ಎಲೆಕ್ಟ್ರಾನಿಕ್‌ ಮೀಡಿಯಾಗಳಲ್ಲಿ ಬಿತ್ತರವಾಗುತ್ತಿರುವ ಪ್ರಶ್ನಾವಳಿ ನಮ್ಮದ್ದಲ್ಲ : ಲೋಕಾ ಎಸ್ಪಿ ಸ್ಪಷ್ಟನೆ.

Questionnaire being aired in electronic media is not ours: Loka SP clarifies.

 

ಮೈಸೂರು, ನ.06,2024: (www.justkannada.in news) ಎಲೆಕ್ಟ್ರಾನಿಕ್‌ ಮೀಡಿಯಾಗಳಲ್ಲಿ ಬಿತ್ತರವಾಗುತ್ತಿರುವ ಪ್ರಶ್ನಾವಳಿಗಳಿಗೂ ಲೋಕಾಯುಕ್ತಕ್ಕೂ ಸಂಬಂಧವಿಲ್ಲ.  ಟಿವಿಗಳಲ್ಲಿ ಬರುತ್ತಿರುವ ಪ್ರಶ್ನೆಗಳು ನಮ್ಮದಲ್ಲ ಎಂದು ಮೈಸೂರು ಲೋಕಾಯುಕ್ತ ಎಸ್ಪಿ ಉದೇಶ್‌ ಸ್ಪಷ್ಟಪಡಿಸಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ಬೆಳಗ್ಗೆ ಲೋಕಾಯುಕ್ತ ಕಚೇರಿಗೆ ಆಗಮಿಸಿ ವಿಚಾರಣೆ ಪೂರ್ಣಗೊಳಿಸಿ ಸ್ಥಳದಿಂದ ತೆರಳಿದ ಬಳಿಕ ಲೋಕಾಯುಕ್ತ ಎಸ್ಪಿ ಉದೇಶ್‌ ಮಾದ್ಯಮಗಳ ಜತೆ ಔಪಚಾರಿಕವಾಗಿ ಮಾತನಾಡಿದರು.

ಈ ವೇಳೆ ಮಾದ್ಯಮಗಳಲ್ಲಿ ಸಿಎಂ ಸಿದ್ದರಾಮಯ್ಯ ಅವರ ವಿಚಾರಣೆ ಸಂಬಂಧ ಪ್ರಸಾರವಾಗುತ್ತಿರುವ ಸುದ್ಧಿಗಳು ಹಾಗೂ ಪ್ರಶ್ನಾವಳಿಗಳ ಬಗ್ಗೆ ಮುದ್ರಣ ಮಾದ್ಯಮದ ಪತ್ರಕರ್ತರು ಪ್ರಶ್ನಿಸಿದರು. ಆಗ ಇದಕ್ಕೆ ಪ್ರತಿಕ್ರಿಯೆಯಾಗಿ ಇದು ನಮ್ಮ ಪ್ರಶ್ನೆಗಳಲ್ಲ. ಟಿವಿಯವರ ಪ್ರಶ್ನೆಗಳು ಎಂದು ಉತ್ತರಿಸಿದರು.

ಮುಂದುವರಿದು, ಸಿಎಂ ಸಿದ್ದರಾಮಯ್ಯ ಅವರ ಹೇಳಿಕೆಯನ್ನ ವಿಡಿಯೋ ರೆಕಾರ್ಡ್ ಮಾಡಿಕೊಳ್ಳಲಾಗಿದೆ. ವಿಚಾರಣೆಯ ಬಹುತೇಕ ಹಂತಗಳು ಪೂರ್ಣಗೊಂಡಿವೆ. ಆದಾಗ್ಯೂ ಇನ್ನೂ ಹಲವಾರು ಕೆಲಸಗಳು ಬಾಕಿ ಉಳಿದಿದೆ. ಈ ಎಲ್ಲಾವನ್ನು ನಿಗಧಿಯ ಸಮಯದಲ್ಲಿ ಪೂರ್ಣಗೊಳಿಸಲಾಗುತ್ತದೆ ಎಂದರು.

ಪ್ರಕರಣಕ್ಕೆ ಸಂಬಂಧಿಸಿದ ಎಲ್ಲರ ಉತ್ತರಗಳನ್ನು ತಾಳೆ ಹಾಕಲಾಗುವುದು. ಒಂದೊಮ್ಮೆ ಏನಾದರು ಅನುಮಾನಗಳಿದ್ದಲ್ಲಿ ಮತ್ತೆ ನೋಟಿಸ್‌ ನೀಡಿ ವಿಚಾರಣೆಗೆ ಕರೆಯಲಾಗುತ್ತದೆ.

ಕೋರ್ಟ್‌ ಗೆ ವರದಿ:

ವಿಚಾರಣೆಯ ಅಂತಿಮ ವರದಿ ಸಲ್ಲಿಕೆಗೆ ಸಮಯಾವಕಾಶವಿದೆ. ಈ ನಡುವೆ ‌ ಪ್ರಕರಣದ ವಿಚಾರಣೆಯನ್ನು ಸಿಬಿಐಗೆ ವಹಿಸುವಂತೆ ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ಮಂಗಳವಾರ ನಡೆಸಿದ ಹೈಕೋರ್ಟ್ ನ. ೨೫ ರ ತನಕ ವಿಚಾರಣೆಯಲ್ಲಿನ ಪ್ರಗತಿ ಬಗ್ಗೆ ವರದಿ ಸಲ್ಲಿಸುವಂತೆ ಸೂಚಿಸಿದ್ದು, ಈ ಬಗ್ಗೆ ಲೋಕಾಯುಕ್ತ ಎಸ್ಪಿ ಉದೇಶ್‌ ರನ್ನು ಪ್ರಶ್ನಿಸಿದಾಗ ಕೋರ್ಟ್‌ ಸೂಚನೆ ಪಾಲಿಸಲಾಗುವುದು ಎಂದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿಚಾರಣೆ ವೇಳೆ ಲೋಕಾಯುಕ್ತ  ಡಿವೈಎಸ್ಪಿ ಮ್ಯಾಥ್ಯೂ ಥಾಮಸ್ ಹಾಗು ಇನ್ಸ್ ಪೆಕ್ಟರ್ ಲೋಕೇಶ್ ಜೊತೆಗಿದ್ದರು.

key words: Questionnaire, being aired in, electronic media, is not ours, Loka SP clarifies.

 

Questionnaire being aired in electronic media is not ours: Loka SP clarifies.