂದೆ ʼಇಆರ್‌&ಡಿʼ (ಎಂಜಿನಿಯರಿಂಗ್‌ ಸಂಶೋಧನೆ ಮತ್ತು ಅಭಿವೃದ್ಧಿ ನೀತಿ) ನೀತಿಯನ್ನು ಜಾರಿಗೆ ತರಲಾಗಿದೆ. ಇಂಥ ನೀತಿಯನ್ನು ಅಳವಡಿಸಿಕೊಂಡ ಭಾರತದ ಮೊದಲ ರಾಜ್ಯ ಕರ್ನಾಟವೇ ಆಗಿದೆ ಎಂದರು ಅವರು.

ಇನ್ನು ಕೆಲ ದಿನಗಳಲ್ಲಿಯೇ ಎಲ್ಲೆಲ್ಲೂ ಪೆಟ್ರೋಲ್‌ ಬಂಕ್‌ಗಳು ಇರುವಂತೆಯೇ ವಾಹನಗಳಿಗೆ ಬೇಕಾದ ಚಾರ್ಜಿಂಗ್‌ ಪಾಯಂಟ್‌ಗಳು ಹಾಗೂ ಬ್ಯಾಟರಿ ಬ್ಯಾಂಕ್‌ ಕಾಣಸಿಗಲಿವೆ. ನಮ್ಮಲ್ಲಿ ನೂರಕ್ಕೆ ನೂರರಷ್ಟು ವಿದ್ಯುತ್‌ ಸ್ವಾವಲಂಭನೆ ಇರುವುದರಿಂದ ಇದು ಸಾಧ್ಯವಾಗುತ್ತಿದೆ ಎಂದು ಡಾ.ಅಶ್ವತ್ಥನಾರಾಯಣ ನುಡಿದರು.

ಕರ್ನಾಟಕವನ್ನು ದೇಶದ ಅತ್ಯುತ್ತಮ ಕೈಗಾರಿಕಾ ನೆಲೆಯಾಗಿಸುವ ನಿಟ್ಟಿನಲ್ಲಿ ಸರಕಾರ ವಿದೇಶಿ ಬಂಡವಾಳ ಹೂಡಿಕೆ, ಆವಿಷ್ಕಾರ, ತಂತ್ರಜ್ಞಾನ, ಮೂಲಸೌಕರ್ಯಕ್ಕೆ ಹೆಚ್ಚು ಒತ್ತು ನೀಡಿದೆಯಲ್ಲದೆ, ವಿವಿಧ ನೀತಿಗಳನ್ನು ಜಾರಿಗೆ ತರುವ ಮೂಲಕ ಆಮೂಲಾಗ್ರ ಸುಧಾರಣೆಗಳನ್ನು ಜಾರಿಗೊಳಿಸಿದೆ. ಕೋವಿಡ್ಡೋತ್ತರ ಕಾಲದಲ್ಲಿ ರಾಜ್ಯದಲ್ಲಿ ಉದ್ಯೋಗಾವಕಾಶಗಳನ್ನು ಹೆಚ್ಚಿಸಲು ಸರಕಾರ ಅತ್ಯಗತ್ಯವಾದ ಎಲ್ಲ ಉಪ ಕ್ರಮಗಳನ್ನು ಕೈಗೊಂಡಿದ್ದು, ಆ ನಿಟ್ಟಿನಲ್ಲಿ ಕೆಲಸ ಮಾಡುತ್ತಿದೆ ಎಂದರು.Logistics,-EV adoption -- priority -sectors- DyCM- Dr. C.N.Ashwatha Narayana

ಮೂಲಸೌಕರ್ಯವೆಂದರೆ, ಮುಖ್ಯವಾಗಿ ವಿದ್ಯುತ್, ರಸ್ತೆ, ನೀರು ಇತ್ಯಾದಿಗಳನ್ನು ಆದ್ಯತೆಯ ಮೇರೆಗೆ ಒದಗಿಸುವುದು ಹಾಗೂ ಕೈಗಾರಿಕಾ ಪೂರಕ ವ್ಯವಸ್ಥೆ, ಹೂಡಿಕೆದಾರ ಸ್ನೇಹಿ ನೀತಿ ಇತ್ಯಾದಿಗಳ ಮೂಲಕ ಕರ್ನಾಟಕವು ಹೂಡಿಕೆದಾರರ ನೆಚ್ಚಿನ ತಾಣವಾಗಿದೆ ಎಂದರು ಡಿಸಿಎಂ.

ಶೃಂಗದಲ್ಲಿ ವರ್ಲ್ಡ್‌ ಎಕಾನಾಮಿಕ್ ಫೋರಂ ಕ್ರಿಸ್ಟೋಫ್‌ ವುಲ್ಫ್‌, ಬಿಸ್ನೆಸ್‌ ಎಕ್ಸ್‌ಪರ್ಟ್‌ ಆಂಡ್ರೆ ಆಂಡೋನಿಯನ್, ಟೆಕ್ನಾಲಜಿ ನಿಪುಣ ಯಾಶಿಫುಮಿ ಕಾಟೋ, ಲಾಜಿಸ್ಟಿಕ್ಸ್ ಪರಿಣಿತರಾದ ಮಾರಿಯಮ್‌ ಅಲ್-ಫೌಂಡ್ರೆ ಮುಂತಾದವರು ವರ್ಚುವಲ್ ಸಭೆಯಲ್ಲಿ ಪಾಲ್ಗೊಂಡು ತಮ್ಮ ವಿಚಾರಗಳನ್ನು ಮಂಡಿಸಿದರು.

ENGLISH SUMMARY…

Logistics, EV adoption are the priority sectors- DyCM Dr. C.N.Ashwatha Narayana

Bengaluru: The Government of Karnataka has a big focus towards last-mile delivery/logistics/commute space and EV (electric vehicle) adoption, Deputy Chief Minister Dr C.N.Ashwatha Narayana, who also holds the electronics, IT/Bt portfolio, said on Tuesday.

He was speaking as a panelist by participating virtually on ‘Governing Goods on the Move’ organized by the World Economic Forum as part of the “Global Technology Governance Summit 2021”.

The shift to electric mobility for instance has become necessary now more than ever due to the fast depletion of fossil fuels, increase in energy costs, the impact of transportation on the environment, and digital intervention. Industry, governments, and early adopters have succeeded in demonstrating that electric vehicles can deliver the practicality, sustainability, safety, and affordability characteristics expected from them, he explained.

Narayana said, “Mobile internet, automation, the internet of things (IoT), cloud computing, advanced genomics, renewable energy are some areas of innovation and technology that need to be adopted to bring about changes in ways of traditional systems of functioning,”

In addition, the government has fast-tracked the long-pending suburban train project, expanding the Metro train network in Bangalore and assisting last-mile logistics companies in their operations as they look at equipping more metro stations with rentable cycles and bikes and offer easy availability of shared 2/3/4 wheeler ride options for commuters, he informed.

India being a growing economy, needs to invest in robust logistics infrastructure and efficient supply chains. To support the vision of ‘Make in India’, logistics and supply chain can be improved and made more efficient, Narayana emphasized.

Institutions like the Indian Institute of Science (IISc) have developed a ‘Smart Factory’ called 4.0 India@IISc. GoK has partnered with the World Economic Forum to launch the Centre for Internet of Ethical Things. This center is aimed at being a sandbox for new emerging technologies and their applications and will bring together multi-stakeholders, he told.

Mr. André Andonian, Chairman, McKinsey & Company, Mr. Yoshifumi Kato, Chief Technology Officer, Denso, Ms. Mariam Al-Foudery, Group Chief Marketing Officer, Agility participated as panelists.

Key words: Logistics,-EV adoption — priority -sectors- DyCM- Dr. C.N.Ashwatha Narayana